Advertisement

ಲಾಕ್‌ಡೌನ್‌ ಇದ್ದರೂ ಬಿಂದಾಸ್‌ ಸಂಚಾರ!

10:20 PM Jun 20, 2021 | Shreeraj Acharya |

ಶಿವಮೊಗ್ಗ: ಲಾಕ್‌ಡೌನ್‌ ತೆರವುಗೊಳ್ಳುವ ಮುಂಚೆಯೇ ತಾಲೀಮು ಎನ್ನುವಂತೆ ಸಾರ್ವಜನಿಕರ ಓಡಾಟ ಜೋರಾಗಿದೆ. ಸರ್ಕಾರದ ಈ ಹಿಂದಿನ ಆದೇಶದಂತೆ ಎರಡನೇ ಹಂತದ ಲಾಕ್‌ಡೌನ್‌ ಸೋಮವಾರ ಬೆಳಿಗ್ಗೆ 6 ಗಂಟೆಗೆ ಮುಕ್ತಾಯಗೊಳ್ಳಲಿದ್ದು, ಅದು ಮುಂದುವರಿಸುವ ಅಥವಾ ಅನ್‌ಲಾಕ್‌ ಮಾಡುವ ಕುರಿತು ಇನ್ನೂ ನಿರ್ಧಾರ ಆಗಬೇಕಿದೆ.

Advertisement

ಆದರೆ ಲಾಕ್‌ ಡೌನ್‌ ಜಾರಿಯಲ್ಲಿದ್ದರೂ ನಗರದಲ್ಲಿ ಜನರ ಹಾಗೂ ವಾಹನಗಳ ಓಡಾಟ ಭರದಿಂದ ಸಾಗಿದೆ. ಪೊಲೀಸರು ಕೂಡ ಕೈಚೆಲ್ಲಿ ಕುಳಿತಿದ್ದಾರೆ. ಅಲ್ಲಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕೂಡ ಸಾರ್ವಜನಿಕರೇ ತೆರವುಗೊಳಿಸಿ ಓಡಾಡುತ್ತಿದ್ದಾರೆ.

ಕುವೆಂಪು ರಸ್ತೆ ಸೇರಿದಂತೆ ಅನೇಕ ಕಡೆ ವಾಹನಗಳ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಅ ಧಿಕವಾಗಿದೆ. ಕೆಲ ಅಂಗಡಿಗಳನ್ನು ತೆರೆಯಲಾಗಿದೆ. ಅಲ್ಲಲ್ಲಿ ಗೂಡಂಗಡಿಗಳ ಬಾಗಿಲನ್ನೂ ತೆರೆಯಲಾಗುತ್ತಿದೆ. ಹೋಟೆಲ್‌ಗ‌ಳಲ್ಲಿ ಪಾರ್ಸೆಲ್‌ ನೀಡುವುದರ ಜೊತೆಗೆ ಸದ್ದಿಲ್ಲದೆ ಟೇಬಲ್‌ ಸರ್ವೀಸ್‌ ಕೂಡ ಆರಂಭವಾಗಿದೆ.

ಕುಟುನೆಪ ಹೇಳಿ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಎಂದಿನಂತೆ ಪಾರ್ಕ್‌ಗಳಲ್ಲಿ ಜನರು ವಾಕಿಂಗ್‌, ಆಟೋಟಗಳನ್ನು ಪುನರ್‌ ಆರಂಭಿಸಿದ್ದಾರೆ. ರಸ್ತೆಯಲ್ಲೂ ಕೂಡ ವಾಕಿಂಗ್‌ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಸಾಕಷ್ಟು ಕ್ರಮ ಕೈಗೊಂಡರೂ ಬದಲಾಗದ ಜನರ ವರ್ತನೆಯಿಂದ ಬೇಸತ್ತ ಪೊಲೀಸರು ಸಹ ಸುಮ್ಮನಿದ್ದಾರೆ. ಹೀಗಾಗಿ ಲಾಕ್‌ಡೌನ್‌ ಮುಗಿಯುವ ಮುನ್ನವೇ ಜನ ತಾವೇ ಅನ್‌ಲಾಕ್‌ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next