Advertisement

ಕೊರೊನಾದಿಂದ ಕವಲೇದುರ್ಗ ಮಠದ ಸಿದ್ದಲಿಂಗ ಶಿವಾಚಾರ್ಯ ಶ್ರೀ ಲಿಂಗೈಕ್ಯ

10:58 PM Jun 08, 2021 | Shreeraj Acharya |

ತೀರ್ಥಹಳ್ಳಿ: ಭುವನಗಿರಿ ಸಂಸ್ಥಾನ ಕವಲೇದುರ್ಗದ ಡಾ| ಶ್ರೀ ಸಿದ್ದಗಂಗ ಶಿವಾಚಾರ್ಯ ಸ್ವಾಮೀಜಿ (55) ಕೊರೊನಾ ಸೋಂಕಿನಿಂದ ಸೋಮವಾರ ಲಿಂಗೈಕ್ಯರಾದರು. ಹತ್ತು ದಿನಗಳ ಹಿಂದೆ ಶೀತ, ಸುಸ್ತು, ಜ್ವರ ಬಂದಿತ್ತು ಎನ್ನಲಾಗಿದೆ. ಆದರೆ ಅವರು ಸ್ವಾಭಾವಿಕವಾಗಿ ಬಂದ ಜ್ವರ ಎಂದು ಎಲ್ಲರಲ್ಲೂ ಧೈರ್ಯ ತುಂಬಿ ಮಠದಲ್ಲಿಯೇ ಇದ್ದರು. ಜ್ವರ ಇನ್ನಷ್ಟು ಹೆಚ್ಚಾದ್ದರಿಂದ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿದ್ದರು.

Advertisement

ಬಳಿಕ ಅವರಿಗೆ ಕೊರೊನಾ ಸೋಂಕು ದೃಢವಾಗಿತ್ತು. ನಂತರ ಪಟ್ಟಣದ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎರಡು, ಮೂರು ದಿನಗಳಿಂದ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದರಿಂದ ಶಿವಮೊಗ್ಗ ಖಾಸಗಿ ಆಸ್ಪತ್ರೆ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸೋಮವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಜೆಸಿ ಆಸ್ಪತ್ರೆಯಲ್ಲಿ ಶ್ರೀಗಳು ದಾಖಲಾದಾಗ ಪತ್ರಿಕೆ ಜೊತೆ ದೂರವಾಣಿ ಮೂಲಕ ಮಾತನಾಡಿ, ಶ್ರೀಗಳು ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ, ಸಿಬ್ಬಂದಿಯ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮಾನವೀಯತೆ ಮೆರೆದ ಶ್ರೀಗಳು: ಕೊರೊನಾ ಸೋಂಕು ಬಂದ ತಕ್ಷಣ ತಮ್ಮ ಸಿಬ್ಬಂದಿಗೆ ಮಾಹಿತಿ ನೀಡಿ ತಮ್ಮ ಜತೆ ಇದ್ದ ಓರ್ವ ಶಿಷ್ಯನ ಮನೆ ಸೀಲ್‌ ಡೌನ್‌ ಮಾಡಿದ್ದು, ಅವರ ಕುಟುಂಬಕ್ಕೆ ಶ್ರೀಗಳು 15 ಸಾವಿರ ಧನ ಸಹಾಯ ಕಳುಹಿಸಿಕೊಟ್ಟು ಮಾದರಿಯಾಗಿದ್ದರು. ಆದರೆ ಇದೀಗ ಅವರೇ ಇಹಲೋಕ ತ್ಯಜಿಸಿದ್ದಾರೆ.

ಸ್ವಾಮೀಜಿಯವರ ನಿಧನದ ವಿಷಯ ತಿಳಿಯುತ್ತಿದ್ದಂತೆ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ತಕ್ಷಣ ಶಿವಮೊಗ್ಗ ನಾರಾಯಣ ಹೃದಯಾಲಯಕ್ಕೆ ಭೇಟಿ ನೀಡಿ ಸ್ವಾಮೀಜಿಯವರ ಪಾರ್ಥಿವ ಶರೀರವನ್ನು ತೀರ್ಥಹಳ್ಳಿಗೆ ತರಲು ಎಲ್ಲಾ ವ್ಯವಸ್ಥೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು, ಶ್ರೀಗಳ ಸಾವು ತುಂಬಾ ದುಃಖ ತರುವ ವಿಷಯವಾಗಿದೆ. ಇತ್ತೀಚೆಗೆ ಶ್ರೀ ಮಠದಲ್ಲಿ ಸ್ವಾಮಿಗಳು ಯಾರೂ ಇರಲಿಲ್ಲ. ಅವರ ಪಟ್ಟಾಭಿಷೇಕ ಆದ ನಂತರ ಕವಲೇದುರ್ಗ ಮಠಕ್ಕೆ ಜೀವಂತಿಕೆಯನ್ನು ತುಂಬಿದ್ದರು. ಸ್ವಾಮೀಜಿಯವರು ಸಾಕಷ್ಟು ಪದವಿಗಳನ್ನು ಪಡೆದಿದ್ದರು. ಈ ಭಾಗದ ಜನಸಾಮಾನ್ಯರ ನಡುವೆ ಬೆರೆಯುತ್ತಿದ್ದರು.

ಸಹಕಾರ ಸಂಘದ ನಿರ್ದೇಶಕರಾಗಿ, ಗೌರವಾಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದರು. ನಮಗೆಲ್ಲರಿಗೂ ವಿಶೇಷ ಮಾರ್ಗದರ್ಶಕರಾಗಿದ್ದರು. ಮಠಕ್ಕೆ ರಾಜ ಪರಂಪರೆ ಹಿನ್ನೆಲೆಯಿದ್ದು ಮಠವನ್ನು ಬಹಳ ಎತ್ತರಕ್ಕೆ ಬೆಳೆಸುವ ಆಸೆ ಶ್ರೀಗಳದ್ದಾಗಿತ್ತು. ಅದಕ್ಕಾಗಿ ತುಂಬಾ ಕೆಲಸ ಮಾಡುತ್ತಿದ್ದರು. ಸ್ವಾಮೀಜಿಯಾಗಿದ್ದೂ ಒಬ್ಬ ಸಾಮಾನ್ಯ ರೈತನಾಗಿ ಬೆವರು ಸುರಿಸಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಮೂಲತಃ ಅವರು ಅಥಣಿಯವರಾಗಿದ್ದರು. ಅವರಿಗೆ ಅಡಕೆ ಬೆಳೆ ಬಗ್ಗೆ ಏನೂ ಕಲ್ಪನೆ ಇರಲಿಲ್ಲ. ಕವಲೇದುರ್ಗ ಮಠಕ್ಕೆ ಬಂದ ನಂತರ ಮಠಕ್ಕೆ ಉಳಿದುಕೊಂಡಿದ್ದ ಸ್ವಲ್ಪ ಜಮೀನಿನನ್ನು ಚೆನ್ನಾಗಿ ಅಭಿವೃದ್ಧಿ ಮಾಡಿದ್ದರು.

Advertisement

ಪ್ರತಿ ದಿನ ಹೆಚ್ಚಾಗಿ ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಯವರೆಗೆ ತೋಟದಲ್ಲಿದ್ದು ಮಣ್ಣು ಕಡಿಯುವುದರಿಂದ ಎಲ್ಲಾ ಕೆಲಸವನ್ನೂ ಮಾಡುತ್ತಿದ್ದರು. ಬಹಳ ದೊಡª ಶ್ರಮ ಜೀವಿಯಾಗಿದ್ದರು. ಭುವನಗಿರಿ ದುರ್ಗಾ ಮಠ ಅವರ ಕನಸಿನಂತೆ ಯಾತ್ರಾ ಸ್ಥಳವಾಗಬೇಕು ಎಂದು ಮಠದ ನೀಲನಕ್ಷೆಯನ್ನು ತಯಾರಿಸಿಕೊಂಡು ಒಂದು ವಾರದ ಹಿಂದೆ ನಮ್ಮ ಮನೆಗೆ ಬಂದಿದ್ದರು. ಅವರನ್ನು ಕಳೆದುಕೊಂಡಿದ್ದು ತುಂಬಾ ದುಃಖವಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next