Advertisement
ಶಿವಮೊಗ್ಗ: ಕೊರೊನಾ ಒಂದನೇ ಅಲೆಯ ಲಾಕ್‌ಡೌನ್ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದ ಕುಕ್ಕುಟೋದ್ಯಮ ಈಗ ಕೊರೊನಾ ಎರಡನೇ ಅಲೆಯ ಕಠಿಣ ಕರ್ಫ್ಯೂನಿಂದ ನಲುಗಿ ಹೋಗಿದೆ. ಖರೀದಿ ಅವ ಧಿ ಸೀಮಿತವಾಗಿರುವುದರಿಂದ ವ್ಯಾಪಾರವೂ ಇಲ್ಲದೇ ಮಾರಾಟವೂ ಇಲ್ಲದೇ ದಿನಕ್ಕೆ ಲಕ್ಷಾಂತರ ರೂ. ನಷ್ಟ ಉಂಟಾಗುತ್ತಿದೆ. 2020ರ ಮಾರ್ಚ್‌ನಲ್ಲಿ ಏಕಾಏಕಿ ಲಾಕ್‌ಡೌನ್ ಘೋಷಣೆ ಮಾಡಲಾಯಿತು.
Related Articles
Advertisement
ಫಾರಂನಲ್ಲೇ ಕೋಳಿಗಳು
ಒಂದು ಕೆಜಿ ಕೋಳಿ ಉತ್ಪಾದನೆಗೆ (40ರಿಂದ 45 ದಿನ) ಮರಿ, ಆಹಾರ, ಸಿಬ್ಬಂದಿ ಖರ್ಚು ಸೇರಿ 90 ರೂ. ಆಗುತ್ತದೆ. ಪ್ರಸ್ತುತ ಹೋಲ್‌ಸೇಲ್ ಬೆಲೆ ಪ್ರತಿ ಕೆಜಿಗೆ 40ರಿಂದ 45 ರೂ. ಇದೆ. ಆದರೆ ಇದರ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ. ಚಿಕನ್ ಶಾಪ್‌ಗ್ಳಲ್ಲಿ ಕೆಜಿಗೆ 180, 200 ರೂ.ವರೆಗೂ ಇದೆ. ಮಾಂಸಕ್ಕಾಗಿ ಕೊಯ್ಯುವ ಕೋಳಿಯನ್ನು ಹೆಚ್ಚೆಂದರೆ ಒಂದು ವಾರ ಇಟ್ಟುಕೊಳ್ಳಬಹುದು. ಆಮೇಲೆ ಅದು ಆಹಾರವನ್ನು ದುಪ್ಪಟ್ಟು ಸೇವಿಸುತ್ತದೆ. ತೂಕ ಕೂಡ ಹೆಚ್ಚಾಗುವುದಿಲ್ಲ. ಇದೇ ಕಾರಣಕ್ಕೆ ಕೇಳಿದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಮಾರಾಟ ಪ್ರಮಾಣ ಕುಸಿದಿರುವುದರಿಂದ ಲಕ್ಷ ಲಕ್ಷ ಕೋಳಿಗಳು ಫಾರಂನಲ್ಲೇ ಉಳಿದಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಕೋಳಿಯನ್ನು ಮತ್ತೆ ಜೀವಂತ ಹೂಳುವುದು ಅನಿವಾರ್ಯವಾಗಲಿದೆ.
ಮಾರಾಟ ಸಮಯ ಹೆಚ್ಚಿಸಿ
ಈಗಿರುವ ಮೂರು ಗಂಟೆ ಮಾರಾಟ ಅವ ಧಿಯಲ್ಲಿ ಹೆಚ್ಚು ಕೋಳಿಗಳು ಸೇಲ್ ಆಗುತ್ತಿಲ್ಲ. ಹೆಚ್ಚು ಜನ ಸೇರುವ ಭಯದಿಂದ ಗ್ರಾಹಕರು ಅಂಗಡಿಗಳತ್ತ ಸುಳಿಯುತ್ತಿಲ್ಲ. ಹೀಗಾಗಿ ಈಗಿರುವ ಮಾರಾಟ ಅವ ಧಿಯನ್ನು ಮಧ್ಯಾಹ್ನ ಎರಡು ಗಂಟೆವರೆಗೂ ವಿಸ್ತರಿಸಿದರೆ ಮಾರಾಟ ಪ್ರಮಾಣ ಶೇ.70ಕ್ಕೆ ಹೆಚ್ಚಾಗಬಹುದು. ಇದರಿಂದ ಕೋಳಿ ಸಾಕಣೆದಾರರು ಹಾಗೂ ಚಿಕನ್ ಶಾಪ್‌ಗ್ಳಿಗೂ ಲಾಸ್ ಆಗುವುದಿಲ್ಲ ಎನ್ನುತ್ತಾರೆ ನಂದೀಶ್ ಫೌಲಿó ಮಾಲೀಕ ದಿನೇಶ ಪಟೇಲ್. ಸರ್ಕಾರಕ್ಕೆ ಫಾರ್ಮಸ್ ಆಸೋಸಿಯೇಷನ್‌ನಿಂದ ಸಮಯ ವಿಸ್ತರಣೆಗೆ ಮನವಿ ಮಾಡಲಾಗಿದೆ. ಸರ್ಕಾರ ಆದಷ್ಟು ಬೇಗ ಮನವಿ ಪರಿಗಣಿಸುವಂತೆ ಸಾಕಣೆದಾರರು ಒತ್ತಾಯಿಸಿದ್ದಾರೆ.