ಸಾಗರ: ಇನ್ನೊಂದು ವಾರದೊಳಗೆ ತಾಳಗುಪ್ಪ ಹೋಬಳಿಯ ಹಿರೇಮನೆ ಗ್ರಾಮದ ಗಿರಿಜನ ಆಶ್ರಮ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗುವುದು ಎಂದು ಸೊರಬ ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.
ಅವರು ಮಂಗಳವಾರ ಹಿರೇಮನೆ ಗಿರಿಜನ ಆಶ್ರಮ ಶಾಲೆಗೆ ಭೇಟಿ ನೀಡಿ ಅ ಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿ ಧಿಗಳ ಜೊತೆ ಪೂರ್ವಭಾವಿ ತಯಾರಿ ಕುರಿತು ಚರ್ಚೆ ನಡೆಸಿ, ಸೊರಬ ಪಟ್ಟಣದಲ್ಲಿ 100 ಹಾಸಿಗೆಯ ಹಾಗೂ ಆನವಟ್ಟಿಯಲ್ಲಿ 250 ಹಾಸಿಗೆಯ ಸಿಸಿಸಿ ಈಗ ಕಾರ್ಯಾರಂಭ ಮಾಡಿದೆ. 50 ಬೆಡ್ ಜತೆಗೆ ಆಮ್ಲಜನಕ ಸಹಿತ ಸೇವೆ ಸಿದ್ಧವಾಗಿ ಸೊರಬದಲ್ಲಿ ಈಗಾಗಲೇ 97 ಜನ ದಾಖಲಾಗಿದ್ದಾರೆ.
ತಾಳಗುಪ್ಪ ಹೋಬಳಿಯ ಸೈದೂರು ಮರತ್ತೂರು, ಮಂಜಿನಕಾನು ಹಾಗೂ ತಾಳಗುಪ್ಪ ಪಟ್ಟಣ ಸೇರಿದಂತೆ 309 ಕೊರೊನಾ ಪಾಸಿಟಿವ್ ಕೇಸ್ ಬಂದವರಿದ್ದು, ಅವರೆಲ್ಲ ಸದ್ಯ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಅವರಲ್ಲಿ ಕಷ್ಟದ ಸ್ಥಿತಿಯಲ್ಲಿರುವ ಬಾ ಧಿತರಿಗೆ ಹಿರೇಮನೆಯಲ್ಲಿ 50 ಹಾಸಿಗೆ ಕೇರ್ ಸೆಂಟರ್ ವ್ಯವಸ್ಥೆ ಮಾಡಲಾಗುವುದು.
ಉತ್ತಮ ಗುಣಮಟ್ಟದ ಆಹಾರ, ಸ್ವತ್ಛತೆ, ದಿನಪೂರ್ತಿ ವಿದ್ಯುತ್, ಸಿಸಿ ಕ್ಯಾಮೆರಾ ಮೂಲಕ ಕಣ್ಗಾವಲು ಮುಂತಾದ ಅಚ್ಚುಕಟ್ಟಾದ ವ್ಯವಸ್ಥೆ ಮೂಲಕ ಬಾಧಿತರ ಆರೈಕೆ ನಮ್ಮ ಕರ್ತವ್ಯ ಎಂದರು.
ತಲವಾಟ ಗ್ರಾಪಂ ಕೊವಿಡ್ ನಿರ್ವಹಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಜನರ ಸಂಕಷ್ಟಕ್ಕೆ ಸ್ಪಂದಿಸಿದೆ. ಆರೋಗ್ಯ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಜನಪ್ರತಿನಿಧಿ ಗಳು ಪಿಡಿಓ, ಕಾರ್ಯದರ್ಶಿ ಪ್ರತಿನಿತ್ಯ ಮನೆ ಭೇಟಿ ಮಾಡಿ ಬಾಧಿ ತರ ಉಸ್ತುವಾರಿ ತೆಗೆದುಕೊಂಡಿದ್ದು ಶ್ಲಾಘನೀಯ ಎಂದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಕಲ್ಪನಾ ಸತೀಶ್, ಕನ್ನಪ್ಪ, ಉದಯ ಗೌಡ್ರು, ನಾಗರತ್ನ ಬಾಲಚಂದ್ರ, ಪರಮೇಶ್ವರ್ ಸೇರಿದಂತೆ ಎಲ್ಲಾ ಇಲಾಖೆಯ ಅ ಕಾರಿಗಳು ಪಾಲ್ಗೊಂಡಿದ್ದರು.