Advertisement

ಕೊರೊನಾ ತಡೆಗೆ ಸರ್ವಸಿದ್ಧತೆ: ಆರಗ ಜ್ಞಾನೇಂದ್ರ

09:50 PM May 19, 2021 | Shreeraj Acharya |

ತೀರ್ಥಹಳ್ಳಿ: ಕೊರೊನಾ ಪಾಸಿಟಿವ್‌ ಕಂಡುಬಂದವರಿಗೆ ಸರ್ಕಾರದ ವತಿಯಿಂದಲೇ 17 ದಿನಗಳ ಕಾಲ ಚಿಕಿತ್ಸೆಯ ವ್ಯವಸ್ಥೆ ಮತ್ತು ತಾಲೂಕಿನ ಹದಿನೈದು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೋಣಂದೂರು ಆಸ್ಪತ್ರೆಯಲ್ಲಿ ಇಂದಿನಿಂದಲೇ ಗ್ರಾಮೀಣ ಪ್ರದೇಶದ ಕೊರೊನಾ ಪರೀûಾ ಕೇಂದ್ರಗಳು ಕಾರ್ಯ ಪ್ರಾರಂಭಗೊಂಡಿವೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚತೊಡಗಿದ್ದು ಹೊರ ಊರಿನಿಂದ ಬಂದವರಲ್ಲಿ ಅನೇಕರಿಗೆ ಕೊರೊನಾ ಪಾಸಿಟಿವ್‌ ಕಾಣಿಸಿಕೊಂಡಿದ್ದು ಜಿಲ್ಲೆಯಲ್ಲೇ ನಮ್ಮ ತಾಲೂಕಿನಲ್ಲಿ ಅತಿ ಹೆಚ್ಚು ಕೊರೊನಾ ಪಾಸಿಟಿವ್‌ ರೋಗಿಗಳು ಕಂಡುಬರುತ್ತಿದ್ದಾರೆ. ನಿಯಂತ್ರಣಕ್ಕೆ ಬಾರದ ಸ್ಥಿತಿ ತೀರ್ಥಹಳ್ಳಿ ತಾಲೂಕಿನಲ್ಲಿದೆ .

ಪಾಸಿಟಿವ್‌ ಇರುವಂತಹ ಅನೇಕ ವ್ಯಕ್ತಿಗಳು ಬೇಕಾಬಿಟ್ಟಿಯಾಗಿ ತಿರುಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಅಂತವರ ಚಿಕಿತ್ಸೆಗೆ ದೇವಂಗಿ ಸಮೀಪದ ವಾಟಗಾರುನಲ್ಲಿರುವ ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ನಿಲಯ ಹಾಗೂ ಆನಂದಗಿರಿ ತುಂಗಾ ಕಾಲೇಜು ಸಮೀಪ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಈಗಾಗಲೇ ವಶಕ್ಕೆ ತೆಗೆದುಕೊಂಡು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೆ ಸಿ. ಆಸ್ಪತ್ರೆಯಲ್ಲಿ ಎಲ್ಲ ವಾರ್ಡುಗಳನ್ನು ರೋಗಿಗಳ ಚಿಕಿತ್ಸೆಗೆ ಕಾದಿರಿಸಲಾಗಿದೆ.

ಜೊತೆಗೆ ಆಗುಂಬೆಯ ಆಶಾಕಿರಣ ಶಾಲೆ ಮತ್ತು ಹಾಸ್ಟೆಲ್‌ಗ‌ಳನ್ನು ಕೊರೊನಾ ಚಿಕಿತ್ಸಾ ಕೇಂದ್ರಗಳಾಗಿಯೂ ಹಾಗೂ ಅಗತ್ಯಬಿದ್ದರೆ ಕಲ್ಯಾಣ ಮಂದಿರ ಮತ್ತು ಶಾಲಾ ಕಟ್ಟಡಗಳನ್ನು ಸಹ ವಶಕ್ಕೆ ಪಡೆದು ಚಿಕಿತ್ಸೆಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next