Advertisement

ಖಾಸಗಿ ವೈದ್ಯರಿಂದ ತಪಾಸಣೆಗೆ ಅನುಮತಿ ನೀಡಲು ಆಗ್ರಹ

09:54 PM May 18, 2021 | Shreeraj Acharya |

ಸಾಗರ: ತಾಲೂಕಿನ ತ್ಯಾಗರ್ತಿಯ ಖಾಸಗಿ ಕ್ಲಿನಿಕ್‌ ಅನ್ನು ಬಂದ್‌ ಮಾಡುವಂತೆ ಎರಡು ದಿನಗಳ ಹಿಂದೆ ಸಾರ್ವಜನಿಕರು ಹಾಗೂ ಕೆಲವು ಪ್ರಮುಖರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಕ್ಲಿನಿಕ್‌ ಕಾರ್ಯ ಚಟುವಟಿಕೆ ನಿಲ್ಲಿಸಿದೆ.

Advertisement

ಆದರೆ ಸೋಮವಾರ ತ್ಯಾಗರ್ತಿಯಲ್ಲಿ ಕೆಲವು ಮುಖಂಡರ ಮತ್ತೂಂದು ಗುಂಪು ಮತ್ತು ಹಲವು ಸಾರ್ವಜನಿಕರು ಖಾಸಗಿ ಕ್ಲಿನಿಕ್‌ ವೈದ್ಯರಿಗೆ ಅವಕಾಶ ನೀಡಬೇಕೆಂದು ಪ್ರತಿಪಾದಿಸಿ ಪ್ರತಿಭಟನೆ ನಡೆಸಿದರು. ಕೋವಿಡ್‌ ನಿಯಮ ಪಾಲಿಸದೆ ರೋಗಿಗಳನ್ನು ತಪಾಸಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಇಲ್ಲಿನ ಮಾರಿಕಾಂಬಾ ದೇವಾಲಯದ ಪಕ್ಕದ ರಸ್ತೆಯ ಜನರು ಶನಿವಾರ ಖಾಸಗಿ ಕ್ಲಿನಿಕ್‌ ಎದುರು ಧರಣಿ ನಡೆಸಿ ಕ್ಲಿನಿಕ್‌ ನಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಯಾವುದೇ ಮುನ್ನೆಚ್ಚರಿಕೆ ವಹಿಸುತ್ತಿಲ್ಲ ಎಂದು ಆಗ್ರಹಿಸಿದ್ದರಿಂದ ಖಾಸಗಿ ವೈದ್ಯರು ಕ್ಲಿನಿಕ್‌ನ ಬಾಗಿಲು ಮುಚ್ಚಿದ್ದರು.

ಇವರಿಂದ ಚಿಕಿತ್ಸೆ ಪಡೆದ ಜನರು ಕೋವಿಡ್‌ ಸಂದರ್ಭದಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆರೋಪಿಸಿ ಇರುವ ವೈದ್ಯರನ್ನು ಕೆಲವರು ಸ್ವಹಿತಾಸಕ್ತಿಗಾಗಿ ಏಕಾಏಕಿ ಬಂದ್‌ ಮಾಡಿಸಿದರೆ ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ಪಾಂಡುರಂಗ, ಯೋಗೀಶ್‌ ಹುತ್ತಾದಿಂಬ, ಕೃಷ್ಣಮೂರ್ತಿ, ವೆಂಕಟರಮಣ, ರವಿ, ಪರಶುರಾಮ್‌ ಮತ್ತಿತರರು ಇದ್ದರು. ಇಲ್ಲಿನ ಖಾಸಗಿ ವೈದ್ಯರಿಗೆ ಬಾಗಿಲು ಮುಚ್ಚಲು ಯಾರೂ ಹೇಳಿಲ್ಲ. ಕೊರೊನಾ ನಿಯಮಾವಳಿ ಪಾಲಿಸಿ ರೋಗಿಗಳ ತಪಾಸಣೆ ನಡೆಸಿ ಎಂದು ಸೂಚಿಸಲಾಗಿದೆ. ನಾಳೆಯಿಂದ ಪರಸ್ಪರ ಅಂತರ ಕಾಯ್ದುಕೊಂಡು ಪ್ರತಿಯೊಬ್ಬರೂ ಸ್ಯಾನಿಟೈಸರ್‌ ಬಳಸಿ ಯಾರಿಗೂ ತೊಂದರೆಯಾಗದಂತೆ ಶುಶ್ರೂಷೆ ಪಡೆದುಕೊಳ್ಳಬಹುದು ಎಂದು ಗ್ರಾಪಂ ಅಧ್ಯಕ್ಷೆ ಗೀತಾ ಪರಶುರಾಮ್‌ ಮತ್ತು ಪಿಡಿಒ ಮಂಜಾನಾಯ್ಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next