Advertisement

ದಾದಿಯರ ಸೇವೆ ಅವಿಸ್ಮರಣೀಯ

11:08 PM May 13, 2021 | Shreeraj Acharya |

ಸಾಗರ: ಕೋವಿಡ್‌ ಸಂದರ್ಭದಲ್ಲಿ ದಾದಿಯರ ಸೇವೆ ಅವಿಸ್ಮರಣೀಯ. ದಾದಿಯರು ಮುಂದಿನ ಪೀಳಿಗೆ ನೂರು ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಳ್ಳುವಂತಹ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಶಾಸಕ ಎಚ್‌. ಹಾಲಪ್ಪ ಹರತಾಳು ಹೇಳಿದರು.

Advertisement

ನಗರದ ಲೋಕೋಪಯೋಗಿ ಇಲಾಖೆ ಕಚೇರಿಯ ದೇವರಾಜ ಅರಸು ಸಭಾಭವನದಲ್ಲಿ ವಿಶ್ವ ದಾದಿಯರ ದಿನಾಚರಣೆ ಅಂಗವಾಗಿ ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹಿರಿಯ -ಶುಶ್ರೂಷಕಿಯರನ್ನು ಸನ್ಮಾನಿಸಿ ಮಾತನಾಡಿದರು.ಇಂದು ವಿಶ್ವ ದಾದಿಯರ ದಿನ ಎಂದು ಕರೆಯಲಾಗುತ್ತದೆ. ಹಿಂದಿನವರ ಸೇವೆ ಗುರುತಿಸಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಇವರ ಸೇವೆ ಜಗತ್ತಿನಾದ್ಯಂತ ಇಂದಿನ ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೆಚ್ಚು ಮಹತ್ವ ಪಡೆದಿದೆ ಎಂದರು.

ಪ್ರಸ್ತುತ ಕೊರೊನಾದಂಥ ಸಂದರ್ಭದಲ್ಲಿ ಭಾಷಣ ಮಾಡುವ ಸಮಯವಲ್ಲ. ಆರೋಗ್ಯ ಇಲಾಖೆಯ ಚೌಕಟ್ಟಿನಲ್ಲಿ ಕೋವಿಡ್‌ ಸೋಂಕು, ಪ್ರಾಣ ಭಯ ಕಾಲಘಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲರ ಸೇವೆಯನ್ನು ನೆನಪು ಮಾಡುವುದು, ಅದಕ್ಕೆ ತಕ್ಕ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ದೇಶ, ರಾಜ್ಯದಲ್ಲಿ ಲಕ್ಷಾಂತರ ದಾದಿಯರು ಮಾತೆಯರಂತೆ ಜನರ ಸೇವೆ ಮಾಡುತ್ತಿದ್ದಾರೆ. ಅವರಿಗೆಲ್ಲರಿಗೂ ಭಗವಂತ ಆರೋಗ್ಯ, ಆಯುಷ್ಯ ಕರುಣಿಸಲಿ ಎಂದು ಹಾರೈಸಿದರು.

ಆರೋಗ್ಯ ಇಲಾಖೆ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮ. ಸ.ನಂಜುಂಡಸ್ವಾಮಿ ಮಾತನಾಡಿ, ಕೋವಿಡ್‌ ಸೋಂಕಿತರ ಹತ್ತಿರ ಅವರ ಕುಟುಂಬದವರೇ ಬಾರದಿರುವಾಗ ಆರೋಗ್ಯ ಇಲಾಖೆ ಸಿಬ್ಬಂದಿ ಜೀವ ಉಳಿಸುವ ಕೆಲಸದಲ್ಲಿ ತೊಡಗಿರುವುದು ಸಾಮಾನ್ಯ ವಿಷಯವಲ್ಲ. ಶಾಸಕ ಎಚ್‌. ಹಾಲಪ್ಪ ಇಲಾಖೆಯ ನೌಕರರ ನೈತಿಕ ಬಲ ಹೆಚ್ಚಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಉಮಾ ಹೆಗಡೆ, ಜುಬೇದಾ ಆಲಿ, ಅನಿತಾ ಕುಮಾರಿ, ಗುರುಶಾಂತ ಕೆ. ಹಾಗೂ ವಾಸಂತಿ. ಆರ್‌. ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಾಗರ ಉಪವಿಭಾಗದ ಸಹಾಯಕ ಆಯುಕ್ತ ಡಾ. ನಾಗರಾಜ್‌ ಎಲ್‌., ನಗರಸಭೆಯ ಸದಸ್ಯ ಗಣೇಶ್‌ ಪ್ರಸಾದ್‌, ರವಿ, ಸುರೇಶ್‌ ಇತರರು ಹಾಜರಿದ್ದರು.

Advertisement

ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ತಾಲೂಕು ಅಧ್ಯಕ್ಷ ವೈ.ಮೋಹನ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next