Advertisement

ಕೆಲ ಅಸಮಾಧಾನದ ಮಧ್ಯೆಯೂ ಜನಪರ ಕೆಲಸದ ಸಂತೃಪ್ತಿ ಇದೆ : ಹಕ್ರೆ

11:24 PM May 06, 2021 | Shreeraj Acharya |

ಸಾಗರ: ಕಾಂಗ್ರೆಸ್‌ ಪಕ್ಷದ ಪ್ರಮುಖರು ತಮ್ಮ ಪರವಾಗಿ ನಿಲ್ಲದ ಅಸಮಾಧಾನ ಜಿಲ್ಲಾ ಕಾಂಗ್ರೆಸ್‌ ವಲಯದಲ್ಲಿದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳದ ಬೇಸರ ನನಗೂ ಇದೆ. 25 ವರ್ಷಗಳ ಜನಸೇವೆಯಲ್ಲಿ ತೊಡಗಿಕೊಂಡಿರುವ ನನ್ನನ್ನು ಬೆಂಬಲಿಸದೇ ಸರ್ವ ಪಕ್ಷ ನಾಯಕರಾಗಲು ಹೊರಟವರು, ಮುಂದಿನ ಅಸೆಂಬ್ಲಿ ಚುನಾವಣೆಯ ಸ್ಪರ್ಧಾಕಾಂಕ್ಷಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ತಾಪಂ ಅಧ್ಯಕ್ಷ ಬಿ.ಎಚ್‌. ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಪಂ ಆಡಳಿತಕ್ಕೆ ಸ್ವಪಕ್ಷದ ಸದಸ್ಯರು ಆಡಳಿತ ಪಕ್ಷದ ಬೆಂಬಲದೊಂದಿಗೆ ಹಲವು ರೀತಿಯ ಅಡ್ಡಿ-ಆತಂಕಗಳನ್ನು ಒಡ್ಡಿದರೂ 5 ವರ್ಷಗಳ ಅವ ಧಿಯಲ್ಲಿ ತಾಪಂ ಅಧ್ಯಕ್ಷನಾಗಿ ಜನಸ್ನೇಹಿ, ಪಾರದರ್ಶಕ ಮತ್ತು ಭ್ರಷ್ಟಾಚಾರರಹಿತ ಆಡಳಿತ ನೀಡಿದ ಸಂತೃಪ್ತಿ ಇದೆ. ನಾನು ಅಸೆಂಬ್ಲಿ ಚುನಾವಣೆಗೆ ನಿಲ್ಲುವ ಆಕಾಂಕ್ಷೆಯನ್ನು ಎಲ್ಲೂ ವ್ಯಕ್ತಪಡಿಸಿಲ್ಲ. ಅವಕಾಶ ಸಿಕ್ಕರೆ ಜಿಪಂಗೆ ನಿಲ್ಲುವ ನಿರೀಕ್ಷೆ ಹೊಂದಿದ್ದೇನೆ ಎಂದರು.

ಸ್ಥಳೀಯ ಮಟ್ಟದ ಮೂರು ಹಂತದ ವ್ಯವಸ್ಥೆಯಲ್ಲಿ ತಾಪಂ ಅನ್ನು ತೆಗೆದು ಹಾಕುವ ಚಿಂತನೆಯಲ್ಲಿ ಸರ್ಕಾರ ಇರುವಾಗ, ಕಡಿಮೆ ಅನುದಾನ ಒದಗುತ್ತಿರುವ ಸಂದರ್ಭದಲ್ಲಿ ಸಾಗರ ತಾಪಂ ಮೂಲಕ ಜನಪರ ಕೆಲಸ ಮಾಡಿದ ಸಮಾಧಾನ ಇದೆ. ತಾಪಂ ಸಭೆಗಳಲ್ಲಿ ಚರ್ಚೆಯಾದ ವಿಷಯಗಳ ಸಂಬಂಧ 1000ಕ್ಕೂ ಹೆಚ್ಚು ಪತ್ರಗಳನ್ನು ವಿವಿಧ ಇಲಾಖೆಗಳಿಗೆ ಬರೆಯಲಾಗಿದೆ. ನನ್ನಿಂದ ಅಧಿ ಕಾರಿಗಳಿಗೆ ಕೆಲಸಗಳ ಕುರಿತಾಗಿ 5000ದಷ್ಟು ಪತ್ರಗಳನ್ನು ಬರೆದಿದ್ದೇನೆ. ಕೇವಲ ನಾಮನಿರ್ದೇಶಿತ ಸದಸ್ಯನಾಗಿ ನಾನು ಜಿಪಂ ಸಭೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದನ್ನು ಮಾಧ್ಯಮಗಳು ಹಾಗೂ ಇತರ ಜನಪ್ರತಿನಿ ಧಿಗಳೇ ಗಮನಿಸಿದ್ದಾರೆ ಎಂದರು.

ಉಪಾಧ್ಯಕ್ಷ ಅಶೋಕ ಬರದವಳ್ಳಿ ಮಾತನಾಡಿ, ಗ್ರಾಪಂ ಹಂತದಿಂದ ತಾಲೂಕು ಮಟ್ಟದವರೆಗೆ ನಾನು ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರೂ ಈವರೆಗೆ ಯಾವುದೇ ಗುತ್ತಿಗೆದಾರರಿಂದ ಒಂದೇ ಒಂದು ಪೈಸೆ ಪಡೆದಿಲ್ಲ. ಮುಂದೆ ಪಕ್ಷ ಅವಕಾಶ ಕಲ್ಪಿಸಿದರೆ ಜಿಪಂ ಚುನಾವಣೆಯಲ್ಲಿ ಸ್ಪ ರ್ಧಿಸಲಿದ್ದೇನೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next