ಕಡೂರು: ರಾಜಕೀಯ ಇತಿಹಾಸ ಮತ್ತೆ ಮರುಕಳಿಸಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಪಂಚರಾಜ್ಯ ಚುನಾವಣೆ ಫಲಿತಾಂಶದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಭಾನುವಾರ ದೂರವಾಣಿ ಮೂಲಕ ಪ್ರತಿಕ್ರಿಯಿಸಿದ ಅವರು, ಆಡಳಿತ ವಿರೋಧಿ ಅಲೆ ಮತ್ತು ಪ್ರಾದೇಶಿಕತೆಯ ಒಲವು ಇಲ್ಲಿನ ಪ್ರಮುಖ ಸಂಗತಿಯಾಗಿದೆ ಎಂದರು. ಬಹುಸಂಸ್ಕೃತಿಯ ದೇಶದಲ್ಲಿ ಏಕಸಂಸ್ಕೃತಿಯನ್ನು ತರಲು ಹೊರಟ ಪಕ್ಷಕ್ಕೆ ಜನತೆ ಉತ್ತರ ನೀಡಿದ್ದಾರೆ.
ಮಮತಾ ಬ್ಯಾನರ್ಜಿಯವರಂತೂ ಬಂಗಾಳಿ ಸಂಸ್ಕೃತಿಯನ್ನೇ ಚುನಾವಣಾ ಪ್ರಣಾಳಿಕೆಯನ್ನಾಗಿಸಿದ್ದರು. ಜನತೆ ತಮ್ಮ ಸಂಸ್ಕೃತಿಯನ್ನುಳಿಸಿಕೊಳ್ಳುವ ಛಲ ತೋರಿದ್ದಾರೆ ಎಂದರು.
ಏಕವ್ಯಕ್ತಿ ನಾಯಕತ್ವ ಕೇಂದ್ರೀಕೃತ ಪಕ್ಷವು ಆ ವ್ಯಕ್ತಿಯ ಭಾರಕ್ಕೆ ತಾನೇ ಬಿದ್ದುಹೋಗುತ್ತದೆ ಎಂಬುದು ಇತಿಹಾಸ. ನೆಹರೂ, ಇಂದಿರಾ ಗಾಂಧಿ ಸರ್ಕಾರಗಳ ಪರಿಸ್ಥಿತಿ ಹೀಗೆಯೇ ಇತ್ತೆಂಬುದು ಇತಿಹಾಸ. ಮೂರನೇ ಅವಧಿ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಎರಡು ಅವ ಧಿ ಅಧಿ ಕಾರ ನಡೆಸಿದ ಪಕ್ಷದ ಆಡಳಿತ ವೈಖರಿಗೆ ಈ ಚುನಾವಣೆಯ ಫಲಿತಾಂಶ ಸ್ಪಷ್ಟ ಸಂದೇಶ ನೀಡಿದೆ ಎಂದು ನರೇಂದ್ರ ಮೋದಿ ಅವರ ಸರ್ಕಾರದ ವೈಫಲ್ಯ ಸಾಬೀತಾಗಿದೆ ಎಂದರು.
ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಕಾರ್ಪೋರೆಟ್ ಸಂಸ್ಕೃತಿಯನ್ನು ಬಿಂಬಿಸುವ ಸರ್ಕಾರ ಆಡಳಿತಕ್ಕೆ ಬಂದರೆ ಏನಾಗುತ್ತದೆ ಎಂಬ ಚಿಂತನೆಯೇ ಈ ಫಲಿತಾಂಶಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷವು ಜಯಭೇರಿ ಬಾರಿಸಿದ್ದು. ಅವರು ಸೋತಿದ್ದಾರೆ. ಅಲ್ಲಿನ ಶಾಸಕಾಂಗ ಸಭೆಯಲ್ಲಿ ಮೊತ್ತೂಮ್ಮೆ ಮಮತಾ ಬ್ಯಾನರ್ಜಿ ಅವರನ್ನೇ ಮುಖ್ಯ ಮಂತ್ರಿಯಾಗಿ ಆಯ್ಕೆ ಮಾಡಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಕಾರಣ ನಮ್ಮ ರಾಜ್ಯದಲ್ಲಿ ಇಂತಹ ಘಟನೆಗಳು ನಡೆದಿವೆ. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಹೊಸದುರ್ಗ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರು.
ಆದರೂ ಕಾಂಗ್ರೆಸ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ 6 ತಿಂಗಳೊಳಗೆ ಶಿಗ್ಗಾವಿ ಕ್ಷೇತ್ರದ ಶಾಸಕರ ರಾಜೀನಾಮೆ ಕೊಡಿಸಿ ಅಲ್ಲಿಂದ ಆಯ್ಕೆಯಾಗಿ ಬಂದಿದ್ದರು ಎಂದರು. ಒಟ್ಟಾರೆ ಈ ಚುನಾವಣೆಯ ಫಲಿತಾಂಶ ಪ್ರಾದೇಶಿಕ ಪಕ್ಷಗಳ ಬಗೆಗಿನ ಒಲವನ್ನು ಮತ್ತೆ ಅನಾವರಣಗೊಳಿಸಿದೆ. ರಾಜ್ಯದಲ್ಲಿಯೂ ಆಡಳಿತ ವಿರೋ ಧಿ ಅಲೆ ಸ್ಪಷ್ಟವಾಗಿದೆ ಎಂದರು.