Advertisement

ಮನೆಯಲ್ಲಿರುವ ಸೋಂಕಿತರ ಮೇಲೆ ನಿಗಾ ಇರಿಸಿ

11:05 PM May 03, 2021 | Shreeraj Acharya |

ಶಿವಮೊಗ್ಗ: ಕೆಲ ಕೊರೊನಾ ಸೋಂಕಿತರು ಐಸೋಲೇಷನ್‌ ಆಗದೆ ಸುಖಾಸುಮ್ಮನೆ ಮನೆಯಿಂದ ಹೊರಗಡೆ ತಿರುಗಾಡುತ್ತಿದ್ದು, ಅಂಥವರ ಮೇಲೆ ನಿಗಾ ಇರಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸಚಿವ ಕೆ.ಎಸ್‌. ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ತಾಲೂಕು ಮಟ್ಟದ ಕೊರೊನಾ ನಿಯಂತ್ರಣ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳುತ್ತಿರುವ ಸೋಂಕಿತರು ಹೊರಗೆ ಹೋಗದಂತೆ ಎಚ್ಚರ ವಹಿಸುವುದರ ಜತೆಗೆ ಇಲಾಖೆಯಿಂದ ಆಗಾಗ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕು. ಯಾರೊಬ್ಬರೂ ತಮ್ಮನ್ನು ನೋಡಿಕೊಳ್ಳುತ್ತಿಲ್ಲವೆಂಬ ಅನಾಥ ಪ್ರಜ್ಞೆ ಹೋಗಲಾಡಿಸಬೇಕಿದೆ ಎಂದರು. ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್‌ ನಾಯ್ಕ ಮಾತನಾಡಿ, ಕೊರೊನಾ ಚಿಕಿತ್ಸೆಗೆ ಸಂಬಂ ಧಿಸಿದ ಔಷಧಗಳು ಮೆಗ್ಗಾನ್‌ ಆಸ್ಪತ್ರೆಯಿಂದ ಹೊರಗೆ ಹೋಗುತ್ತಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ರೋಗಿಯ ಕೇಸ್‌ಶೀಟ್‌ನಲ್ಲಿ ಬರೆದ ಔಷಧ ವಾರ್ಡ್‌ಗೆ ತಲುಪುತ್ತಿಲ್ಲ. ಈ ರೀತಿ ಔಷಧ ದುರ್ಬಳಕೆಯಾದರೆ ರೋಗಿಗಳಿಗೆ ಔಷಧ ಲಭ್ಯವಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮೆಗ್ಗಾನ್‌ನಿಂದ ಔಷಧ ಹೊರಗೆ ಹೋಗುತ್ತಿದೆ ಎಂಬುದು ಗಂಭೀರ ಆರೋಪ. ತಕ್ಷಣ ಅಲ್ಲಿಗೆ ತಂಡ ಕಳುಹಿಸಿ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಸೂಚಿಸಿದರು.

ನಗರದ 10 ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಬೆಡ್‌ ಕೋವಿಡ್‌ ರೋಗಿಗಳಿಗೆ ನೀಡಬೇಕು ಎಂದು ಆದೇಶಿಸಲಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಪ್ರಕರಣಗಳಿಗೆ ಬೆಡ್‌ ಮೀಸಲಿಲ್ಲ. ಗ್ರಾಮೀಣ ಭಾಗದಲ್ಲಿ ಸೋಂಕು ಕಾಣಿಸಿ ಕೊಂಡರೆ ಗ್ರಾಮೀಣ ಭಾಗದ ಪಿಎಚ್‌ ಸಿ ಮತ್ತು ಸಿಎಚ್‌ ಗಳಲ್ಲಿ ಎಚ್‌ ಎಫ್‌ ಎನ್‌ ಸಿ ನೀಡಲಾಗಿದೆ. ಟ್ರಯಾಜ್‌ ಸೆಂಟರ್‌ ತೆರೆಯಲಾಗುತ್ತಿದೆ. ಕುಂಸಿ, ಆಯನೂರಿನ ಭಾಗದಲ್ಲಿ ತೆರೆಯಲಾಗುತ್ತದೆ ಎಂದು ಅ ಧಿಕಾರಿಗಳು ಸಭೆಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next