ಮಂಡ್ಯ: 450 ವರ್ಷಗಳ ಪುರಾತನ ದೇವಾಲಯದಲ್ಲಿದ್ದ ಶಿವಲಿಂಗವನ್ನು ದುಷ್ಕರ್ಮಿಗಳು ಕದ್ದೊಯ್ದುರುವ ಘಟನೆ ಸೋಮವಾರ (ಏಪ್ರಿಲ್ 12) ರಾತ್ರಿ ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ಘಟನೆ.
ಇಂದು ಮುಂಜಾನೆ ಪೂಜೆ ಮಾಡಲೆಂದು ಪೂಜಾರಿಗಳು ದೇವಸ್ಥಾನಕ್ಕೆ ಬಂದಾಗ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ. ಇದು ಪುರಾತನ ದೇವಾಲಯವಾಗಿದ್ದು, ನಿಧಿ ಆಸೆಗಾಗಿ ಶಿವಲಿಂಗ ಕಳ್ಳತನ ಮಾಡಿರುವ ಕುರಿತು ಶಂಕೆ ವ್ಯಕ್ತಪಡಿಸಿರುವ ಗ್ರಾಮಸ್ಥರು, ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಡರಾತ್ರಿ ವೇಳೆ ಹಲ್ಲೇಗೆರೆ ಗ್ರಾಮದಲ್ಲಿರುವ ಈಶ್ವರ ದೇವಸ್ಥಾನಕ್ಕೆ ನುಗ್ಗಿರುವ ಖದೀಮರು, ಗರ್ಭಗುಡಿಯಲ್ಲಿರುವ ಶಿವಲಿಂಗದ ಜಾಗದಲ್ಲಿ ನೆಲ ಅಗೆದು ನಿಧಿಗಾಗಿ ಶೋಧ ನಡೆಸಿದ್ದಾರೆ. ಇನ್ನು ಶಿವಲಿಂಗ ಕಳ್ಳತನ ನಡೆದಿರುವುದರಿಂದ ಹಲ್ಲೇಗೆರೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ.