Advertisement

ಸಮಾಜಕ್ಕೆ ಸಿದ್ಧಗಂಗಾ ಶ್ರೀ ದಾರಿದೀಪ

01:37 PM Apr 02, 2022 | Team Udayavani |

ಕೋಲಾರ: ಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿಯವರು ಮಾನವರಲ್ಲ. ಅವರು ದಾರ್ಶನಿಕರು. ಸಮಾಜಕ್ಕೆ ದಾರಿ ದೀಪವಾಗಿದ್ದ ವರು. ಯಾವೂದೇ ಜಾತಿ ಭೇದವಿಲ್ಲದೆ ಎಲ್ಲರನ್ನು ಒಂದೇ ಭಾವನೆಯಲ್ಲಿ ಕಾಣುತ್ತಿದ್ದು, ಎಲ್ಲ ವರ್ಗದವರಿಗೂ ತ್ರಿವಿಧ ದಾಸೋಹವನ್ನು ಕಲ್ಪಿಸುವ ಮೂಲಕ ಆದರ್ಶವಾಗಿದ್ದರು ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ ಹೇಳಿದರು.

Advertisement

ನಗರದ ಗಾಂಧಿವನದಲ್ಲಿ ಶುಕ್ರವಾರ ಶ್ರೀವಿವೇಕನಂದ ವಿದ್ಯಾರ್ಥಿಗಳ ಸಂಘ, ಬಿಆರ್‌ ಎಂ ಬಳಗ ಮತ್ತು ಭಕ್ತರಿಂದ ನಡೆದ ಸಿದ್ಧಗಂಗಾ ಮಠದ ಶ್ರೀ ಡಾ.ಶಿವಕುಮಾರ ಸ್ವಾಮೀಜಿಯವರ 115ನೇ ಜಯಂತಿಯಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಮಾತನಾಡಿದರು.

ಸಮಾಜಕ್ಕೆ ಜೀವನ ಮುಡಿಪು: ರಾಜ್ಯದಲ್ಲಿ ಜಾತ್ಯತೀತವಾಗಿ ಬಡ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹದ ಸೌಲಭ್ಯವನ್ನು ಕಲ್ಪಿಸುವ ಮೂಲಕ ಸಿದ್ಧಗಂಗಾ ಕ್ಷೇತ್ರವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಿದ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರನ್ನು ನಗರದ ಇಟಿಸಿಎಂ ಆಸ್ಪತ್ರೆ ಪಕ್ಕದ ಜೋಡಿ ರಸ್ತೆಗೆ ಇಡುವಂತೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ಗಮಿತ ಅಧ್ಯಕ್ಷ ವಿ.ಮುನಿರಾಜು ಆಗ್ರಹಿಸಿದರು.

ನಗರದ ಸೂಕ್ತ ಸ್ಥಳದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಪ್ರತಿಮೆ ಸ್ಥಾಪಿಸಬೇಕು. ಸಮಾಜಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಅವರ ಸ್ಮರಣೆ ನಿರಂತರವಾಗಿರಬೇಕು ಎಂದರು.

ಸ್ವಾಮೀಜಿ ಆದರ್ಶ ಅಳವಡಿಸಿಕೊಳ್ಳಿ: ನಿವೃತ್ತ ಹೊಂಗಾರ್ಡ್‌ ಕಮಾಂಡೆಂಡೆಂಟ್‌ ಮರಿಯಪ್ಪ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿ ಆದರ್ಶ ಮತ್ತು ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಮುಕ್ತಿ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

Advertisement

ಪ್ರಮುಖರಾದ ಬಿ.ಎಂ.ಚೆನ್ನಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಭಕ್ತರ ಸಭೆಯನ್ನು ಕರೆದು ಅವರ ಸಲಹೆ- ಸೂಚನೆ ಪರಿಗಣಿಸಿ ಪ್ರತಿಮೆ ಸ್ಥಾಪನೆ ಹಾಗೂ ಇಟಿಸಿಎಂ ಪಕ್ಷದ ರಸ್ತೆಗೆ ಅವರ ಹೆಸರು ಇಡಲು ಅಗತ್ಯಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಉಪಪ್ರಾಂಶುಪಾಲ ರುದ್ರಪ್ಪ, ನಗರಸಭೆ ಸದಸ್ಯ ಪ್ರಸಾದಬಾಬು, ಅರ್ಚಕರಾದ ರಂಗನಾಥ್‌, ಬಿ.ಆರ್‌.ಎಂ. ಬಳಗದ ಬಿ.ಸುರೇಶ್‌, ಸಚ್ಚಿದಾ ನಂದ, ಬಿ.ಉಮೇಶ್‌, ಶ್ರೀರಾಮ ಕಾμ ವರ್ಕ್ಸ್ನ ಶ್ರೀನಾಥ್‌, ಕೆ.ಬಿ.ಬೈಲಪ್ಪ. ಮಂಜುನಾಥ್‌, ಜಯದೇವ್‌, ನಾರಾಯಣಪ್ಪ, ಸುಬ್ಬರಾಯಪ್ಪ, ವೆಂಕಟಪತೆಪ್ಪ, ವೆಂಕಟಕೃಷ್ಣ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next