Advertisement

ಶಿವಕುಮಾರಶ್ರೀ ಜಯಂತಿ, ಗದ್ದುಗೆ ಪೂಜೆ: 112 ಶಿಶುಗಳಿಗೆ ಶಿವಕುಮಾರಶ್ರೀ ಹೆಸರು

09:26 AM Apr 02, 2019 | Nagendra Trasi |

ತುಮಕೂರು: ನಡೆದಾಡುವ ದೇವರು ಎಂದೇ ಜನಾನುರಾಗಿಯಾಗಿದ್ದ ಲಿಂಗೈಕ್ಯ ಡಾ.ಶ್ರೀ,ಶ್ರೀ ಶಿವಕುಮಾರ ಮಹಾಸ್ವಾಮಿಗಳ 112ನೇ ಜಯಂತಿ ಹಿನ್ನೆಲೆಯಲ್ಲಿ ಸೋಮವಾರ ತುಮಕೂರು ಸಿದ್ದಗಂಗಾಕ್ಷೇತ್ರದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು.

Advertisement

ಮಠದ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಯವರು ಶಿವಕುಮಾರಮಹಾಸ್ವಾಮೀಜಿಯ ಅವರ ಗುರುಗಳಾದ ಉದ್ದಾನಶ್ರೀಗಳ ಗದ್ದುಗೆಗೆ ಹಾಗೂ ಡಾ.ಶಿವಕುಮಾರಮಹಾಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಿದರು.

ಲಿ.|ಸಿದ್ದಗಂಗಾಶ್ರೀಗಳ 112ನೇ ಜಯಂತಿ ಹಿನ್ನೆಲೆಯಲ್ಲಿ ಮಠಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಹರಿದುಬರುತ್ತಿದ್ದು, ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸುತ್ತಿದ್ದಾರೆ. ಏತನ್ಮಧ್ಯೆ ಮಠದಲ್ಲಿ 112 ಶಿಶುಗಳಿಗೆ ಶಿವಕುಮಾರಶ್ರೀಗಳ ನಾಮಕರಣ ನಡೆಯಿತು.

Advertisement

ಗದ್ದುಗೆ ಮುಂಭಾಗ ವಿಭೂತಿ, ರುದ್ರಾಕ್ಷಿ ಹಾಗೂ ಧಾನ್ಯಗಳಿಂದ ಶ್ರೀಗಳ ಭಾವಚಿತ್ರ ಬಿಡಿಸಲಾಗಿತ್ತು. ಗದ್ದುಗೆಯನ್ನು ವಿವಿಧ ಪುಪ್ಪಗಳಿಂದ ಅಲಂಕರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next