Advertisement

ಕೃಷಿ ಮಸೂದೆಗಳಿಂದ ಕೃಷಿ ಕ್ಷೇತ್ರ ಸುಧಾರಣೆ : ಸಂಸದ ಶಿವಕುಮಾರ ಉದಾಸಿ

02:48 PM Dec 09, 2020 | sudhir |

ಹಾನಗಲ್ಲ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಮಸೂದೆಗಳು ಕೃಷಿ ಕ್ಷೇತ್ರ
ಸುಧಾರಣೆ ದಿಕ್ಕಿನಲ್ಲಿ ಕೊಂಡೊಯ್ಯುವ ಮಹತ್ವದ ನಿರ್ಧಾರವಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಸ್ಪಷ್ಟಪಡಿಸಿದರು.
ಈ ಕುರಿತು ಮಂಗಳವಾರ ಪ್ರಕಟಣೆ ನೀಡಿರುವ ಅವರು, ಈ ಸುಧಾರಣೆಗಳು ಮಾರುಕಟ್ಟೆ ಮೇಲಿನ ನಿಯಂತ್ರಣ ಸಡಿಲಿಸಿ
ರೈತರನ್ನು ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಲಿವೆ. ರೈತರ ಉತ್ಪನ್ನಗಳನ್ನು ತಮಗೆ ಬೇಕಾದ ಮಾರುಕಟ್ಟೆಯಲ್ಲಿ ಮಾರಲು,
ಅಂತಾರಾಜ್ಯ ಸೇರಿದಂತೆ ಹೊಸ ಅವಕಾಶಗಳು ಇರುವುದರಿಂದ ನ್ಯಾಯಯುತ ಬೆಲೆ ಪಡೆಯಬಹುದು. ಇದರೊಂದಿಗೆ ರೈತರಿಗೆ
ಪ್ರತಿಯೊಬ್ಬ ವ್ಯಾಪಾರಿ ಅದೇ ದಿನ ಅಥವಾ 3ದಿನಗಳೊಳಗೆ ಹಣ ಪಾವತಿಸುವುದು ಕಡ್ಡಾಯವಾಗಿದೆ. ಸಂಸ್ಥೆಗಳ ಜತೆಗಿನ
ಯಾವುದೇ ವಿವಾದ ಪರಿಹರಿಸುವ ವ್ಯವಸ್ಥೆ ಇರುವುದರಿಂದ ರೈತರಿಗೆ ಕಾನೂನು ರಕ್ಷಣೆ ಒದಗಿಸಲಾಗುವುದು ಎಂದಿದ್ದಾರೆ.

Advertisement

ವಿಪರ್ಯಾಸವೆಂದರೆ ರೈತರು ಹಾಗೂ ಕೃಷಿ ವಲಯದ ಹಿತದೃಷ್ಟಿಯಿಂದ ಜಾರಿಗೆ ತಂದಿರುವ ಕಾಯ್ದೆಗಳ ವಿರುದ್ಧ ಕಾಂಗ್ರೆಸ್‌
ಮತ್ತಿತರ ವಿರೋಧ ಪಕ್ಷಗಳು ಸುಳ್ಳು ಪ್ರಚಾರ ನಡೆಸುವ ಮೂಲಕ ರೈತರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುತ್ತಿವೆ. ನಮ್ಮ ಸರ್ಕಾರದ
ಯಾವುದೇ ಋಣಾತ್ಮಕ ಅಂಶಗಳು ಸಿಗದೆ ಈ ವಿಷಯವನ್ನೇ ರಾಜಕೀಯವಾಗಿ ಬಳಸಿಕೊಂಡಿವೆ. ಇದರಿಂದ ದಲ್ಲಾಳಿಗಳು,
ಪಟ್ಟಭದ್ರ ಹಿತಾಶಕ್ತಿಗಳ ಪರ ಹಾಗೂ ರೈತ ವಿರೋಧಿ  ಎಂದು ಸಾಬೀತುಗೊಳಿಸಿವೆ ಎಂದು ಕುಟುಕಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಆಂಜನೇಯ ದೇವಾಲಯ ನಿರ್ಮಾಣಕ್ಕೆ ಮುಸ್ಲಿಂ ವ್ಯಕ್ತಿಯಿಂದ ಭೂಮಿ ದಾನ

ಹಾವೇರಿ ಲೋಕಸಭಾ ವ್ಯಾಪ್ತಿಯ ಹಾವೇರಿ ಜಿಲ್ಲೆಯ ಹಾನಗಲ್ಲ, ಹಿರೇಕೆರೂರ, ಶಿಗ್ಗಾವಿಯಲ್ಲಿ ಈಗಾಗಲೇ ಬೆಂಬಲ ಬೆಲೆ
ಭತ್ತದ ಖರೀ ದಿ ಕೇಂದ್ರ ಸ್ಥಾಪಿಸಲಾಗಿದೆ. ಈಗಾಗಲೇ ಹಾನಗಲ್ಲ-ಹಿರೇಕೆರೂರು ಖರೀದಿ  ಕೇಂದ್ರಗಳಲ್ಲಿ 297 ರೈತರು 11,800 ಕ್ವಿಂಟಲ್‌ ಭತ್ತ ಖರೀದಿಗೆ ನೋಂದಣಿ ಮಾಡಿದ್ದಾರೆ. ಕಳೆದ ಸಾಲಿನಲ್ಲಿ 1021 ರೈತರು ನೋಂದಣಿ ಮಾಡಿಸಿ 33,113 ಕ್ವಿಂಟಲ್‌ ಭತ್ತ ಖರೀದಿ ಸಲಾಗಿತ್ತು.

ಗದಗ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 2,05,500 ಕ್ವಿಂಟಲ್‌ ಹತ್ತಿ ಖರೀದಿಸಿದ್ದು, 1963 ರೈತರಿಂದ 21,590 ಕ್ವಿಂಟಲ್‌ ಶೇಂಗಾ, 510 ರೈತರಿಂದ 1944 ಕ್ವಿಂಟಲ್‌ ಹೆಸರು, 30,586 ರೈತರಿಂದ 2,53,817 ಕ್ವಿಂಟಲ್‌ ಕಡಲೆ ಖರೀದಿಸಲಾಗಿತ್ತು. ಪ್ರಸಕ್ತ ವರ್ಷ ಈಗಾಗಲೇ 7,500 ಕ್ವಿಂಟಲ್‌ ಹತ್ತಿ ಖರೀದಿಸಲಾಗಿದೆ ಎಂದಿದ್ದಾರೆ.

Advertisement

ಯುಪಿಎ ಮತ್ತು ಎನ್‌ಡಿಎ ಸರ್ಕಾರದ ಅಡಿಯಲ್ಲಿ ಪಾವತಿಸಲಾದ ಎಂಎಸ್‌ಪಿ ತುಲನೆ ಮಾಡಿದರೆ ಭತ್ತದ ಮೇಲೆ ಶೇ. 240, ಗೋಧಿ ಮೇಲೆ ಶೇ.177, ಧಾನ್ಯಗಳ ಮೇಲೆ ಶೇ.7500, ಎಣ್ಣೆಕಾಳು-ಕೊಬ್ಬರಿ ಮೇಲೆ ಶೇ.1000 ಯುಪಿಎಗಿಂತ ಎನ್‌ಡಿಎ ಸರ್ಕಾರದಡಿ ವೃದ್ಧಿಯಾಗಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಿ.ಎಸ್‌ .ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ರೈತರ ಹಿತ ಕಾಯಲು ಬದ್ಧವಾಗಿವೆ. ನಮ್ಮ ರೈತರು ಪ್ರತಿಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡದೆ ಈ ಸುಧಾರಣೆಗಳ ದೀರ್ಘ‌ಕಾಲಿಕ ಅನುಕೂಲ ಅರಿಯುವ ವಿಶ್ವಾಸವಿದೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next