ಚಿಕ್ಕಬಳ್ಳಾಪುರ: ರಾಜ್ಯ ಕಾಂಗ್ರೆಸ್‌ಗೆ ಒಂದೆಡೆ ಮೈತ್ರಿ ಸರ್ಕಾರ ಸ್ಥಿರವಾಗಿ ಉಳಿಸಿಕೊಳ್ಳುವ ಸವಾಲಿದ್ದರೆ ಇನ್ನೊಂದಡೆ ಪಕ್ಷದೊಳಗೇ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆಂತರಿಕ ಕಲಹವನ್ನು ನಿಯಂತ್ರಿಸುವುದು ಭಾರಿ ತಲೆನೋವಾಗಿ ಪರಿಣಮಿಸಿದೆ.
ಬೆಳಗಾವಿಯ ಭಾರಿ ಭಿನ್ನಮತ ಒಂದು ಹಂತಕ್ಕೆ ತಣ್ಣಗಾದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿದ್ದ ಭಿನ್ನಮತ ಬಹಿರಂಗವಾಗಿ ಸ್ಫೋಟಗೊಂಡಿದೆ.
ಗೌರಿ ಬಿದನೂರು ಶಾಸಕ, ಸಚಿವ ಶಿವಶಂಕರ್ ರೆಡ್ಡಿ ಅವರು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ವಿರುದ್ಧ ಮಂಗಳವಾರ ತೀವ್ರ ಕಿಡಿ ಕಾರಿದ್ದಾರೆ.
‘ನಾವೆಲ್ಲಾ ವ್ಯವಸ್ಥೆಯ ಪಾಲುದಾರರು. ಇಲ್ಲಿ ಯಾರ ಪಾಳೆಗಾರಿಕೆ ನಡೆಯುವುದಿಲ್ಲ. ಯಾರಿಗೂ ಕೊಂಬುಗಳಿಲ್ಲ. ಸಾಮಾನ್ಯ ಜನ ನಾವು,ಜನರೇ ನಮ್ಮನ್ನು ಆಯ್ಕೆ ಮಾಡಿದ್ದು, ನಮ್ಮನ್ನು ಸುಮ್ಮನೆ ಕೂರಿಸುವ ಶಕ್ತಿ ಜನರಿಗೆ ಇದೆ.ಇಲ್ಲಿ ದೊಡ್ಡವರು ಚಿಕ್ಕವರು ಎಂದಿಲ್ಲ’ ಎಂದು ಸುಧಾಕರ್ ವಿರುದ್ದ ಕಿಡಿ ಕಾರಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸುಧಾಕರ್ ನಾನು ಸಚಿವ ಶಿವಶಂಕರ್ ರೆಡ್ಡಿ ವಿರುದ್ಧ ಹೈಕಮಾಂಡ್‌ಗೆ, ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರಿಗೆ ದೂರು ನೀಡುವುದಾಗಿ ಗುಡುಗಿದ್ದಾರೆ.