Advertisement

ಶಿವಾಜಿ ಸ್ವರಾಜ್ಯ ಕಲ್ಪನೆ ಮೂಡಿಸಿದ ನಾಯಕ; ಸಂಸದ ಕರಡಿ ಸಂಗಣ್ಣ

04:51 PM Feb 25, 2023 | Team Udayavani |

ಕೊಪ್ಪಳ: ಅಪ್ರತಿಮ ದೇಶಭಕ್ತರಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರು ಸ್ವರಾಜ್ಯ ಕಲ್ಪನೆ ಮೂಡಿಸಿದ ನಾಯಕರಾಗಿದ್ದಾರೆ ಎಂದು ಸಂಸದ ಕರಡಿ ಸಂಗಣ್ಣ ಅವರು ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಶುಕ್ರವಾರ ನಡೆದ ಶ್ರೀ ಛತ್ರಪತಿ ಶಿವಾಜಿ ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ರಾಷ್ಟ್ರಾಭಿಮಾನಕ್ಕೆ ಶಿವಾಜಿ ಎನ್ನುವ ಹೆಸರೇ ಪ್ರೇರಣೆಯಾಗಿದೆ. ನಮ್ಮ ಸಂಸ್ಕೃತಿ ಹಾಗೂ ರಾಷ್ಟ್ರದ ಸಂರಕ್ಷಣೆಗೆ ಹೋರಾಡಿದ ಶ್ರೇಷ್ಠ ನಾಯಕರಾಗಿದ್ದಾರೆ. ಮಾತೆ ಜೀಜಾಬಾಯಿಯವರು ಶಿವಾಜಿಗೆ ಪ್ರೇರಣೆಯಾಗಿದ್ದು, ಬಾಲ್ಯದಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿದರು. ಶಿವಾಜಿಯೂ ಅಪ್ರತಿಮ ದೇಶಭಕ್ತರಾಗಿ ಮೆರೆದಿದ್ದು, ಇಂತಹ ಹೆಮ್ಮೆಯ ಪುತ್ರನನ್ನು ಪಡೆದಿರುವುದು ಭಾರತಾಂಬೆಯ ಪುಣ್ಯ ಎಂದರು.

ಶಿವಾಜಿ ಮಹಾರಾಜರ ದೇಶಾಭಿಮಾನದ ಗುಣಗಳನ್ನು ನಾವುಗಳು ಬೆಳೆಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರೂ ಶಿಕ್ಷಣವಂತರಾಗಿ ಸಂಘಟಿತರಾಗಿ ಬಾಳಬೇಕು. ಈ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು. ಎಂಎಲ್‌ಸಿ ಹೇಮಲತಾ ನಾಯಕ ಮಾತನಾಡಿ, ಮರಾಠ ಸಮುದಾಯದವರ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ. ಅಲ್ಲದೇ ಮರಾಠ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಬಜೆಟ್‌ನಲ್ಲಿಯೂ ಅನುದಾನ ನೀಡಿದೆ ಎಂದರು.

ಕರ್ನಾಟಕ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಜಿ. ಮೊಳೆ ಮಾತನಾಡಿ, ಶಿವಾಜಿ ಮಹಾರಾಜರಿಗೂ ಹಾಗೂ ಕರ್ನಾಟಕದ ನೆಲಕ್ಕೂ ಅಭಿನಾಭವ ಸಂಬಂಧವಿದೆ. ರಾಜ್ಯ ಸರ್ಕಾರವು ನಿಮಗಕ್ಕೆ 100 ಕೋಟಿ ನೀಡಿದೆ. ನಿಗಮದ ಸೌಲಭ್ಯಗಳನ್ನು ಸಮುದಾಯದವರು ಪಡೆದುಕೊಳ್ಳಬೇಕು ಎಂದರು.

ಹಿರಿಯ ಲೇಖಕಿ ಸಾವಿತ್ರಿ ಮುಜುಮದಾರ್‌ ಅವರು ಛತ್ರಪತಿ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿ, ಭಾರತದ ಇತಿಹಾಸದಲ್ಲಿ ಸುಪ್ರಸಿದ್ಧ ಸಾಮ್ರಾಜ್ಯವನ್ನು ಸ್ಥಾಪಿಸಿದ ಶಿವಾಜಿಯವರು ಚಿಕ್ಕ ವಯಸ್ಸಿನಲ್ಲೇ ದೇಶಾಭಿಮಾನ ಬೆಳೆಸಿಕೊಂಡಿದ್ದರು. ಬಾಲ್ಯದಲ್ಲಿಯೇ ಸೈನ್ಯವನ್ನು ಕಟ್ಟಿದಂತಹ ಕೀರ್ತಿ ಶಿವಾಜಿಯವರದ್ದಾಗಿದೆ. ಅವರ ಸಾಮ್ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇತ್ತು.

Advertisement

ಮಹಿಳೆಯರ ಮೇಲೆ ಕಣ್ಣು ಹಾಕುವಂತಹ ದುಷ್ಟರ ಕಣ್ಣುಗಳನ್ನು ಕೀಳುವ ಶಿಕ್ಷೆ ನೀಡಲಾಗುತ್ತಿತ್ತು. ಶಿವಾಜಿ ಮಹಾರಾಜರು ರೈತರ ಹಾಗೂ ಪರಿಸರದ ಬಗ್ಗೆ ಅತ್ಯಂತ ಕಾಳಜಿಯುಳ್ಳವರಾಗಿದ್ದರು. ಎಲ್ಲ ಪ್ರಜೆಗಳಿಗೂ ಸಮಬಾಳು ನೀಡಿದ ಮಹಾರಾಜರು. ಇಂತಹ ಮಹಾನ್‌ ಶಿವಾಜಿ ಅವರಿಗೆ ಅವರ ತಾಯಿಯೇ ಉತ್ತಮ ವ್ಯಕ್ತಿತ್ವ ರೂಪಿಸುವ ಶಕ್ತಿಯಾಗಿದ್ದರು. ಈ ನಿಟ್ಟಿನಲ್ಲಿ ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಜೊತೆಗೆ ದೇಶಾಭಿಮಾನ ಬೆಳೆಸಬೇಕು
ಎಂದರು.

ಸಮಾರಂಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್‌, ಎಡಿಸಿ ಸಾವಿತ್ರಿ ಕಡಿ, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ವಿರೂಪಾಕ್ಷಪ್ಪ, ಗಣ್ಯರಾದ ಸಿ.ವಿ. ಚಂದ್ರಶೇಖರ, ವೀರೇಶ ಮಹಾಂತಯ್ಯನಮಠ, ಸೋಮಶೇಖರ ಹಿಟ್ನಾಳ, ಸಮಾಜದ ಮುಖಂಡರಾದ ಕಮಲೇಶರಾವ್‌, ನಾಗೇಶ ಬಡಿಗೇರ, ಮಾರುತಿ ಕಾರಟಗಿ, ವಿಶ್ವನಾಥ ಅರಕೇರಿ, ಲಕ್ಷ್ಮಣ, ದಿನೇಶ ಆರ್ಯರ್‌, ಉಮೇಶ ಸುರ್ವೇ, ನಿಂಗರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಯಂತ್ಯುತ್ಸವ ನಿಮಿತ್ತ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಭ ಮಾರ್ಗವಾಗಿ ತುಳಜಾಭವಾನಿ ದೇವಸ್ಥಾನದವರೆಗೆ ವಿಜೃಂಭಣೆಯಿಂದ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next