Advertisement

ಶಿವಾಜಿ ಮಹಾರಾಜರ ಪುತ್ಥಳಿ ಮೆರವಣಿಗೆ

02:04 PM Oct 15, 2018 | |

ವಿಜಯಪುರ: ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಬೃಹತ್‌ ಕಂಚಿನ ಪುತ್ಥಳಿಯನ್ನು ನಗರದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು. 

Advertisement

ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮೇಲ್ಮನೆ ಸದಸ್ಯ ಅರುಣ ಶಹಾಪುರ, ಸಿದ್ದೇಶ್ವರ ಬ್ಯಾಂಕ್‌ ಅಧ್ಯಕ್ಷ ಹರ್ಷಗೌಡ ಪಾಟೀಲ ಇತರರು ಛತ್ರಪತಿ ಶಿವಾಜಿ ಮಹಾರಾಜ ಅಶ್ವಾರೂಢ ಕಂಚಿನ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಲಕ್ಷ್ಮೀ ದೇವಾಲಯದ ಬಳಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೆರವಣಿಗೆಯನ್ನು ಭವ್ಯವಾಗಿ
ಸ್ವಾಗತಿಸಿದರು, ನಂತರ ವಿಶೇಷ ಪೂಜೆ ಸಲ್ಲಿಸಿ ಬೀಳ್ಕೊಟ್ಟರು. 

ಮಿರಜ್‌ನ ಕಲಾವಿದರು ರೂಪಿಸಿರುವ ಈ ಪುತ್ಥಳಿ 9 ಅಡಿ ಎತ್ತರವಿದ್ದು, 1.5 ಟನ್‌ ತೂಕವಿರುವ ಪುತ್ಥಳಿಯು ನಗರದ ಸಿದ್ದೇಶ್ವರ ದೇವಸ್ಥಾನ, ಶಹಾಪೇಟಿಯ ಮಹಾದೇವ ಗುಡಿ ಮಾರ್ಗವಾಗಿ ಭತಗುಣಕಿ ಗ್ರಾಮಕ್ಕೆ ತೆರಳಿತು. ಅ. 15ರಂದು ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ಶಿವಾಜಿ
ಮಹಾರಾಜರ ಪುತ್ಥಳಿ ಪ್ರತಿಷ್ಠಾನ ಸಮಾರಂಭ ಜರುಗಲಿದೆ. 

ಸಂಭಾಜಿರಾವ್‌ ಮಿಸಾಳೆ, ರುಕುಮುದ್ದೀನ್‌ ತದ್ದೇವಾಡ, ಸುಭಾಷ್‌ ಬಾಬರ, ಶಿವಾಜಿ ಮಾನೆ, ಬಂಡು ಪವಾರ, ಜ್ಯೋತಿರಾಮ ಪವಾರ, ಡಾ| ಸದಾಶಿವ ಪವಾರ, ಬಾಪೂಜಿ ನಿಕ್ಕಂ, ರವಿಕಾಂತ ಸಿಂಧೆ, ಆನಂದ ಧುಮಾಳೆ, ರಾಹುಲ್‌ ಜಾಧವ, ರಾಜೇಶ ದೇವಗಿರಿ, ವಿಜಯಕುಮಾರ ಚವ್ಹಾಣ,
ಶಂಕರ ಕನಸೆ, ಮಹಾದೇವ ಪವಾರ, ರಂಜೀತ ಚವ್ಹಾಣ, ತಾನಾಜಿ ಜಾಧವ, ಸಂಜಯ ಜಾಧವ, ವಿಠ್ಠಲ ಚವ್ಹಾಣ, ಸುರೇಶ ಸಂಕಪಾಳ, ರಮೇಶ ಯಾಧವ, ಕೇತನ ಚವ್ಹಾಣ, ದತ್ತಾ ಮೋರೆ, ರಾಜು ಮೋರೆ, ಅರವಿಂದ ಜಾಧವ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next