Advertisement
ಶನಿವಾರ ಮಧ್ಯಾಹ್ನ 1.41 ರಿಂದ 2.10ರ ನಡುವೆಯ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಿತು. ಬಳಿಕ ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿ ಜಂಬೂ ಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದರು. ಈ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹಾದೇವಪ್ಪ, ಕನ್ನಡ-ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಜೊತೆಗಿದ್ದರು. ಜಂಬೂಸವಾರಿಯ ಚಾಮುಂಡೇಶ್ವರಿ ದೇವಿ ಪುಷ್ಪಾರ್ಚನೆ ವೇಳೆ ಸಂಸದ ಹಾಗೂ ರಾಜವಂಶಸ್ಥ ಯದುವೀರ ಒಡೆಯರ್ ಗೈರಾಗಿದ್ದರು.
Related Articles
Advertisement
ಮೈಸೂರು ದಸರಾ ಮಹೋತ್ಸವ ವಿಜಯದಶಮಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಅರಮನೆಯಿಂದ ಬನ್ನಿಮಂಟಪದವರೆಗೆ 31 ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ವೈಶಿಷ್ಟ್ಯ, ಆಚಾರ ವಿಚಾರ, ಭೌಗೋಳಿಕ ಹಿನ್ನೆಲೆ ಹಾಗೂ ಇಲಾಖಾವಾರು, ನಿಗಮ ಮಂಡಳಿ , ಸರ್ಕಾರದ ಯೋಜನೆಗಳು, ಸಾಧನೆಗಳ ಕುರಿತ 51 ಸ್ತಬ್ಧ ಚಿತ್ರಗಳು ಜಂಬೂಸವಾರಿಯಲ್ಲಿ ಭಾಗಿಯಾಗಿದ್ದವು. ಜನರಿಂದ ತಮಟೆ, ಡೋಲು ವಾದ್ಯಕ್ಕೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ವಿಜಯದಶಮಿಯ ಜಂಬೂಸವಾರಿ ಮೆರವಣಿಗೆ ಆರಂಭಕ್ಕಿಂತ ಮೊದಲು ಮಳೆಯ ಸಿಂಚನದಿಂದ ಮೆರವಣಿಗೆಯು ಅರ್ಧ ತಾಸು ವಿಳಂಬವಾಗಿ ಆರಂಭವಾಯಿತು. ವಿಶ್ವವಿಖ್ಯಾತ ಜಂಬೂಸವಾರಿಯನ್ನು ಕೋಟ್ಯಂತರ ಭಕ್ತರು ಕಾತರ ಕಾದು ಕಣ್ತಿಂಬಿಕೊಂಡಿದ್ದಾರೆ. ಅಂಬಾರಿಯಲ್ಲಿ ಆಸಿನವಾಗಿದ್ದ ನಾಡ ದೇವತೆ ಚಾಮುಂಡೇಶ್ವರಿಯನ್ನು ಕಂಡು ಭಕ್ತರು ಪುನೀತರಾದರು. ಇನ್ನು ಜಂಬೂಸವಾರಿ ನಡೆಯುವ ದಾರಿಯುದ್ದಕ್ಕೂ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.