ಹಾವೇರಿ: ಛತ್ರಪತಿ ಶಿವಾಜಿ ಮಹಾರಾಜ ಕೆಚ್ಚೆದೆಯ ಹೋರಾಟಗಾರ, ತಾಯಿ ಜೀಜಾಬಾಯಿ, ಗುರು ಕೊಂಡೋಜಿ ಅವರ
ಮಾರ್ಗದರ್ಶನದಲ್ಲಿ ಧೈರ್ಯ, ಶೌರ್ಯ ಹಾಗೂ ಸಾಹಸದಿಂದ ಉತ್ತಮ ಆಡಳಿತ ನಡೆಸಿದರು ಎಂದು ಉಪನ್ಯಾಸಕರಾದ ರೇವತಿ ತಿಳವಳ್ಳಿ ಹೇಳಿದರು.
Advertisement
ನಗರದ ತಾಲೂಕು ಮರಾಠಾ ಭವನದಲ್ಲಿ ಜರುಗಿದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾಜಿ ಅಪ್ರತಿಮ ದೇಶಭಕ್ತ, ಅವರ ಜೀವನ ಚರಿತ್ರೆಯನ್ನು ಯುವ ಪೀಳಿಗೆ ತಿಳಿದುಕೊಳ್ಳಬೇಕು ಎಂದರು.
ಸಮಾಜದ ಮುಖಂಡರಾದ ಮುಂಜೇಜಿ ವಕೀಲರು, ಉಮೇಶ ವಾಘ, ಮಾಲತೇಶ ಕದರಿ, ದೇವರಾಜ ಗುಂಡೆ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಸ್ವಾಗತಿಸಿದರು.