Advertisement

“ಶಿವಾಜಿ ಮಹಾರಾಜ್‌-ಅಖಂಡ ಹಿಂದೂ ಸಮಾಜಕ್ಕೆ ಆದರ್ಶಪ್ರಾಯ’

04:11 PM Mar 16, 2017 | |

ಉಡುಪಿ: ಶಿವಾಜಿ ಮಹಾರಾಜ್‌ ಯಾವುದೋ ಒಂದು ಜಾತಿ, ಸಂಪ್ರದಾಯಕ್ಕೆ ಸೀಮಿತವಾಗದೆ ಅಖಂಡ ಹಿಂದೂ ಸಮಾಜಕ್ಕೆ ಆದರ್ಶಪ್ರಾಯವಾಗಿರುವ ವ್ಯಕ್ತಿ. ಶಿವಾಜಿಯ ಗುಣ, ಆದರ್ಶಗಳನ್ನು ಪಾಲಿಸಬೇಕು ಎಂದು ಉಡುಪಿ ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿಯ ಮುಖಂಡ ವಿಜಯಕುಮಾರ್‌ ಅವರು ಹೇಳಿದರು.

Advertisement

ಛತ್ರಪತಿ ಶಿವಾಜಿ ವಿವಿಧೋದ್ಧೇಶ ಸಹಕಾರ ಸಂಘ ಹಾಗೂ ರಾಜೇ ಛತ್ರಪತಿ ಗೋಲ್ಡ್‌ ಆ್ಯಂಡ್‌ ಸಿಲ್ವರ್‌ ರಿಫೈನರಿ ಅಸೋಸಿಯೇಶನ್‌ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ನೈವೇದ್ಯ ಹೊಟೇಲ್‌ ಸಭಾಂಗಣದಲ್ಲಿ ಬುಧವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ 390ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೂಗಳು ಇವತ್ತು ಇದ್ದಾರೆಂದರೆ ಅದಕ್ಕೆ ಕಾರಣ ಶಿವಾಜಿಯ ಅಂದಿನ ಹೋರಾಟ. ಮೊಘಲರ ಕಾಲದಲ್ಲಿ ಗೋಹತ್ಯೆ, ಅತ್ಯಾಚಾರ, ಅನ್ಯಾಯಗಳು ಮಿತಿಮೀರಿದಾಗ ಜನ್ಮ ತಾಳಿದ ಶಿವಾಜಿಯು ಸಂತರೀರ್ವರ ಮಾರ್ಗದರ್ಶನ, ಕುಲದೇವರು ಅಂಬಾಭವಾನಿಯ ಆಶೀರ್ವಾದದಲ್ಲಿ ಹಿಂದ್‌ ಸ್ವರಾಜ್ಯ ಸ್ಥಾಪನೆ ಮಾಡಿ ಹೋರಾಟ ನಡೆಸಿದರು ಎಂದರು.

ಛತ್ರಪತಿ ಶಿವಾಜಿ ಮಹಾರಾಜರ ಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಹರಿದಾಸ ಬಿ.ಸಿ. ರಾವ್‌ ಶಿವಪುರ ಅವರು ಛತ್ರಪತಿ ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಉಡುಪಿ ಛತ್ರಪತಿ ಶಿವಾಜಿ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ದಿನೇಶ್‌ ಸಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ರಾಜೇ ಛತ್ರಪತಿ ಗೋಲ್ಡ್‌ ಆ್ಯಂಡ್‌ ಸಿಲ್ವರ್‌ ರಿಫೈನರಿ ಅಸೋಸಿ ಯೇಶನ್‌ ಅಧ್ಯಕ್ಷ ಮಹಾದೇವ್‌ ಭಗವಾನ್‌ ಜಾಂಕರ್‌, ನ್ಯಾಯವಾದಿಗಳ ವಿವಿಧೋದ್ಧೇಶ ಸಹಕಾರ ಸಂಘದ ಉಪಾಧ್ಯಕ್ಷ ಮಂಜುನಾಥ ಎಸ್‌.ಕೆ., ಕ್ಷತ್ರಿಯ ಮರಾಠ ಪರಿಷತ್‌ ಕಾರ್ಕಳ ತಾಲೂಕು ಪ್ರ.ಕಾರ್ಯದರ್ಶಿ ಸಂತೋಷ್‌ ರಾವ್‌ ಕವಡೆ, ಹಿರಿಯಡಕ ವಲಯ ಬಜರಂಗದಳ ಸಂಚಾಲಕ ಉದಯ ನಾಯ್ಕ, ತಾ.ಪಂ. ಸದಸ್ಯ ಸುಭಾಷ್‌ ನಾಯ್ಕ, ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ಅಧ್ಯಕ್ಷ ಆರ್‌.ಸಿ. ನಾಯ್ಕ, ಮರಾಠ ಸ್ವಾಭಿಮಾನ ಜಾಗೃತಿ ಪ್ರತಿಷ್ಠಾನದ ಪ್ರ.ಕಾರ್ಯದರ್ಶಿ ಅಜಿತ್‌ ಕುಮಾರ್‌ ನಾಯ್ಕ ಉಪಸ್ಥಿತರಿದ್ದರು.ಗಣೇಶ್‌ ಸ್ವಾಗತಿಸಿದರು. ಯಶಸ್ವಿನಿ ಅಮೀನ್‌ ಕಾರ್ಯಕ್ರಮ ನಿರೂಪಿಸಿದರು.

Advertisement

“ಹಿಂದೂ ರಾಷ್ಟ್ರಕ್ಕಾಗಿ ಹೋರಾಟ’
 ಮೊಘಲರ ಕಾಲದಲ್ಲಿದ್ದ ಸನ್ನಿವೇಶವೇ ಇಂದು ನಿರ್ಮಾಣಗೊಂಡಿದೆ. ಭಯೋತ್ಪಾದನೆ, ಮತಾಂತರ, ಲವ್‌ಜಿಹಾದ್‌, ಅತ್ಯಾಚಾರ ಹೆಚ್ಚುತ್ತಲಿದೆ. ಅಂದು ಶಿವಾಜಿ ಹಿಂದ್‌ ವೇ ಸ್ವರಾಜ್ಯ ನಿರ್ಮಾಣ ಮಾಡಿದಂತೆ ಇಂದು ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಹೋರಾಟ ಮಾಡುವ ಸಮಯ ಬಂದೊದಗಿದೆ. ತಮ್ಮ ವಾಹನಗಳಲ್ಲಿ ಶಿವಾಜಿಯ ಚಿತ್ರಗಳನ್ನು ಹಾಕಿಕೊಂಡು ಹೋಗುವುದು ಮಾತ್ರವಲ್ಲದೆ ಶಿವಾಜಿಯ ನೈಜ ಗುಣಾದರ್ಶಗಳನ್ನು ಪಾಲನೆ ಮಾಡಿಕೊಂಡು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಎಂದು ವಿಜಯ ಕುಮಾರ್‌ ಹೇಳಿದರು.
 

Advertisement

Udayavani is now on Telegram. Click here to join our channel and stay updated with the latest news.

Next