ಚಿಂಚೋಳಿ: ಛತ್ರಪತಿ ಶಿವಾಜಿ ನ್ಯಾಯ ನೀತಿ ಧರ್ಮಕ್ಕಾಗಿ ಯುದ್ದ ಮಾಡಿದ ಧಿಧೀಮಂತ ವೀರ ಪರಾಕ್ರಮಿ ಹೋರಾಟಗಾರ. ಹಿಂದು ಧರ್ಮ ಉಳಿಸಿದ ಅಪ್ಪಟ ದೇಶಪ್ರೇಮಿಯಾಗಿದ್ದನು ಎಂದು ಜಿಲ್ಲಾ ಮರಾಠ ಸಮಾಜ ಅಧ್ಯಕ್ಷ ಆರ್.ಡಿ. ಜಗದಾಳೆ ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ 390ನೇ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಮರಾಠ ಸಮಾಜಕ್ಕೆ ಸ್ಥಾನಮಾನ ಸಿಗುತ್ತಿಲ್ಲ. ನಮ್ಮ ಸಮಾಜದ ಸಮಸ್ಯೆಗಳಿಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುವರಿಲ್ಲ.
ಮರಾಠ ಸಮಾಜವನ್ನು 2ಎ ವರ್ಗಕ್ಕೆ ಸೇರಿಸಬೇಕು ಮತ್ತು ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಸರಕಾರವನ್ನು ಅಗ್ರಹಿಸಿದರು. ಮರಾಠ ಸಮಾಜದ ಮುಖಂಡ ಆರ್.ಡಿ. ಮಾನೆ ಮಾತನಾಡಿ, ಛತ್ರಪತಿ ಶಿವಾಜಿ ಸ್ವರಾಜ್ವ ಸ್ಥಾಪಿಸಿದ ಮಹಾವೀರ. ಆತ ಎಂದಿಗೂ ಯಾವದೇ ಜಾತಿ ವಿರೋಧಿಯಾಗಿರಲಿಲ್ಲ.
ಮೂಢನಂಬಿಕೆ ವಿರೋಧಿಧಿಸುತ್ತಿದ್ದ ಶಿವಾಜಿ ಧೈರ್ಯ ಮತ್ತು ಶೂರನಾಗಿದ್ದ. ಆತನ ಜೀವನ ಚರಿತ್ರೆ ನಮ್ಮೆಲ್ಲರಿಗೂ ಅತಿ ಮಹತ್ವದಾಗಿದೆ ಎಂದು ಹೇಳಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ಇಂದುಮತಿ ದೇಗಲಮಡಿ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ತಾಲೂಕು ಮರಾಠ ಸಮಾಜದ ಅಧ್ಯಕ್ಷ ಶಾಮಸುಂದರ ಪವಾರ, ರಾಜು ನವಲೇ, ಅತೀಶ ಪವಾರ, ಡಾ| ವಿಶ್ವನಾಥ ಪವಾರ, ವಿಷ್ಣುರಾವ ಬಸೂದೆ, ಸುಧಾಕರ ಪಾಟೀಲ, ಸುರೇಶ ಪಾಟೀಲ,
ರವಿಕುಮಾರ ಪಾಟೀಲ, ಮಧುಕರ ಪಾಟೀಲ, ಶೇಖ್ ಭಕ್ತಿಯಾರ, ನರಸಿಂಗರಾವ ಪವಾರ, ಗಣಪತರಾವ, ಕೆ.ಎಂ. ಬಾರಿ, ಲಕ್ಷಣ ಆವಂಟಿ, ಪಿಎಸ್‌ಐ ಶರಣಬಸಪ್ಪ ಕೋಡ್ಲಾ, ರಾಮಶೆಟ್ಟಿ ಪವಾರ ಇದ್ದರು. ತಹಶೀಲ್ದಾರ ಪ್ರಕಾಶ ಕುದುರೆ ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಲಾಮೂರ ನಿರೂಪಿಸಿದರು. ಬಿಇಒ ಜರ್ನಾಧನರೆಡ್ಡಿ ವಂದಿಸಿದರು.