Advertisement

ಶಿವಾಜಿ ನಾಡು ಕಂಡ ಅಪ್ರತಿಮ ಅರಸ

03:18 PM Feb 20, 2018 | |

ಸುರಪುರ: ಛತ್ರಪತಿ ಶಿವಾಜಿ ಮಹಾರಾಜ ನಾಡಕಂಡ ಅಪ್ರತಿಮ ಅರಸ. ಹಿಂದೂ ಸ್ವರಾಜ ನಿರ್ಮಾಣ ಆತನ ಕನಸ್ಸಾಗಿತ್ತು. ಆತನ ಧೈರ್ಯ ಇಂದಿನ ಯುವಕರಿಗೆ ಆದರ್ಶವಾಗಲಿ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ
ಹೇಳಿದರು.

Advertisement

ಶಿವಾಜಿ ಜಯಂತ್ಯುತ್ಸವ ಅಂಗವಾಗಿ ಡಾ| ಅಂಬೇಡ್ಕರ್‌ ವೃತ್ತದ ಬಳಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜ ಭಾವಚಿತ್ರದ ಮೆರವಣಿಗೆಗೆ ಅವರು ಚಾಲನೆ ನೀಡಿ ಮಾತನಾಡಿ, ಶಿವಾಜಿ ಮಹಾರಾಜ, ನಾಲ್ವಡಿ
ರಾಜಾ ವೆಂಕಟಪ್ಪ ನಾಯಕ, ಚಿತ್ರದುರ್ಗದ ಮಧುಕರಿ ನಾಯಕ, ಕೆಳದಿಯ ರಾಣಿ, ಕಿತ್ತೂರು ರಾಣಿ ಇವರೆಲ್ಲ ಸ್ವರಾಜ
ನಿರ್ಮಾಣಕ್ಕಾಗಿ ತಮ್ಮ ಜೀವವನ್ನೆ ಪಣಕ್ಕಿಟ್ಟರು. ಅವರ ಹೋರಾಟ, ತ್ಯಾಗ ನಮಗೆಲ್ಲ ಸ್ಫೂರ್ತಿದಾಯಕವಾಗಿವೆ
ಎಂದು ಗುಣಗಾನ ಮಾಡಿದರು.

ನಂತರ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಿವಾಜಿ ಭಾವಚಿತ್ರಕ್ಕೆ ತಹಶೀಲ್ದಾರ್‌ ಸುರೇಶ ಅಂಕಲಗಿ ಪೂಜೆ ಸಲ್ಲಿಸಿದರು. ಬಿಇಒ, ಸಿಡಿಪಿಒ, ಅಲ್ಪ ಸಂಖ್ಯಾತ ಹೊರತುಪಡಿಸಿ ಉಳಿದ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು.

ಗ್ರೇಡ್‌-2 ತಹಶೀಲ್ದಾರ್‌ ಸೋಫಿಯಾ ಸುಲ್ತಾನ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೂಗೂರೇಶ ವಾರದ ವೇದಿಕೆಯಲ್ಲಿದ್ದರು. ಸಮಾಜದ ಮುಖಂಡರಾದ ರಾಮಚಂದ್ರ ಟೊಣಪೆ, ರಾಜು ಪುಲ್ಸೆ, ಭೂಮದೇವ ಮಹೇಂದ್ರಕರ್‌, ರಾಘವೇಂದ್ರ ಸಾಳುಂಕೆ, ವಿನೋದ, ನಿತೀಶ, ಪ್ರೇಮ ಮಹೇಂದ್ರಕರ್‌, ನಾಗರಾಜ, ಅಮೂಲ ದೋತ್ರೆ, ಅಂಬಾಜಿ ಕಾಂಬ್ಳೆ, ವಿಶ್ವನಾಥ ಚಿಲ್ಲಾಳ, ಶುಭಾಷ ಮಹೇಂದ್ರಕರ್‌, ರಮೇಶ ಚವ್ಹಾಣ, ಧನಪಾಲ ಹಂಚಾಟೆ, ಹಣಮಂತ ಚಿಲ್ಲಾಳ, ತುಕಾರಾಮ ಟೊಣಪೆ, ನಿತೀನ್‌ ಬೋಸ್ಲೆ, ಅಂಬಾಜಿ ಉಭಾಳೆ, ಮನೋಹರ ಚಿಲ್ಲಾಳ, ಮೋತಿರಾಮ ಚೌದ್ರಿ, ಜಟ್ಟಿಂಗ ಚೌದ್ರಿ ಇದ್ದರು. 

ಛತ್ರಪತಿ ಶಿವಾಜಿ ತತ್ವಾದರ್ಶ ಪಾಲಿಸಿ 
ಕಕ್ಕೇರಾ: ದೇಶಾಭಿಮಾನಿ ಛತ್ರಪತಿ ಶಿವಾಜಿ ಮಹಾರಾಜರ ತತ್ವಾದರ್ಶಗಳು ಇಂದಿನ ಯುವಕರಿಗೆ ಅಗತ್ಯ ಎಂದು ಮುಖಂಡ ರಾಜುಗೌಡ ಚೆನ್ನಪಟ್ಟಣ ಹೇಳಿದರು.

Advertisement

ಸಮೀಪದ ಹುಣಸಿಹೊಳೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತ ಉದ್ಘಾಟನೆ ಮತ್ತು ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚಿಕ್ಕ ವಯಸ್ಸಿನಲ್ಲಿಯೇ ಹೋರಾಟದ ಮನೋಭಾವನೆ ಬೆಳೆಸಿಕೊಂಡು, ಸದೃಢ ಭಾರತ ನಿರ್ಮಾಣಕ್ಕೆ ಸಂಕಲ್ಪ ಹೊಂದಿದ ಧೀಮಂತ ನಾಯಕ ಶಿವಾಜಿ ಎಂದು ತಿಳಿಸಿದರು.

ವಿ.ಎಚ್‌.ಪಿ. ಅಧ್ಯಕ್ಷ ಶರಣು ನಾಯಕ ಸುರಪುರ ಮಾತನಾಡಿ, ಶಿವಾಜಿ ಹೋರಾಟದ ಬದುಕು, ತತ್ವಾದರ್ಶಗಳು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಸಾಗಿದಾಗ ದೇಶ ಬದಲಾವಣೆ ಆಗಲು ಸಾಧ್ಯ ಎಂದರು.

ಗ್ರಾಪಂ ಅಧ್ಯಕ್ಷ ಸಂಜೀವ ನಾಯಕ ಶಿವಾಜಿ ವೃತ್ತ ಉದ್ಘಾಟಿಸಿದರು. ಈ ಸಂದರ್ಭ ಸಿದ್ದಪ್ಪ ಜೋಹರ್‌, ಗ್ಯಾನಪ್ಪ ಕಂಬಾಳ, ಪ್ರಕಾಶ ಬಡಿಗೇರ, ಬಾಲಪ್ಪ ದೊಡ್ಡಮನಿ, ಮಲ್ಲಯ್ಯ ಗೋ ಕಲ್‌, ದಯಾನಂದ ಭಜಂತ್ರಿ, ಸಿದ್ದಪ್ಪ ನಂದೇಲಿ, ಭೀಮಯ್ಯ, ರಾಮಚಂದ್ರ, ಸೋಮನಾಥ ಇದ್ದರು.

ಸ್ವರಾಷ್ಟ್ರ ಚಿಂತನೆ ಮೈಗೂಡಿಸಿಕೊಳ್ಳಿ: ಶಿರವಾಳ 
ಶಹಾಪುರ: ಭಾರತದ ಪ್ರತಿಯೊಬ್ಬ ನಾಗರಿಕರೆಲ್ಲರೂ ಯಾವುದೇ ಪಂಗಡ, ಧರ್ಮ ಜಾತಿಯಾಗಿರಲಿ ನಾವೆಲ್ಲ ಭಾರತೀಯರು ಎನ್ನುವ ಭಾವ ಜಗತ್ತಿನಾದ್ಯಂತ ಪ್ರಸರಿಸಬೇಕಿದೆ. ಆಗ ಭಾರತ ಮಾತೆ ವಿಶ್ವಮಾತೆಯಾಗಿ ಹೊರಹೊಮ್ಮಲು ಸಾಧ್ಯ ಎಂದು ಶಾಸಕ ಗುರು ಪಾಟೀಲ್‌ ಶಿರವಾಳ ಹೇಳಿದರು. ಇಲ್ಲಿನ ನಗರಸಭೆ ಆವರಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜದ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಜನರೆಲ್ಲ ಒಗ್ಗಟ್ಟಾಗಿ ಭಾರತ ದೇಶದಲ್ಲಿ ವಾಸಿಸುವ ನಮ್ಮಗಳ ಸಂಪ್ರದಾಯ, ಸಂಸ್ಕೃತಿ ಆಚರಣೆಗಳಲ್ಲಿ ಹಲವಾರು ಬದಲಾವಣೆಗಳಿದ್ದರು, ನಾವೆಂದು ಭಿನ್ನಾಭಿಪ್ರಾಯ ಹೊಂದುವುದಿಲ್ಲ. ವಿವಿಧತೆಯಲ್ಲಿ ಏಕತೆ ಕಾಣುವ ದೇಶ ನಮ್ಮದು ಎಂಬ ಪರಸ್ಪರ ಭಾವನೆಗಳಿಗೆ ಸ್ಪಂದಿಸುವ ಮೂಲಕ ಛತ್ರಪತಿ ಶಿವಾಜಿ ಮಹಾರಾಜರು ಕಂಡ ಸ್ವರಾಷ್ಟ್ರದ
ಚಿಂತನೆಗೆ ಕಳೆ ತರುವಂತ ಕೆಲಸ ಮಾಡಬೇಕಿದೆ ಎಂದರು.

ಯುವ ಮುಖಂಡ ಸುಧಿಧೀರ ಚಿಂಚೋಳಿ ಉಪನ್ಯಾಸ ನೀಡಿ, ಶಿವಾಜಿ ಮಹಾರಾಜರು ಉನ್ನತ ಗುಣ, ಸ್ವಭಾವ ಹೊಂದಿದ ದೊರೆಯಾಗಿದ್ದು, ಅವರ ಪರಧರ್ಮ ಸಹಿಷ್ಣುತೆ ಅನುಕರಣೀಯವಾಗಿತ್ತು. ಬಾಲ್ಯದಿಂದಲೇ ಉತ್ತಮ ನಾಯಕ ಗುಣ ಸ್ವಭಾವ ಹೊಂದಿದ್ದ ಅವರು, ಪ್ರತಿಯೊಂದು ಯುದ್ಧದಲ್ಲಿ ಕಾರ್ಯ ಚತುರತೆ ರೂಢಿಸಿಕೊಂಡಿದ್ದರು. ಸಮರ್ಥ ರಾಮದಾಸ ಗುರುವಿನ ಮಾರ್ಗ ದರ್ಶನದಿಂದ ಮಹಾರಾಷ್ಟ್ರದ ಹೃದಯ ಸಾಮ್ರಾಟರಾದರು. ಶಿವಾಜಿಯ ಸೇನಾ ವ್ಯವಸ್ಥೆ, ಆಗಿನ ಕಂದಾಯ ವ್ಯವಸ್ಥೆ ಆತನ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದ್ದು, ಅವರ ಆದರ್ಶಗಳು ಇಂದಿನ ಯುವಕರು ಪಾಲಿಸಬೇಕಾಗಿದೆ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಹೊನ್ನಪ್ಪಗೌಡ, ಹಣಮಂತ್ರಾಯ ಯಕ್ಷಿಂತಿ, ಉಪ ತಹಶೀಲ್ದಾರ್‌ ಶ್ರೀಧರಾಚಾರ್ಯ, ಶರಣಗೌಡ ಪಾಟೀಲ, ಪಾಂಡುರಂಗ, ಸಣ್ಣನಿಂಗಣ್ಣ ನಾಯ್ಕೋಡಿ, ಗುರು ಮದ್ದೀನ್‌, ಸದಾನಾಂದ ಪಾಣಿಭಾತೆ, ಅರವಿಂದ ಉಪ್ಪಿನ್‌, ಅರವಿಂದ ಬಾಸುತ್ಕರ್‌, ಕೃಷ್ಣಾ ಜೋಶಿ, ಶಂಕರ ಕಾಂಬಳೆ, ಅಮರ್‌ ಮಹೇಂದ್ರಕರ್‌,
ತುಕಾರಾಮ ಪಾಚಂಗಿ ಇದ್ದರು. ಮುಂಚಿತವಾಗಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next