ಬಸವಕಲ್ಯಾಣ: ನಗರದ ಬಸವ ಮಹಾನೆ ಸಂಸ್ಥೆಯ ಆಶ್ರಯದಲ್ಲಿ ಡಿ.1ರಿಂದ ಮೂರುದಿನಗಳ ಕಾಲ 4ನೇ ಶಿವಯೋಗ ಅನುಭವ ಶಿಬಿರ ನಡೆಸಲು ನಿರ್ಧರಿಸಲಾಗಿದೆ ಎಂದು ಬಸವ ಮಹಾಮನೆ ಸಂಸ್ಥೆಯ ಅಧ್ಯಕ್ಷ ಶ್ರೀ ಸಿದ್ಧರಾಮ ಬೆಲ್ದಾಳ ಶರಣರು ತಿಳಿಸಿದರು.
ಬಸವ ಮಹಾಮನೆಯಲ್ಲಿ ಶಿಬಿರದ ನಿಮಿತ್ತ ನಡೆದ ಪೂರ್ವ ಸಿದ್ಧತಾ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಮನುಷ್ಯನಿಗೆ ಆಸ್ತಿ, ಐಶ್ವರ್ಯ, ಅಧಿಕಾರ ಏನೆಲ್ಲ ಇದ್ದರೂ ಜೀವನದಲ್ಲಿ ಶಾತಿ ನೆಮ್ಮದಿ ಇಲ್ಲದಾಗುತ್ತಿದೆ. ಸಂತೃಪ್ತಿಯ ಜೀವನದಲ್ಲಿ ಶರಣರು ಕೊಟ್ಟಿರುವ ಸೂತ್ರಗಳನ್ನು ಪಾಲಿಸಬೇಕಾದ ಅವಶ್ಯತೆ ಇದೆ ಎಂದರು.
ಶರೀರ ನಿರೋಗಿಯಾಗಬೇಕು. ಮನಸ್ಸು ಶಾಂತವಾಗಬೇಕು. ಜೀವನ ಸಂತ್ರಪ್ತವಾಗಬೇಕು. ಈ ಎಲ್ಲ ದೃಷ್ಟಿಕೊನದಿಂದ ಶಿವಯೋಗ ಶಿಬಿರ ನಡೆಸಲು ನಿರ್ಧರಿಸಲಾಗಿದೆ. ಜನರು ಇದರ ಸದುಪಯೋಗ ಪಡೆಯುವುದು ಬಹಳ ಮುಖ್ಯವಾಗಿದೆ ಎಂದರು.
ಕಳೆದ ವರ್ಷ ನಡೆದ ಶಿಬಿರದಲ್ಲಿ 300 ಜನರಿಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಸುಮಾರು ಐದು ನೂರು ಶಿಬಿರಾರ್ಥಿಗಳಿಗೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಬೆಂಗಳೂರು, ಮೈಸೂರು, ಕರ್ನಾಟಕದ ಎಲ್ಲಾ ಜಿಲ್ಲೆಯ ಜನರು ಮತ್ತು ಮಹಾರಾಷ್ಟ್ರ, ಆಂಧ್ರಪ್ರದೇಶದಿಂದ ಶಿಬಿರಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಈ ಶಿಬಿರದಲ್ಲಿ ಭಾಗವಹಿಸಲು ಶಿಬಿರಾರ್ಥಿಗಳು ಹೆಸರು ನೋಂದಾಯಿಸಿಲು ನ.20ರ ವರೆಗೆ ಅವಕಾಶ ನೀಡಲಾಗಿ. ಹೆಚ್ಚಿನ ಮಾಹಿತಿಗೆ ಮೊ:9480777641/ 8277231840 ಈ ಸಂಖ್ಯೆ ಸಂಪರ್ಕಿಸಲು ಕೋರಲಾಗಿದೆ. ಹುಲಸೂರಿನ ಡಾ| ಶಿವಾನಂದ ಮಹಾಸ್ವಾಮಿ ಮಾತನಾಡಿ, ದೊಡ್ಡ ಶಕ್ತಿಯ ಅರಿವು ಮೂಡಿಸಲು ಬೆಲ್ದಾಳ ಶರಣರು ಶಿವಯೋಗ ಶಿಬಿರ ನಡೆಸುತ್ತಿರುವ ಕಾರ್ಯ ಬಹಳ ಅತ್ಯಗತ್ಯವಾದದ್ದು. ಈ ಕಾರ್ಯಕ್ಕೆ ಸಹಕಾರ ನೀಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.
ಭಾಲ್ಕಿಯ ಶ್ರೀ ಗುರುಬಸವ ಪಟ್ಟದೇವರು, ಬಸವ ಚಾನಲ್ ಮಾಲೀಕ ಈ.ಕೃಷ್ಣಪ್ಪ, ಹುಮನಾಬಾದ ತಾಪಂ ಅಧ್ಯಕ್ಷ ರಮೇಶ ಡಾಕುಳಗಿ, ಜಿಪಂ ಸದಸ್ಯ ಸುಧಿಧೀರ ಕಾಡಾದಿ, ಮುಖಂಡರಾದ ಶ್ರೀಕಾಂತ ಸ್ವಾಮಿ, ಆನಂದ ದೇವಪ್ಪ, ಪರಮೇಶ್ವರ ಬಿರಾದಾರ ಮಾತನಾಡಿದರು. ದತ್ತಾತ್ರೆ ಮೂಲಗೆ ಸ್ವಾಗತಿಸಿ, ನಿರೂಪಿಸಿದರು. ಹೈದರಾಬಾದ
ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ, ಕಲಬುಗರಿಯ ಉದ್ಯಮಿ ಜಾಜಿ, ನೂಲಿಚಂದಯ್ಯ ಸಮಾಜ ರಾಜ್ಯಾಧ್ಯಕ್ಷ ಶಿವಾಜಿರಾವ ಮಜಕೂರೆ, ಪ್ರಮುಖರಾದ ರವೀಂದ್ರ ಬೋರಾಳೆ, ಡಾ| ಅಮರನಾಥ ಕೋಹಿನೂರ, ಬಸವರಾಜ ಹೊನ್ನಾ, ಸಂಜು ಗಾಯಕವಾಡ, ಗಾಯತ್ರಿ ತಾಯಿ, ಗಂಗಾಧರ ದೇವರು, ಲಕ್ಷ್ಮಣ ದಾಂಡೆ, ಪ್ರಕಾಶ ಬಿರಾದಾರ ಇದ್ದರು.