ಬೆಂಗಳೂರು: ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಕೃಷ್ಣಪ್ಪ ಅವರ ಅಬ್ಬರದ ಪ್ರಚಾರ ಮುಂದುವರಿದಿದ್ದು, ಸೋಮವಾರವೂ ಕ್ಷೇತ್ರದ್ಯಾಂತ ಮಿಂಚಿನ ಸಂಚಾರ ನಡೆಸಿದ ಅವರು ಮನೆ-ಮನೆಗೆ ತೆರಳಿ ಮತಯಾಚನೆ ಮಾಡಿದರು.
ಕ್ಷೇತ್ರದಲ್ಲಿನ ಪ್ರತಿ ವಾರ್ಡ್, ಪ್ರತಿ ಬೀದಿಗಳು ಪ್ರತಿ ಮನೆಗಳ ವಾಸ್ತವವನ್ನು ಅರಿತಿರುವ ಕೃಷ್ಣಪ್ಪ ವಿಜಯನಗರ ಮನೆ ಮಗನಂತಿದ್ದು, ಸೋಮವಾರ ಬೆಳಿಗ್ಗೆ ಚೋಳರಪ್ಯಾಳ್ಯದಲ್ಲಿ ವಿಘ್ನವಿನಾಶಕನಿಗೆ ಪೂಜೆ ಸಲ್ಲಿಸಿ ಪ್ರಚಾರ ಯಾತ್ರೆ ಆರಂಭಿಸಿದರು.
ಪ್ರತಿ ಮನೆ ಬಾಗಿಲ ಬಳಿ ಹೋಗಿ ಮತದಾರರ ಸಮಸ್ಯೆಗಳನ್ನು ಕೇಳುತ್ತಾ ಕೈಮುಗಿದು ಮತಯಾಚನೆ ಮಾಡುತ್ತಿದ್ದರು. ಕ್ಷೇತ್ರದಲ್ಲಿ ಅಭಿವೃದ್ಧಿ ಸಾಕಷ್ಟು ಕಾರ್ಯಗಳು ಅಗಿದ್ದು, ಉಳಿದಿರುವ ಚಿಕ್ಕಪುಟ್ಟ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸುವ ಭರವಸೆ ನೀಡುತ್ತಿದ್ದರು. ಎಂದಿನಂತೆ ಜಾತಿ ಮತ ಧರ್ಮಗಳ ಲೆಕ್ಕಾಚಾರವಿಲ್ಲದೆ ಕ್ಷೇತ್ರ ನಿಜಕ್ಕೂ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವಂತೆ ಎಲ್ಲರ ಮನೆಗಳಿಗೆ ತಲುಪಿ ಆತಿಥ್ಯವನ್ನು ಸ್ವೀಕರಿಸಿದರು.
ಕೃಷ್ಣಪ್ಪ ಅವರ ಪ್ರಚಾರ ದಿನವಿಡೀ ಮುಂದುವರಿಯಿತು. ಮನೆ ಬಾಗಿಲಿಗೆ ಬಂದ ಎಂ ಕೃಷ್ಣಪ್ಪ ಅವರನ್ನು ನಗುಮುಖದಿಂದ ಸ್ವಾಗತಿಸುತ್ತಿದ್ದ ಮತದಾರರು ನಮ್ಮ ಮತ ಕೈಪಕ್ಷಕ್ಕೆ ನಮ್ಮ ಅಭಿವೃದ್ಧಿಯ ಹರಿಕಾರರಾದ ನಿಮಗೆ ಎಂದು ಹೇಳುತ್ತಿದ್ದರು ಇದೇ ವೇಳೆ ವಾಟರ್ ವಾಲ್ ಸಮಸ್ಯೆ ಕುರಿತು ಮಾತನಾಡಿದ ಕೃಷ್ಣಪ್ಪ, ಕ್ಷೇತ್ರದಲ್ಲಿ ಯಾವುದೇ ಕೊರತೆಗಳಿಲ್ಲ ಆದರೆ ಕಿಡಿಗೇಡಿಗಳು ವಾಟರ್ ವಾಲ್ ತಡೆಯುವುದು ವಿದ್ಯುತ್ ತಂತಿಗಳನ್ನು ಕತ್ತರಿಸುವುದು ಹೀಗೆ ಅನೇಕ ತೊಂದರೆಗಳನ್ನು ಮಾಡುತ್ತಿದ್ದಾರೆ. ಆದರೆ ಮತದಾರರಿಗೆ ಗೊತ್ತು ಅವರು ದಡ್ಡರಲ್ಲ ನಾಲ್ಕುವರೆ ವರ್ಷಗಳಿಂದ ತೊಂದರೆ ಈಗ ಬರ್ತಾ ಇದೆ ಎಂದರೆ ಇದು ಕಿಡಿಗೇಡಿಗಳ ಕೈವಾಡ ಎಂದು ಅರಿತಿದ್ದಾರೆ ಎಂದರು.
ವಾಟರ್ ಬಾಲ್ ಆಫ್ ಮಾಡಿ ನೀರಿಗೆ ತೊಂದರೆ ಮಾಡಿದ ಕೆಲವು ಕಿಡಿಗೇಡಿಗಳು ಸಿಕ್ಕಿಬಿದ್ದಿದ್ದು ಪೊಲೀಸ್ ಕಂಪ್ಲೇಂಟ್ ಕೊಡಲು ಮುಂದಾಗಿದ್ದೆವು ಆದರೆ ಕೈಕಾಲು ಹಿಡಿದುಕೊಂಡು ಬೇಡಿಕೊಂಡಿದ್ದಕ್ಕೆ ಕ್ಷಮಿಸಿದ್ದೇವೆ ಎಂದು ತಿಳಿಸಿದರು.