Advertisement
ನಗರದ ಬಿ.ಪಿ.ವಾಡಿಯಾ ರಸ್ತೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಮೃದ್ಧ ಸಾಹಿತ್ಯ ಸಂಸ್ಥೆ ಹೊರ ತಂದಿರುವ “ಶಿವಾಜಿ ಮತ್ತು ಸುರಾಜ್ಯ’ ಅನುವಾದಿ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
Related Articles
Advertisement
ಶಿವಾಜಿಯು ಯುದ್ಧ ಮಾಡಿದ್ದಕ್ಕಿಂತ ಹೆಚ್ಚಾಗಿ ಸ್ವರಾಜ್ಯಕ್ಕೆ ಬೇಕಾದ ಸೈನಿಕರನ್ನು ಆಡಳಿತ ವ್ಯವಸ್ಥೆ ಮೂಲಕ ರೂಪಿಸಿದ್ದ. ಸಮಾಜಕ್ಕೆ ಬೇಕಾದ ಜನರನ್ನು ನಿರ್ಮಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಅನೇಕ ಕ್ರಮ ತೆಗೆದುಕೊಂಡಿದ್ದರು. ಅತ್ಯಾಚಾರಿಗಳಿಗೂ ಶಿಕ್ಷೆ ನೀಡಿದ್ದರು. ಸೈನಿಕರನ್ನು ಸೇವಕರಂತೆ ಕಾಣದೆ, ಸ್ನೇಹಿತರಂತೆ ನೋಡಿಕೊಳ್ಳುತ್ತಿದ್ದರು. ಹಿಂದು ಧರ್ಮಕ್ಕೆ ಮತಾಂತರಗೊಂಡವರೊಂದಿಗೆ ಸ್ನೇಹ, ಸಂಬಂಧವನ್ನು ಬೆಳೆಸಿದ್ದರು. ಹೀಗಾಗಿ ಅನೇಕ ರೀತಿಯಲ್ಲಿ ಶಿವಾಜಿ ಮಹಾರಾಜರು ದೇಶಕ್ಕೆ ಪ್ರೇರಣೆ ಎಂದು ಬಣ್ಣಿಸಿದರು.
ಸಂಸ್ಕೃತ ವಿದ್ವಾಂಸರಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ಶಿವಾಜಿಯ ಆಡಳಿತದ ಹಲವು ಮುಖಗಳನ್ನು ಈ ಕೃತಿಯಲ್ಲಿ ಅತ್ಯಂತ ಸುಂದರವಾಗಿ ತಿಳಿಸಿಕೊಡಲಾಗಿದೆ. ಶಿವಾಜಿಯ ಆಡಳಿತ ವ್ಯವಸ್ಥೆ, ಆಧುನಿಕ ಭಾರತದ ರಾಜ್ಯ ಮತ್ತು ರಾಷ್ಟ್ರದ ಪರಿಕಲ್ಪನೆ ಹಾಗೂ ರಾಜನೀತಿಗೆ ಬೇಕಿರುವ ಹಲವು ಅಂಶಗಳು ಇದರಲ್ಲಿದೆ. ದೇಶಕ್ಕೇ ಮಾದರಿಯಾಗಬಲ್ಲ ಜಲನೀತಿ, ವಿದೇಶಾಂಗ ನೀತಿ, ಮಂತ್ರಿ ಪರಿಷತ್ ಹಾಗೂ ನಾಯಕತ್ವ ಗುಣವನ್ನು ಶಿವಾಜಿ ನೀಡಿದ್ದರು.
ಶಿವಾಜಿ ಹಾಕಿಕೊಟ್ಟ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಆಡಳಿತ ವ್ಯವಸ್ಥೆ ಹಾಗೂ ಪರಿಸರ ಅಧ್ಯಯನ ಇಂದಿನ ಭಾರತಕ್ಕೆ ಹೆಚ್ಚು ಉಪಯುಕ್ತವಾಗಲಿದೆ ಎಂದು ವಿವರಿಸಿದರು. ಕೃತಿಯ ಅನುವಾದಕರಾದ ಮಹಾಬಲ ಸೀತಾಳಬಾವಿ ಹಾಗೂ ಸಮೃದ್ಧಿ ಪ್ರಕಾಶನದ ಹರ್ಷ ಮೊದಲಾದವರು ಇದ್ದರು. ನಿವೃತ್ತ ಕೊಲೊನಿಯಲ್ ವಿಜಯ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.