Advertisement

ಶಿವಾಜಿ ಛತ್ರೆಪ್ಪ ಕಾಗಣೇಕರಗೆ ಅರಸು ಪ್ರಶಸ್ತಿ

06:00 AM Dec 05, 2018 | |

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2018-19ನೇ ಸಾಲಿನ “ಡಿ.ದೇವರಾಜ ಅರಸು ರಾಜ್ಯಮಟ್ಟದ ಪ್ರಶಸ್ತಿಗೆ’
ಬೆಳಗಾವಿ ಜಿಲ್ಲೆ ಕಟ್ಟಣಬಾವಿಯ ಶಿವಾಜಿ ಛತ್ರೆಪ್ಪ ಕಾಗಣೇಕರ ಅವರು ಆಯ್ಕೆಯಾಗಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ, ಸಮಾಜ ಸುಧಾರಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬೆಳಗಾವಿಯ ಶಿವಾಜಿ ಛತ್ರೆಪ್ಪ ಕಾಗಣೇಕರ ಅವರನ್ನು ಪ್ರಸಕ್ತ ಸಾಲಿನ ಅರಸು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಐದು ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಫ‌ಲಕ 
ಒಳಗೊಂಡಿದೆ ಎಂದು ಹೇಳಿದರು.

Advertisement

ಶಿವಾಜಿ ಛತ್ರೆಪ್ಪ ಕಾಗಣೇಕರ ಅವರು ಪ್ರಗತಿಪರ ಚಿಂತಕರಾಗಿದ್ದು, ಸಮಾಜ ಸುಧಾರಕ ರೆನಿಸಿದ್ದಾರೆ. ಬೆಳಗಾವಿ ಭಾಗದಲ್ಲಿ ಅರಸು ಅವರ ಆಶಯಗಳಿಗೆ ಅನುಗುಣವಾಗಿ ಶ್ರಮಿಸುತ್ತಿದ್ದಾರೆ. ಎಲೆಮರೆ ಕಾಯಿಯಂತೆ ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾದ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ, ದಲಿತರು, ಮಹಿಳೆಯರು,
ಗ್ರಾಮೀಣ ಅಭಿವೃದಿಟಛಿಗೆ ಶ್ರಮಿಸುತ್ತಿರುವ ಕಾಗಣೀಕರ ಅವರನ್ನು ಈ ಬಾರಿಯ ಅರಸು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅವಿವಾಹಿತರಾಗಿರುವ ಅವರಿಗೆ ಈಗಲೂ ಸ್ವಂತ ಮನೆ ಇಲ್ಲ. ದಲಿತರು, ಹಿಂದುಳಿದ ವರ್ಗದವರ ಮನೆಯಲ್ಲಿ ಮಲಗುತ್ತಾರೆ. ಪ್ರಶಸ್ತಿ ಆಯ್ಕೆ ಸಮಿತಿ ಕೇವಲ 13 ನಿಮಿಷಗಳ ಕಾಲ ಚರ್ಚೆ ನಡೆಸಿ ಸರ್ವಾನುಮತದಿಂದ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು. ಯಾವುದೇ ಭಿನ್ನಾಭಿಪ್ರಾಯ, ವಾಗ್ವಾದ ಗಳಿಲ್ಲದೆ ಆಯ್ಕೆ ಸಮಿತಿ ಸದಸ್ಯರು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.

ಶಿವಾಜಿ ಛತ್ರೆಪ್ಪ ಕಾಗಣೇಕರ ಪರಿಚಯ
ದೇವರಾಜ ಅರಸು ಪ್ರಶಸ್ತಿಗೆ ಭಾಜನರಾಗಿರುವ ಕಾಗಣೇಕರ ಅವರು ಬೆಳಗಾವಿ ತಾಲೂಕು ಕಟ್ಟಣಬಾವಿಯಲ್ಲಿ 1949ರ ಮಾರ್ಚ್‌ 1ರಂದು ಗಂಗವ್ವ ಹಾಗೂ ಛತ್ರೆಪ್ಪ ದಂಪತಿಯ 8ನೇ ಮಗನಾಗಿ ಜನಿಸಿದರು. ಆ ಕಾಲದಲ್ಲಿ ಬೆಳಗಾವಿ ಭಾಗದಲ್ಲಿ ಕನ್ನಡ ಶಾಲೆ ಇಲ್ಲದಿದ್ದ ಕಾರಣ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮರಾಠಿ ಮಾಧ್ಯಮದಲ್ಲಿ ಕಲಿತು ಬೆಳಗಾವಿ ನಗರದ ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. ಸಾಮಾಜಿಕ ಚಳವಳಿಯ ಸೆಳೆತದಿಂದಾಗಿ ಸಾನೇ ಗುರೂಜಿ, ಜಯಪ್ರಕಾಶ ನಾರಾಯಣ, ವಸಂತ ಪಾಳಸೇಕರ, ಅಣ್ಣಾ ಹಜಾರೆ, ಮೋಹನ ಹೀರಾಬಾಯಿ ಹೀರಾಲಾಲ ಇತರರ ಚಳವಳಿ, ಚಿಂತನೆ ಪ್ರಭಾವದಿಂದ ಇಡೀ ಜೀವನವನ್ನು ಸಮಾಜಕ್ಕಾಗಿ ಸಮರ್ಪಿಸಿಕೊಂಡಿದ್ದಾರೆ. 1968-69ರಲ್ಲಿ ಜನ ಜಾಗರಣ ಸಂಸ್ಥೆ ಸ್ಥಾಪಿಸಿ ರಾತ್ರಿ
ಶಾಲೆ ನಡೆಸುತ್ತಿದ್ದಾರೆ. ಅರಣ್ಯ ಪ್ರದೇಶದ ಹಳ್ಳಿಗಳಲ್ಲಿ ಸೈಕಲ್‌ ನಲ್ಲಿ ಓಡಾಡಿ ಶಿಕ್ಷಣ ಜಾಗೃತಿ ಮೂಡಿಸಿದ್ದಾರೆ. ಮಹಿಳೆಯರ
ರಾತ್ರಿ ಶಾಲೆಗಳನ್ನು 10 ವರ್ಷಗಳ ಕಾಲ ನಡೆಸಿ ಅರಿವು ಮೂಡಿಸಿ ದ್ದಾರೆ. ಸರ್ಕಾರೇತರ ಸಂಸ್ಥೆಯೊಂದಿಗೆ ಒಡಂಬಡಿಕೆ
ಮಾಡಿಕೊಂಡು ಆಂದೋಲನ ಮಾದರಿಯಲ್ಲಿ 14,000 ಗೋಬರ್‌ ಗ್ಯಾಸ್‌ ವ್ಯವಸ್ಥೆಯನ್ನು ಹಳ್ಳಿಗಳ ಮನೆ ಮನೆಗಳಲ್ಲಿ 
ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next