Advertisement

ಮಂಜಿನಲ್ಲಿ ಮರೆಯಾಗುವ ಶಿವಗಂಗೆ ಬೆಟ್ಟ

12:46 PM Aug 18, 2020 | Suhan S |

ನೆಲಮಂಗಲ: ಸಮುದ್ರ ಮಟ್ಟದಿಂದ 4547ಅಡಿ ಎತ್ತರವಿರುವ ದಕ್ಷಿಣಕಾಶಿ ಶಿವಗಂಗೆ ಬೆಟ್ಟದಲ್ಲಿ ಭಕ್ತರು ಹಾಗೂ ಪ್ರವಾಸಿಗರು ಮೋಡದಲ್ಲಿ ಪ್ರಯಣಿಸಿದ ಅನುಭವ ಅಚ್ಚರಿ ಎಂಬಂತೆ ಕೆಲವು ಸನ್ನಿವೇಶಗಳಲ್ಲಿ ಕಂಡುಬರುತ್ತಿದೆ.

Advertisement

ತಾಲೂಕಿನ ಸೋಂಪುರ ಹೋಬಳಿಯ ಸುಂದರ ರಮಣೀಯ ಶಿವಗಂಗೆ ಬೆಟ್ಟ ಮುಂಜಾನೆ ವೇಳೆ ಸಂಪೂರ್ಣವಾಗಿ ಮಂಜು ಮುಸುಕಿ ಬೆಟ್ಟವೇ ಇಲ್ಲದಂತೆ ಕಾಣುತ್ತದೆ. ಈ ಇಬ್ಬನಿ ಬೆಳಗ್ಗೆ 10 ಗಂಟೆಯಾದರೂ ಬೆಟ್ಟದ ಪೂರ್ಣ ಚಿತ್ರಣ ನೋಡಲು ಬಿಡುವುದಿಲ್ಲ. ಮೋಡದಲ್ಲಿ ಪಯಣ: 4547 ಅಡಿ ಎತ್ತರದ ಶಿವಗಂಗೆ ಬೆಟ್ಟದ ಆರಂಭದಲ್ಲಿರುವ ಗಂಗಾಧರೇಶ್ವರ ದೇವಾಲಯದವರೆಗೂ ಮಂಜು ಆವರಿಸುವುದರಿಂದ ಪ್ರವಾಸಿಗರು, ಭಕ್ತರು ದೇವರ ದರ್ಶನ ಪಡೆದು ಬೆಟ್ಟ ಏರಲು ಪ್ರಾರಂಭಿಸಿದರೆ ಸಾಕು, ಮೋಡದ ಒಳಗೆ ಸಂಚರಿಸುವ ಹಾಗೂ ಮೋಡದ ಮೇಲಿನ ಬೆಟ್ಟವನ್ನು ಏರುತ್ತಿರುವ ಅನುಭವ ಆಗುತ್ತದೆ.

ಬೆಟ್ಟ ಏರುವುದು ಸಾಹಸ: ಮಂಜು ಆವರಿಸಿದ ಸಂದರ್ಭದಲ್ಲಿ ಬೆಟ್ಟಕ್ಕೆ ಏರುವಾಗ ಮೆಟ್ಟಿಲುಗಳು ಹಾಗೂ ಕಡಿದಾದ ಕಲ್ಲುಬಂಡೆ ದಾರಿಯಲ್ಲಿ ಇಬ್ಬನಿ ನೀರಿನಿಂದ ಜಾರುವ ಅಪಾಯದ ಸ್ಥಿತಿ ಎದುರಾಗುತ್ತದೆ. ಇಂತಹ ಸಮಯದಲ್ಲಿ ಪ್ರವಾಸಿಗರು ಬೆಟ್ಟವನ್ನು ಏರುವುದು ಹಾಗೂ ಇಳಿಯುವುದು ಬಹಳ ಕಷ್ಟಕರ. ಆದರೂ, ಪ್ರವಾಸಿಗರು ಮಾತ್ರಮುಂಜಾನೆ ಮಂಜಿನ ಬೆಟ್ಟಕ್ಕೆ ಏರುವ ಮೂಲಕ ಸಾಹಸ ತೋರುತ್ತಾರೆ.

ಅಪರೂಪದ ದೃಶ್ಯ: ಶಿವಗಂಗೆ ನೋಡಲು ಬರುವ ಪ್ರವಾಸಿಗರಿಗೆ ಮಂಜಿನಲ್ಲಿ ಮರೆಯಾದ ಶಿವಗಂಗೆ ಕಾಣುವುದು ಬಲು ಅಪರೂಪ. ಮುಂಜಾನೆ 5.30 ರಿಂದ 7 ಗಂಟೆ ಒಳಗೆ ಭೇಟಿ ನೀಡಿದರೆ ಅಪರೂಪದ ದೃಶ್ಯ ಕಂಡು ಬರುತ್ತದೆ.

ಮುಂಜಾನೆ ಬನ್ನಿ: ಶಿವಗಂಗೆ ಬೆಟ್ಟವನ್ನು ಏರುವ ಪ್ರವಾಸಿಗರು ಮುಂಜಾನೆ ಸಮಯದಲ್ಲಿ ಬಂದರೆ ಆಯಾಸದ ಜತೆಗೆ ಆರೋಗ್ಯವೂ ಉತ್ತಮಗೊಳ್ಳುವುದು. ಮಧ್ಯಾಹ್ನದ ನಂತರ ಬೆಟ್ಟ ಏರಲು ಮುಂದಾದರೆ, ಬಿಸಿಲಿನ ತಾಪಕ್ಕೆ ಕುಸಿದು ಬೀಳುವ ಜತೆಗೆ ಒಳಕಲ್ಲು ತೀರ್ಥಕ್ಕೆಹೋಗುವಷ್ಟರಲ್ಲಿ ಬೆಟ್ಟ ಏರುವ ಆಸೆ ಬಿಟ್ಟುಬಿಡುತ್ತೀರಿ. ಹೀಗಾಗಿ ಶಿವಗಂಗೆ ಬೆಟ್ಟ ನೋಡಲು, ಏರಲು ಮುಂಜಾನೆ ಬನ್ನಿ ಎಂಬುದು ಕೆಲವು ಪ್ರವಾಸಿಗರ ಅಭಿಪ್ರಾಯ.

Advertisement

ಮುಂಜಾನೆ ಶಿವಗಂಗೆ ಸುಂದರ ಮರೆಯಾಗಿರುತ್ತದೆ. ಬೆಟ್ಟ ಹತ್ತುವಾಗ ಆಕಾಶದಲ್ಲಿ ಸಂಚರಿಸುವ ಅನುಭವ ಉಂಟಾಗಲಿದೆ. ಕೋವಿಡ್ ಲೆಕ್ಕಿಸದೇಹೆಚ್ಚಿನ ಭಕ್ತರು ಆಗಮಿಸುತ್ತಿದ್ದಾರೆ.  -ಸಿದ್ಧರಾಜು, ಶಿವಗಂಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next