ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕು ಯಗಟಿ ಸಮೀಪದ ಶಿವಗಂಗಾ ಗಿರಿ ಬೆಟ್ಟದಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಚಿರತೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ಆಗ್ರಹಿಸಿದ್ದಾರೆ.
ಕಡೂರು ಅರಣ್ಯ ವಲಯ ವ್ಯಾಪ್ತಿಯ ಶಿವಗಂಗಾ ಗಿರಿ ಬೆಟ್ಟದಲ್ಲಿ ಮೂರು ಚಿರತೆಗಳು ದ್ರೋಣ್ ಕ್ಯಾಮರದಲ್ಲಿ ಸೆರೆಯಾಗಿದೆ. ಗಿರಿಯ ತುದಿಯಲ್ಲಿ ಚಿರತೆಗಳು ಕ್ಯಾಮರದಲ್ಲಿ ಸೆರೆಯಾಗಿದ್ದು, ಶಿವಗಂಗಾ ಗಿರಿಯ ಕೆಳಗಿರುವ ದೇವಸ್ಥಾನದಲ್ಲಿ ಮದುವೆ ಕಾರ್ಯಕ್ರಮದ ಮದುವೆ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವೇಳೆ ದ್ರೋಣ್ ಕ್ಯಾಮರಾದಲ್ಲಿ ಚಿರತೆಗಳು ಸೆರೆಯಾಗಿವೆ.
ದ್ರೋಣ್ ಕ್ಯಾಮರವನ್ನು ಕಂಡ ಚಿರತೆಗಳು ಗಾಬರಿಗೊಂಡಿವೆ. ಚಿರತೆಗಳ ಚಲನವಲನ ಸೆರೆಯಾಗಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಕಾರ್ಮಿಕರು ಹೊಲಗಳಿಗೆ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ:Kannada serials; ಟಿಆರ್ ಪಿ ರೇಸ್ ನಲ್ಲಿ ಪುಟ್ಟಕ್ಕನ ಜೊತೆ ಸೀತಾರಾಮ ಹೆಜ್ಜೆ
ಬೆಟ್ಟದ ತುದಿಯಲ್ಲಿ ಕಾಣಿಸಿಕೊಂಡಿರುವ ಮೂರು ಚಿರತೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.