ಶಿರಸಿ: ಶಿವಗಂಗಾ ಜಲಪಾತದಲ್ಲಿ ನಾಪತ್ತೆಯಾದ ಯುವತಿಯ ಪತ್ತೆಗೆ ಕೋತಿರಾಜ ಅವರ ತಂಡ ಮಂಗಳವಾರ ಆಗಮಿಸಿದೆ.
ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯ ಶಿವಗಂಗೆಯಲ್ಲಿ ಜುಲೈ 30 ರಂದು ಶಿವ ಗಂಗಾ ಫಾಲ್ಸ್ ನ ನೀರಿನ ಜರಿಯಲ್ಲಿ ಕಾಲು ಜಾರಿ ಬಿದ್ದು ನಾಪತ್ತೆಯಾದ ತ್ರಿವೇಣಿ ಅಂಬಿಗ(20) ಪತ್ತೆಗಾಗಿ ಶ್ರಮಿಸಿದ್ದರೂ ಸುಳಿವು ಸಿಕ್ಕಿರಲಿಲ್ಲ.
ಪೋಲಿಸ್ ಅಧಿಕಾರಿ ಸಿಬ್ಬಂದಿಗಳು, ಅಗ್ನಿಶಾಮಕ ದಳದವರು, ಖಾಸಗಿ ಲೈಫ್ ಗಾರ್ಡ್ ಸಿಬ್ಬಂದಿಗಳು, ಸ್ಥಳೀಯರೊಂದಿಗೆ ಸಾಕಷ್ಟು ಹುಡುಕಾಟ ನಡೆಸಿದ್ದರೂ ಪ್ರಯೋಜನ ಆಗಿರಲಿಲ್ಲ.
ಜೊತೆಗೆ ಚಿತ್ರದುರ್ಗದ ಕೋತಿರಾಜ್ ತಂಡ ಈ ದಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಹಾಗೂ ಸ್ಥಳೀಯ ಖಾಸಗಿ ಲೈಫ್ ಗಾರ್ಡ್ ಮುಖ್ಯಸ್ಥ ಗೋಪಾಲ್ ಗೌಡ ತಂಡದ 15 ಸದಸ್ಯರು, ಜಡ್ಡಿಗದ್ದೆ ಗ್ರಾಮದ ವೆಂಕಟರಮಣ ಪೂಜಾರಿ ನೇತೃತ್ವದ ಸುಮಾರು 25 ರಿಂದ 30 ಜನ ಜಡ್ಡಿಗದ್ದೆ ಗ್ರಾಮಸ್ಥರು ಸತತ ನಾಲ್ಕು ದಿವಸ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ದ್ರೋಣ್ ಕ್ಯಾಮರಾ ಮೂಲಕ ವಿಶೇಷ ಕಾರ್ಯಾಚರಣೆ ನಡೆಸಿದರೂ ಕೂಡ ಪತ್ತೆಯಾಗಿಲ್ಲ ಎಂದು ಸಿಪಿಐ ರಾಮಚಂದ್ರ ನಾಯಕ ತಿಳಿಸಿದ್ದಾರೆ.
ಇದನ್ನೂ ಓದಿ : ಮಡಿಕೇರಿ : ಕೊಯನಾಡು ರಸ್ತೆಯಲ್ಲಿ ಬೃಹತ್ ಬಿರುಕು : ಭಾರೀ ವಾಹನ ಸಂಚಾರ ನಿಷೇಧ