Advertisement

ಶಿವ ಥಾಪ; ಭಾರತದ ಮೊದಲ ಸ್ವರ್ಣ ಸಾಧಕ

02:19 AM Jul 21, 2019 | Sriram |

ಅಸ್ತಾನಾ (ಕಜಾಕ್‌ಸ್ಥಾನ): ನಾಲ್ಕು ಬಾರಿಯ ಏಶ್ಯನ್‌ ಮೆಡಲಿಸ್ಟ್‌ ಶಿವ ಥಾಪ ‘ಕಜಾಕ್‌ಸ್ಥಾನ್‌ ಪ್ರಸಿಡೆಂಟ್ ಕಪ್‌ ಬಾಕ್ಸಿಂಗ್‌’ ಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಬಾಕ್ಸರ್‌ ಆಗಿ ಇತಿಹಾಸ ನಿರ್ಮಿಸಿದ್ದಾರೆ. ಅವರು ಫೈನಲ್ ಆಡದೆಯೇ ಬಂಗಾರಕ್ಕೆ ಮುತ್ತಿಡುವ ಅದೃಷ್ಟವನ್ನು ತಮ್ಮದಾಗಿಸಿಕೊಂಡರು.

Advertisement

ಒಲಿಂಪಿಕ್ಸ್‌ನಲ್ಲಿ ಮೊದಲ ಸಲ ಅಳವಡಿಸಲಾಗುವ 63 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಶಿವ ಥಾಪ ಪ್ರಥಮ ಬಾರಿ ಕಣಕ್ಕಿಳಿದಿದ್ದರು. ಫೈನಲ್ನಲ್ಲಿ ಆತಿಥೇಯ ನಾಡಿನ ಝಾಕಿರ್‌ ಸಫಿಯುದ್ದೀನ್‌ ಅವರನ್ನು ಎದುರಿಸಬೇಕಿತ್ತು. ಆದರೆ ಸಫಿಯುದ್ದೀನ್‌ ಗಾಯಾಳಾಗಿ ಹಿಂದೆ ಸರಿದುದರಿಂದ ಶಿವ ಥಾಪ ವಾಕ್‌ ಓವರ್‌ ಪಡೆದು ಬಂಗಾರಕ್ಕೆ ಕೊರಳೊಡ್ಡಿದರು. ಇದಕ್ಕೂ ಮುನ್ನ ಥಾಪ 60 ಕೆಜಿ ವಿಭಾಗದಲ್ಲಿ ಸ್ಪರ್ಧೆಗೆ ಇಳಿಯುತ್ತಿದ್ದರು.

ಈ ವರ್ಷ ನಡೆದ ಏಶ್ಯನ್‌ ಚಾಂಪಿಯನ್‌ಶಿಪ್‌ ಸೆಮಿಫೈನಲ್ನಲ್ಲಿ ಸಫಿಯುದ್ದೀನ್‌ ವಿರುದ್ಧ ಶಿವ ಥಾಪ ಸೋಲನುಭವಿಸಿದ್ದರು.

ವನಿತಾ 60 ಕೆಜಿ ವಿಭಾಗದಲ್ಲಿ ಪ್ರವೀಣಾ ಬೆಳ್ಳಿ, 81 ಕೆಜಿ ವಿಭಾಗದಲ್ಲಿ ಸ್ವೀಟಿ ಬೂರಾ ಮತ್ತು ಪುರುಷರ 69 ಕೆಜಿ ವಿಭಾಗದಲ್ಲಿ ದುರ್ಯೋಧನ ಸಿಂಗ್‌ ನೇಗಿ ಕಂಚಿನ ಪದಕ ಜಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next