Advertisement
ಪೂಜೆಗೆ ಖರೀದಿ: ಹಿಂದೂ ಧರ್ಮದಲ್ಲಿ ಪವಿತ್ರಹಬ್ಬವೆಂದೇ ಗುರುತಿಸಿಕೊಂಡಿರುವ ಮಹಾ ಶಿವರಾತ್ರಿಯನ್ನು ಪ್ರತಿಮನೆಯಲ್ಲೂ ಆಚರಿಸುವಹಿನ್ನೆಲೆಯಲ್ಲಿ ಹಬ್ಬಕ್ಕೆ ಅಗತ್ಯವಾಗಿರುವ ದಿನ ಬಳಕೆಯ ವಸ್ತುಗಳಾದ ಹೂವು, ಹಣ್ಣು, ತರಕಾರಿ ಮೊದಲಾದ ವಸ್ತುಗಳನ್ನು ಖರೀದಿ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು.
Related Articles
Advertisement
ವಿಶೇಷ ಪೂಜೆ: ತುಮಕೂರಿನ ಸೋಮೇಶ್ವರ ದೇವಾಲಯ, ಗಂಗಾಧರೇಶ್ವರ ದೇವಾಲಯ, ಮಹಾಗಣಪತಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ.
ಮಹಾರಥೋತ್ಸವ: ಜಿಲ್ಲೆಯ ಪವಿತ್ರ ಕ್ಷೇತ್ರವಾಗಿರುವ ಚಿಕ್ಕನಾಯಕನಹಳ್ಳಿ ತೀರ್ಥರಾಮೇಶ್ವರ ಕ್ಷೇತ್ರದಲ್ಲಿವಿಶೇಷ ಪೂಜೆ ನಡೆಯಲಿದೆ. ತಾಲೂಕಿನ ಅರೆಯೂರಿನಶ್ರೀ ವೈದ್ಯನಾಥೇಶ್ವರ ಸ್ವಾಮಿ ಮಹಾರಥೋತ್ಸವನಡೆಯಲಿದ್ದು, ಜಿಲ್ಲೆಯ ವಿವಿಧ ದೇವಾಲಯಗಳಲ್ಲೂವಿಶೇಷ ಪೂಜೆ, ಉತ್ಸವ, ಅರ್ಚನೆಗಳು ಇಡೀ ರಾತ್ರಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ತುರುವೇಕೆರೆ ಮಲ್ಲೇಶ್ವರ ದೇವಾಲಯ, ಪಾವಗಡದಈಶ್ವರ ದೇವಾಲಯ, ಚಿಕ್ಕ ನಾಯಕನಹಳ್ಳಿಯ ಪ್ರಸನ್ನ ರಾಮೇಶ್ವರ ದೇವಾಲಯ ಸೇರಿದಂತೆ ವಿವಿಧ ಶಿವದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಗಳು ನಡೆಯಲಿವೆ.
ಧರ್ಮಗೋಷ್ಠಿ : ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿ ಭಸ್ಮಾಂಗಿ ಬೆಟ್ಟದಲ್ಲಿರುವ ಐತಿಹಾಸಿಕ ಪ್ರಸಿದ್ಧ ಭಸ್ಮಾಂಗಿ ರುದ್ರೇಶ್ವರ ಸ್ವಾಮಿಗೆ ಮಹಾಶಿವರಾತ್ರಿ ಅಂಗವಾಗಿ ಬೆಳಗ್ಗೆ 10 ಗಂಟೆಯಿಂದ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8 ಗಂಟೆಯಿಂದ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ,ಮಹಾಮಂಗಳಾರತಿ, ಧರ್ಮ ಗೋಷ್ಠಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.