Advertisement
ತಾಲೂಕಿನ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಹೊಂದಿರುವ ಗಂಗವಾರ ಗ್ರಾಮದ ಪ್ರಸನ್ನ ಪಾರ್ವತಿ ಸಮೇತ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಹಾಗೂ ಮೊದಲನೇ ವರ್ಷದ ರಥೋತ್ಸವ ನಡೆಯಿತು.
Related Articles
ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ತಬ್ಬಲಿಂಗೇಶ್ವರ ಸ್ವಾಮಿ ದೇವರಿಗೆ ರುದ್ರಾಭಿಶೇಕ, ಸ್ವಾಹಾಕಾರ ಹೋಮ ಮತ್ತು 108 ಬಿಲ್ವಾರ್ಚನೆ, ಪಾರ್ವತಿ ಅಮ್ಮನವರಿಗೆ ಕುಂಕುಮಾರ್ಚನೆ, ವಿಶೇಷ ಪೂಜೆ ನಡೆಯಿತು.
Advertisement
ರವಿದಾಸರು ತಂಡದವರಿಂದ ಹರಿಕಥೆ ನಡೆಸಿಕೊಡಲಿದ್ದಾರೆ. ರಾತ್ರಿಯಿಂದ ಬೆಳಗಿನ ಜಾವದವರೆಗೆ ಪೂಜೆಗಳು ನಡೆಯಲಿವೆ. ಪೂಜೆಯಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಬೈರೇಗೌಡ, ಗೌರವಾಧ್ಯಕ್ಷ ಜಯರಾಜ್, ಉಪಾಧ್ಯಕ್ಷ ಟಿ.ಶಂಕರಪ್ಪ, ಪ್ರಧಾನ ಅರ್ಚಕ ಲೋಕೇಶ್ ಮತ್ತಿತರರಿದ್ದರು. ತಾಲೂಕಿನ ಅರದೇಶನಹಳ್ಳಿ ಗ್ರಾಮದಲ್ಲಿ ಪುರಾತನ ಕಾಲದ ಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ ಶಿವನ ಮೂರ್ತಿಗೆ ವಿಶೇಷ ಪೂಜೆ ಜರುಗಿತು.
ಅರದೇಶನಹಳ್ಳಿ ಗ್ರಾಮದಲ್ಲಿರುವ ಪುರಾತನ ಶಿವನ ದೇವಾಲಯದಲ್ಲಿ ಭಕ್ತರು ಪೂಜೆಗಾಗಿ ಕುಳಿತು ದೇವರ ದರ್ಶನ ಪಡೆದರು.
ಈ ವೇಳೆ ಮಾಜಿ ಶಾಸಕ ಮುನಿನರಸಿಂಹಯ್ಯ, ಜಿಪಂ ಸದಸ್ಯ ಕೆ.ಸಿ.ಮಂಜುನಾಥ್, ದೇವಾಲಯದ ಅರ್ಚಕ ನಾಗರಾಜ್ ದೀಕ್ಷಿತ್, ಅರದೇಶನಹಳ್ಳಿ ಗ್ರಾಪಂ ಉಪಾಧ್ಯಕ್ಷ ಸುಬ್ಬಣ್ಣ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ನಿರ್ದೇಶಕ ಕೆಂಪರಾಜು, ಗ್ರಾಪಂ ಮಾಜಿ ನಿರ್ದೇಶಕ ರಾಜಣ್ಣ, ಗ್ರಾಪಂ ಸದಸ್ಯ ಆನಂದ್, ಅರದೇಶನಹಳ್ಳಿ ಗ್ರಾಮಸ್ಥ ಕೆಂಪಣ್ಣ, ಕೆ.ರಾಮಯ್ಯ, ಮಹಿಳೆಯರು, ಭಕ್ತರು ಇದ್ದರು.
ದೇವರ ದರ್ಶನ: ದೇವನಹಳ್ಳಿ ನಗರದ ನಗರೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಹಬ್ಬದ ಅಂಗವಾಗಿ ಸ್ವಾಮಿಯವರಿಗೆ ವಿಶೇಷ ಪೂಜೆ ನಡೆಯಿತು. ನಗರದ ಕೋಟೆಯಲ್ಲಿರುವ ಚಂದ್ರಮೌಳೇಶ್ವರ ಹಾಗೂ ನಂಜುಂಡೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
ತಾಲೂಕಿನ ಬೊಮ್ಮವಾರ ಗ್ರಾಮದ ಸುಂದರೇಶ್ವರ ಸ್ವಾಮಿಯವರಿಗೆ ವಿಶೇಷ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ತಾಲೂಕಿನ ಹೊಸನಲ್ಲೂರು ಗ್ರಾಮದ ಗಂಗಾಧರನಾಥೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಹೂವಿನ ಅಲಂಕಾರ ನಡೆಯಿತು.