Advertisement

ಗಡಿ ವಿಷಯಕ್ಕೆ ಕರೆದರೆ ಹಾಜರ್‌

07:30 AM Nov 25, 2017 | |

ಬೆಳಗಾವಿ: “ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಯಾವಾಗ ಕರೆದರೂ ಬೆಳಗಾವಿಯಲ್ಲಿ ಶಿವಸೇನೆ ನಾಯಕರು ಹಾಜರ್‌. ಈ ಬಗ್ಗೆ
ಮರಾಠಿ ಭಾಷಿಕರಿಗೆ ಯಾವುದೇ ಸಂಶಯ ಬೇಡ.’  -ಹೀಗೆಂದು ಅಭಯ ನೀಡಿದವರು ಶಿವಸೇನಾ ಪ್ರಮುಖ ಉದ್ಧವ ಠಾಕ್ರೆ.

Advertisement

ಮಹಾರಾಷ್ಟ್ರದ ಚಂದಗಡ ತಾಲೂಕಿನ ಶಿನೋಳಿಯಲ್ಲಿ ತಮ್ಮನ್ನು ಭೇಟಿಯಾದ ಬೆಳಗಾವಿ ಮೇಯರ್‌ ಸಂಜೋತಾ ಬಾಂದೇ ಕರ ಹಾಗೂ ಇತರೆ ಪಾಲಿಕೆ ಸದಸ್ಯರಿಗೆ “ಬೆಳಗಾವಿ ಯಲ್ಲಿ ಮರಾಠಿ ಭಾಷಿಕರಿಗೆ ಅನ್ಯಾಯವಾದರೆ ಶಿವಸೇನೆ ತಮ್ಮ ಬೆನ್ನಿಗೆ ನಿಲ್ಲಲಿದೆ’ ಎಂಬ ಭರವಸೆ ನೀಡಿದರು. ಗಡಿ ವಿಷಯದ ಬಗ್ಗೆ ಸುದೀರ್ಘ‌ವಾಗಿ ಚರ್ಚಿಸಲು ಶಿವಸೇನೆ ಉತ್ಸುಕವಾಗಿದೆ. ಮೇಯರ್‌ ಹಾಗೂ ಇತರೆ ಸದಸ್ಯರು ಮುಂಬೈಗೆ ಬರಬೇಕು. ಚರ್ಚೆ ನಡೆಸಬೇಕು ಎಂದು ಆಹ್ವಾನ ನೀಡಿದರು. ಮೇಯರ್‌ ಬಾಂದೇಕರ ಡಿಸೆಂಬರ್‌ನಲ್ಲಿ  ಮುಂಬೈಗೆ ಬರುವುದಾಗಿ ತಿಳಿಸಿದರು. ಇಲ್ಲಿಯ ಮರಾಠಿ ಭಾಷಿಕರೂ ಶಿವಸೇನೆಗೆ ಬೆಂಬಲವಾಗಿ ನಿಂತರೆ ಶೀಘ್ರದಲ್ಲೇ ಗಡಿ ವಿವಾದ ಬಗೆಹರಿಯಲಿದೆ ಎಂದು ಠಾಕ್ರೆ ಹೇಳಿದರು.

ಮಾಜಿ ಮೇಯರ್‌ ಕಿರಣ ಸಾಯನಾಕ, ಸರಿತಾ ಪಾಟೀಲ, ಸದಸ್ಯರಾದ ರತನ ಮಾಸೇಕರ, ಪಂಢರಿ ಪರಬ್‌, ವಿಜಯ ಭೋಸಲೆ, ರಾಜು ಬಿರ್ಜೆ, ಮೋಹನ ಬಾಂಧುರ್ಗೆ, ರಾಕೇಶ ಪಲಂಗೆ, ಮನೋಹರ ಹಲಗೇಕರ ಇತರರು ಇದ್ದರು. ಶುಕ್ರವಾರ ಬೆಳಗ್ಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದ ಶಿವಸೇನೆ ಅಧ್ಯಕ್ಷ ಉದ್ಧವ ಠಾಕ್ರೆ ಅವರನ್ನು ಶಿವಸೇನೆ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಭೇಟಿಯಾಗಿ ಮಹಾರಾಷ್ಟ್ರ ಪರ ಘೋಷಣೆ ಕೂಗಿ ಕೂಡಲೇ ಗಡಿ ವಿವಾದ ಬಗೆಹರಿಸಿ ನಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದರು. ಬೆಳಗಾವಿ ಮಹಾರಾಷ್ಟ್ರದ್ದು. ಇದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಠಾಕ್ರೆ ಅಭಯ ನೀಡಿದರು. 

ಬೆಳಗಾವಿ ನಮ್ಮದೇ, ಈಗಾಗಲೇ ಬೆಳಗಾವಿಯನ್ನು ನಮ್ಮದು ಮಾಡಿ ಕೊಂಡಿದ್ದೇವೆ. ಯುವ ಸೇನೆ ಮುಖಂಡರ ಹೇಳಿಕೆಗಳಿಗೆ ಉತ್ತರಿಸಬೇಕಾದ ಅಗತ್ಯವಿಲ್ಲ. ಶಿವಸೇನೆ ಮುಖಂಡರು ಈಗ ಹೊಸದೇನೂ ಹೇಳುತ್ತಿಲ್ಲ. ಪದೇಪದೆ ಇದೇ ಕ್ಯಾತೆ ತೆಗೆಯುತ್ತಿದ್ದಾರೆ. 
 ●ಪ್ರೊ.ಚಂದ್ರಶೇಖರ ಪಾಟೀಲ, 83ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next