ಮುಂಬಯಿ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ಅಸ್ಸಾಂ ಗೆ ತೆರಳಿರುವ ಶಿವಸೇನಾ ಶಾಸಕರ ವಿರುದ್ಧ ಶಿವಸೈನಿಕರ ಆಕ್ರೋಶ ತೀವ್ರಗೊಂಡಿದ್ದು, ಈಗಾಗಲೇ ಕೆಲವೆಡೆ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಇನ್ನೊಂದೆಡೆ ರಾಜ್ಯದೆಲ್ಲೆಡೆ ಜೂತೆ ಮಾರೋ ಆಂದೋಲನ ನಡೆಸಲಾಗುತ್ತಿದೆ.
ಪುಣೆ ಸೇರಿ ಮಹಾರಾಷ್ಟ್ರದ ವಿವಿಧೆಡೆ ಶಿವಸೇನೆಯ ಬಂಡಾಯ ಶಾಸಕರ ವಿರುದ್ಧ ಶಿವಸೇನೆ ಕಾರ್ಯಕರ್ತರು ‘ಜೂತೆ ಮಾರೋ ಆಂದೋಲನ’ ನಡೆಸುತ್ತಿದ್ದು, ಶಾಸಕರ ಭಾವಚಿತ್ರಗಳಿಗೆ ಚಪ್ಪಲಿಯಿಂದ ಹೊಡೆಯುತ್ತಿದ್ದಾರೆ. ಹಲವೆಡೆ ಪ್ರತಿಕೃತಿಗಳನ್ನು ದಹನ ಮಾಡಲಾಗಿ, ಧಿಕ್ಕಾರ ಕೂಗಲಾಗಿದೆ.
ರಾಜಯದಲ್ಲಿ ಶಿವಸೇನಾ ಶಾಸಕರ ನಿವಾಸಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನೂ ಓದಿ : ಲಸಿಕೆಯ ರಕ್ಷಣಾತ್ಮಕ ಹೊದಿಕೆ ಇದ್ದರೂ ಕೋವಿಡ್ ಮುನ್ನೆಚ್ಚರಿಕೆ ಅಗತ್ಯ:ಪ್ರಧಾನಿ ಮನ್ ಕಿ ಬಾತ್