ಮುಂಬೈ : ಮಹಾರಾಷ್ಟ್ರದಲ್ಲಿ ನಿನ್ನೆ(ಮಂಗಳವಾರ, ಫೆ. 16) ಮತ್ತೆ ಕೋವಿಡ್ ಸೋಂಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳುವುದರ ಮೂಲಕ ಲಾಕ್ಡೌನ್ ಸುಳಿವನ್ನು ನೀಡಿದ್ದಾರೆ.
ಇನ್ನು, ಶಿವ ಸೇನೆಯ ಮುಖವಾಣಿ, “ಸಾಮ್ನಾ”, ಜನರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವುದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿದೆ.
ಓದಿ : ಬಾರಕೂರು ಶ್ರೀ ಕಾಳಿಕಾಂಬಾ ದೇಗುಲ: ಅಷ್ಠಬಂಧ ಬ್ರಹ್ಮಕಲಶೋತ್ಸವ
“ಕೋವಿಡ್ ಸೋಂಕು ಹೆಚ್ಚು ಹರಡುತ್ತಿರುವುದರಿಂದ ಆರ್ಥಿಕ ಹಾಗೂ ಮೆಡಿಕಲ್ ಡಿಪಾರ್ಟ್ ಮೆಂಟ್ ಹೆಚ್ಚು ತೊಂದರೆ ಅನುಭವಿಸುತ್ತಿದೆ. ಇಂತಹ ಸಂದರ್ಭದಲ್ಲಿ, ಕೋವಿಡ್ ನಿಯಂತ್ರಿಸಲು ಸರ್ಕಾರ ಆದರೂ ಹೇಗೆ ಕಾರ್ಯ ನಿರ್ವಹಿಸಲು ಸಾಧ್ಯ..? ಯಾವ ಯೋಜನೆಯನ್ನು ಕೈಗೊಳ್ಳುವುದಕ್ಕೆ ಸಾಧ್ಯವಿದೆ” ಎಂದು ಸಾಮ್ನಾ ಉಲ್ಲೇಖಿಸಿದೆ.
ಕೋವಿಡ್ ನಿಯಮವನ್ನು ಜನರು ಪಾಲಿಸಲೇ ಬೇಕು. ಇಲ್ಲವಾದಲ್ಲಿ, ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಲಾಕ್ಡೌನ್ ಮಾಡುವ ಪರಿಸ್ಥಿತಿ ಬರಬಹುದು. ಸಾರ್ವಜನಿಕರು ಇದನ್ನು ಗಂಭೀರ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳಬೇಕು ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿರುವುದನ್ನು ಸಾಮ್ನಾ ತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿದೆ.
“ಲಾಕ್ಡೌನ್ ನ್ನು ತೆರವುಗೊಳಿಸುವುದರಿಂದ ಮತ್ತಷ್ಟು ವ್ಯತಿರಿಕ್ತ ಪರಿಸ್ಥಿತಿಯನ್ನು ಮಹರಾಷ್ಟ್ರ ಎದುರಿಸುವಂತಾಗುತ್ತಿದೆ” ಎಂದು ಕೂಡ ಸಾಮ್ನಾ ಹೇಳಿದೆ.
ಓದಿ : ರಾಮನ ಹೆಸರಲ್ಲಿ ಧಾರ್ಮಿಕ ಭ್ರಷ್ಟಾಚಾರ ನಡೆಯುತ್ತಿದೆ: ಹೆಚ್ ಡಿಕೆ ಆಕ್ರೋಶ