Advertisement

ಸರ್ಕಾರ ರಚನೆಗೆ ಬಹುಮತ ಇದೆ; ಶಿವಸೇನಾ, ಎನ್ ಸಿಪಿ, ಕಾಂಗ್ರೆಸ್ ನಿಂದ ರಾಜ್ಯಪಾಲರಿಗೆ ಮನವಿ

09:57 AM Nov 26, 2019 | Nagendra Trasi |

ಮುಂಬೈ: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಕಾನೂನು ಸಮರ ಒಂಡೆಡೆ ನಡೆಯುತ್ತಿದ್ದು,  ಮತ್ತೊಂದೆಡೆ ಶಿವಸೇನಾ, ಎನ್ ಸಿಪಿ ಮತ್ತು ಕಾಂಗ್ರೆಸ್ ಸರ್ಕಾರ ರಚಿಸುವ ಬಗ್ಗೆ ಸೋಮವಾರ 162 ಶಾಸಕರ ಸಹಿಯುಳ್ಳ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದೆ ಎಂದು ವರದಿ ತಿಳಿಸಿದೆ.

Advertisement

ಎನ್ ಸಿಪಿಯ ಅಜಿತ್ ಪವರ್ ಅವರ ಪ್ರಕಾರ ತಮ್ಮ ಪಕ್ಷ  ಬಿಜೆಪಿ ಜತೆಗಿದೆ ಎಂದು ತಿಳಿಸಿದ್ದು, 54 ಶಾಸಕರಲ್ಲಿ 51 ಎನ್ ಸಿಪಿ ಶಾಸಕರ ಸಹಿಯನ್ನು ರಾಜ್ಯಪಾಲರಿಗೆ ನೀಡಿರುವ ಪತ್ರದಲ್ಲಿ ನೀಡಲಾಗಿದೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಮ್ಮ ಮೂರು ಪಕ್ಷಗಳಿಗೂ ಸರಕಾರ ರಚಿಸುವಷ್ಟು ಬಹುಮತ ಇದೆ ಎಂದು ರಾಜ್ಯಪಾಲರಿಗೆ ನೀಡಿರುವ ಪತ್ರದಲ್ಲಿ ತಿಳಿಸಿರುವುದಾಗಿ ವರದಿ ವಿವರಿಸಿದೆ. ಶಿವಸೇನಾದ 63 ಶಾಸಕರ(ಪಕ್ಷೇತರರು ಸೇರಿ) ಸಹಿ, ಕಾಂಗ್ರೆಸ್ ಪಕ್ಷದ 44 ಹಾಗೂ ಎನ್ ಸಿಪಿಯ 51 ಶಾಸಕರ ಸಹಿ, ಸಮಾಜವಾದಿ ಪಕ್ಷ ಕೂಡಾ ಈ ಮೂರು ಪಕ್ಷಗಳ ಜತೆ ಕೈಜೋಡಿಸಿದ್ದು, ಇಬ್ಬರು ಶಾಸಕರು ಸಹಿ ಹಾಕಿರುವ ಪತ್ರವನ್ನು ರಾಜ್ಯಪಾಲರಿಗೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next