Advertisement

ಕಂಗನಾ ಕಚೇರಿ ನೆಲಸಮಕ್ಕೂ ಶಿವಸೇನೆಗೂ ಸಂಬಂಧವಿಲ: ಸಂಜಯ್ ರಾವುತ್‌

05:19 PM Sep 15, 2020 | Nagendra Trasi |

ಮುಂಬಯಿ: ಬಾಲಿವುಡ್‌ ನಟಿ ಕಂಗನಾ ರಾವತ್‌ ಅವರ ಕಚೇರಿ ನೆಲಸಲಗೊಳಿಸಿದ ಬಳಿಕ ಇದಕ್ಕೂ ಶಿವಸೇನೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಶಿವಸೇನೆ ಸಂಸದ ಸಂಜಯ್‌ ರಾವುತ್‌ ಅವರು ಹೇಳಿದ್ದು, ಕಂಗನಾ ಅವರ ಕಚೇರಿಯನ್ನು ಬಿಎಂಸಿ ಧರೆಗುರುಳಿಸಿದೆ ಎಂದಿದ್ದಾರೆ.

Advertisement

ಕಂಗನಾ ಅವರ ಕಚೇರಿಯ ಮೇಲೆ ಬಿಎಂಸಿ ಕ್ರಮ ಕೈಗೊಂಡಿದೆ. ಇದಕ್ಕೆ ಶಿವಸೇನೆ ಜತೆ ಯಾವುದೇ ಸಂಬಂಧವಿಲ್ಲ. ಈ ವಿಷಯದ ಬಗ್ಗೆ ನೀವು ಮೇಯರ್‌
ಅಥವಾ ಬಿಎಂಸಿ ಆಯುಕ್ತರೊಂದಿಗೆ ಮಾತನಾಡಬೇಕು ಎಂದು ಮಾಧ್ಯಮಗಳಿಗೆ ರಾವುತ್‌ ಹೇಳಿದ್ದಾರೆ. ಪ್ರತೀಕಾರದಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂಜಯ್‌ ರಾವುತ್‌ ಹೇಳಿದ್ದು, ಕಂಗನಾ ಒಬ್ಬ ಕಲಾವಿದೆ ಮತ್ತು ಮುಂಬಯಿಯಲ್ಲಿ ವಾಸಿಸುತ್ತಿದ್ದಾರೆ ಎಂದಿದ್ದಾರೆ.

ಹಲವು ಬಾಲಿವುಡ್‌ ನಟ-ನಟಿಯರ ಅಕ್ರಮ ಕಟ್ಟಡಗಳ ವಿರುದ್ಧ ಪ್ರಶ್ನೆ ಈ ಮಧ್ಯೆ ಬಿಎಂಸಿ ಕಂಗನಾ ಅವರ ಕಚೇರಿಯ ಮೇಲೆ ಮಾತ್ರವಲ್ಲದೆ ಅವರ ಮನೆಯ ಅಕ್ರಮ ನಿರ್ಮಾಣದ ಬಗ್ಗೆಯೂ ನಿಗಾ ಇಡುತ್ತಿದ್ದು, ಸದ್ಯಕ್ಕೆ ನ್ಯಾಯಾಲಯ ಬಿಎಂಸಿಗೆ ತಡೆಯಾಜ್ಞೆ ನೀಡಿದೆ. ಬಾಲಿವುಡ್‌ ನಲ್ಲಿ ಕಂಗನಾ ಮಾತ್ರವಲ್ಲದೆ ಶಾರುಖ್‌, ಕಪಿಲ್‌ ಶರ್ಮಾ, ಪ್ರಿಯಾಂಕಾ ಚೊಪ್ರಾ, ಇರ್ಫಾನ್‌ ಖಾನ್‌ ಅವರಂತಹ ಅನೇಕ ಪ್ರಸಿದ್ಧ ವ್ಯಕ್ತಿಗಳ ಅಕ್ರಮ ಕಟ್ಟಡಗಳ ಬಗ್ಗೆ ಇದೀಗ ಪ್ರಶ್ನೆ ಎದ್ದಿದೆ.

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರ ಕಚೇರಿಯಲ್ಲೂ ಬಿಎಂಸಿ ಗಮನ ಸೆಳೆದಿದೆ. ಪ್ರಿಯಾಂಕಾ ಅವರ ಒಶಿವಾರಾ ಕಚೇರಿಯಲ್ಲಿ ಅಕ್ರಮ ನಿರ್ಮಾಣಕ್ಕಾಗಿ ಬಿಎಂಸಿ ಸುಮಾರು ಎರಡು ವರ್ಷಗಳ ಹಿಂದೆ ಕಾನೂನು ನೋಟಿಸ್‌ ನೀಡಿದ್ದು, ಆ ಸಮಯದಲ್ಲಿ ಅವರು ನ್ಯೂಯಾರ್ಕ್ ನಲ್ಲಿದ್ದರು. ಇದನ್ನು ಒಂದು ತಿಂಗಳಲ್ಲಿ ಧರೆಗುರುಳಿಸುವಂತೆ ಬಿಎಂಸಿ ಪ್ರಿಯಾಂಕಾ ಅವರನ್ನು ಕೇಳಿಕೊಂಡಿತ್ತು. ಅಂಧೇರಿ ಪಶ್ಚಿಮ ಪ್ರದೇಶದ ಓಶಿವಾರಾದಲ್ಲಿ ಕಚೇರಿಯೊಳಗೆ
ಅಕ್ರಮವಾಗಿ ನಿರ್ಮಿಸಲಾಗಿರುವುದಲ್ಲದೆ, ಅದರ ಬಳಿ ಮತ್ತೂಂದು ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗಿದೆ ಎಂಬ ಆರೋಪದ ಮೇಲೆ ಪ್ರಿಯಾಂಕಾ ಅವರಿಗೆ
ನೋಟಿಸ್‌ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಇರ್ಫಾನ್‌ ಖಾನ್‌ ಅವರ ಫ್ಲ್ಯಾಟ್‌ ಅನ್ನು ಬಿಎಂಸಿ ಗುರಿಯಾಗಿಸಿದ್ದು, ಈ ಬಗ್ಗೆ ಪೊಲೀಸರು ಮತ್ತು ಬಿಎಂಸಿ ಇಬ್ಬರೂ ಹಲವಾರು ದೂರುಗಳನ್ನು ಸ್ವೀಕರಿಸಿದ್ದಾರೆ. ಡಿಎಲ್‌ಹೆಚ್‌ ಕಟ್ಟಡದ 5ನೇ ಮಹಡಿಯಲ್ಲಿರುವ ಇರ್ಫಾನ್‌ ಖಾನ್‌ ಅವರ ಫ್ಲ್ಯಾಟ್‌ನ ಪರಿಶೀಲನೆಯ ಸಮಯದಲ್ಲಿ, ತಂಡವು ಫ್ಲ್ಯಾಟ್‌ನ ರಚನೆಯಲ್ಲಿ ಗಮನಾರ್ಹ
ಬದಲಾವಣೆಗಳನ್ನು ಕಂಡುಕೊಂಡಿದೆ.

Advertisement

ಈ ಪ್ರಕರಣದಲ್ಲಿ ಪೊಲೀಸರು ಇರ್ಫಾನ್‌ ಖಾನ್‌ ಸೇರಿದಂತೆ ಇತರ ನಾಲ್ವರ ವಿರುದ್ಧ ನೋಟಿಸ್‌ ನೀಡಿದ್ದರು. 17 ಮಹಡಿಗಳ ದೇವ್‌ ಲ್ಯಾಂಡ್‌ ಹೌಸಿಂಗ್‌ ಸೊಸೈಟಿಯ ಪ್ರತಿ ಮಹಡಿಯಲ್ಲಿ ಪಾರ್ಕಿಂಗ್‌ ಇದೆ ಎಂದು ವಿವರಿಸಲಾಗಿದೆ. 2017ರಲ್ಲಿ ವಸೋವಾದಲ್ಲಿನ ಅರ್ಷದ್‌ ಅವರ ಬಂಗಲೆಯ ಮೇಲೆ ಮಾಡಿದ ನಿರ್ಮಾಣವನ್ನು ಕಾನೂನು ಬಾಹಿರವೆಂದು ಘೋಷಿಸಿ ನೆಲಸಮ ಮಾಡಲಾಯಿತು.

2017ರಲ್ಲಿ ಮುಂಬಯಿ ಮುನ್ಸಿಪಲ್‌ ಕಾರ್ಪೋರೇಶನ್‌ ಮಿಕಾ ಸಿಂಗ್‌ ಅವರ ಫ್ಲ್ಯಾಟ್‌ ವಿರುದ್ಧವಾಗಿ ಬಿಎಂಸಿ ಅವರಿಗೆ ಲೀಗಲ್‌ ನೋಟಿಸ್‌ ನೀಡಿತ್ತು. ಮಿಕಾ ತನ್ನ ಡಿಎಲ್‌ಹೆಚ್‌ ಎನ್‌ಕ್ಲೇವ್‌ ಫ್ಲಾಟ್‌ ಅನ್ನು ಒಶಿವಾರಾದಲ್ಲಿ ಅಕ್ರಮವಾಗಿ ನಿರ್ಮಿಸಿದ್ದಾನೆ ಎಂದು ವರದಿಯಾಗಿದ್ದು, ಈ ಕಾರಣದಿಂದಾಗಿ ಬಿಎಂಸಿ ಅವರಿಗೆ ನೋಟಿಸ್‌ ಕಳುಹಿಸಿದೆ.

ಕಪಿಲ್‌ ಶರ್ಮಾ ಅವರ ಫ್ಲ್ಯಾಟ್‌ನಲ್ಲಿ ಅಕ್ರಮ ನಿರ್ಮಾಣ ನಡೆಸಿದ್ದಾರೆ ಎಂಬ ಆರೋಪವಿದೆ. 2016ರಲ್ಲಿ ಬಿಎಂಸಿ ವಸೋìವಾದ ಕಪಿಲ್‌ ಶರ್ಮಾ ಅವರ ಬಂಗಲೆಯಲ್ಲಿ ಅಕ್ರಮ ನಿರ್ಮಾಣವನ್ನು ಕೆಡವಿತ್ತು. ವಾಸ್ತವವಾಗಿ, ಬಿಎಂಸಿಯ ಸೂಚನೆಗೆ ಸ್ಪಂದಿಸದಿದ್ದಾಗ ಕಪಿಲ್‌ ಶರ್ಮಾ ಅವರ ಬಂಗಲೆಯ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಸೂಚನೆಯಲ್ಲಿ, ನಿರ್ಮಾಣ ಕಾರ್ಯವನ್ನು ನಿಲ್ಲಿಸಲು ಸೂಚನೆಗಳನ್ನು ನೀಡಲಾಗಿದೆ. ಈ ಕ್ರಮದ ವಿರುದ್ಧ ಕಪಿಲ್‌ ಶರ್ಮಾ ಕೂಡ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next