Advertisement

ಮಹಾರಾಷ್ಟ್ರ ಸಿಎಂ ಪಟ್ಟ ಏಕನಾಥ್ ಶಿಂಧೆಗೆ, ಶೀಘ್ರವೇ ಅಂತಿಮ ನಿರ್ಧಾರ: ಉದ್ಧವ್ ಠಾಕ್ರೆ

09:30 AM Nov 23, 2019 | Nagendra Trasi |

ನವದೆಹಲಿ:ಮಹಾರಾಷ್ಟ್ರದಲ್ಲಿ ಶಿವಸೇನಾ, ಎನ್ ಸಿಪಿ (ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ) ಹಾಗೂ ಕಾಂಗ್ರೆಸ್ ಮೈತ್ರಿಯ ಸರ್ಕಾರ ರಚನೆ ಸಮೀಪಿಸುತ್ತಿರುವ ನಡುವೆಯೇ ಶಿವಸೇನಾದೊಳಗೆಯೇ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕೆಂಬ ಬಗ್ಗೆ ಗೊಂದಲ ತಲೆದೋರಿದೆ. ಒಂದು ವೇಳೆ ಶಿವಸೇನಾದ ನಾಯಕರೇ ಸಿಎಂ ಅಭ್ಯರ್ಥಿಯಾಗುವುದಿದ್ದರೆ ಯಾರು ಎಂಬ ಹೆಸರನ್ನು ಇನ್ನಷ್ಟೇ ಅಂತಿಮಗೊಳಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಮೂಲಗಳ ಪ್ರಕಾರ, ಶಿವಸೇನಾದ ಮುಖ್ಯಸ್ಥ ಉದ್ಧವ್ ಠಾಕ್ರೆಯೇ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಸರ್ಕಾರ ಐದು ವರ್ಷ ಪೂರ್ಣಗೊಳಿಸಲು ಉದ್ಧವ್ ಠಾಕ್ರೆಯೇ ಸಿಎಂ ಆಗಬೇಕೆಂದು ಎನ್ ಸಿಪಿಯ ಶರದ್ ಪವಾರ್ ಮನವಿ ಮಾಡಿಕೊಂಡಿದ್ದರು. ಏತನ್ಮಧ್ಯೆ ಸಂಜಯ್ ರಾವತ್ ಹೆಸರು ಕೂಡಾ ಚಾಲ್ತಿಗೆ ಬಂದಿದೆ.

ಇದೀಗ ಮುಖ್ಯಮಂತ್ರಿ ಹುದ್ದೆಯನ್ನು ಶಿವಸೇನಾದ ಹಿರಿಯ ಮುಖಂಡ ಏಕನಾಥ್ ಶಿಂಧೆಗೆ ನೀಡಬೇಕೆಂಬ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ. ಶಿಂಧೆ ಮುಖ್ಯಮಂತ್ರಿ ಹುದ್ದೆಗೇರುವ ಕುರಿತು ಬಹುತೇಕ ಶಿವಸೇನಾದ ಶಾಸಕರು ಒಪ್ಪಿಗೆ ಸೂಚಿಸಿದ್ದು, ಈ ಬಗ್ಗೆ ಉದ್ಧವ್ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next