Advertisement

ಮಹಾರಾಷ್ಟ್ರ : 155 ಸ್ಥಾನ ಬಿಟ್ಟುಕೊಡಲು ಬಿಜೆಪಿಗೆ ಶಿವ ಸೇನೆ ಆಗ್ರಹ

07:39 PM Dec 19, 2018 | udayavani editorial |

ಹೊಸದಿಲ್ಲಿ  : ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢ ವಿಧಾನ ಸಭಾ ಚುನಾವಣೆಗಳನ್ನು ಸೋತಿರುವ ಬಿಜೆಪಿ, ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ  ಒಟ್ಟು  288 ಸ್ಥಾನಗಳ ಪೈಕಿ ತನಗೆ 155 ಸ್ಥಾನಗಳನ್ನು ಬಿಟ್ಟುಕೊಡಬೇಕೆಂದು ಅದರ ಮಿತ್ರ ಪಕ್ಷವಾಗಿರುವ, ಉದ್ಧವ್‌ ಠಾಕ್ರೆ ನೇತೃತ್ವದ ಶಿವ ಸೇನೆ ಪಟ್ಟು ಹಿಡಿದಿದೆ.

Advertisement

2019ರ ನವೆಂಬರ್‌ ನಲ್ಲಿ ಹಾಲಿ ಮಹಾರಾಷ್ಟ್ರ ವಿಧಾನ ಸಭೆಯ ಕಾರ್ಯಾವಧಿ ಮುಗಿಯಲಿದ್ದು ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯೊಂದಿಗೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಕೂಡ ನಡೆಸುವಂತೆ ಶಿವ ಸೇನೆ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ. 

ಶಿವ ಸೇನೆಗೆ 138 ಸ್ಥಾನಗಳನ್ನು ಬಿಟ್ಟುಕೊಡಲು ಬಿಜೆಪಿ ಸಿದ್ಧವಿದೆ. ಆದರೆ ತನಗೆ 155 ಸ್ಥಾನಗಳು ಬೇಕೇ ಬೇಕು ಎಂದು ಶಿವ ಸೇನೆ ಹಠ ಹಿಡಿದಿದೆ.

ಹಾಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿಯ 121 ಮತ್ತು ಶಿವ ಸೇನೆಯ 63 ಶಾಸಕರಿದ್ದು ಈ ಮಿತ್ರ ಪಕ್ಷಗಳ ಸಂಖ್ಯಾಬಲ 184 ಇದೆ. 288 ಸದಸ್ಯ ಬಲದ ಸದನದಲ್ಲಿ  ಸರಕಾರ ನಡೆಸಲು 145 ಶಾಸಕರ ಬಲ ಅಗತ್ಯವಿರುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next