Advertisement

ಈ ಬಾರಿ ದಸರಾ ರ‍್ಯಾಲಿಗೆ ಅನುಮತಿ ಸಿಗುತ್ತದೋ ಗೊತ್ತಿಲ್ಲ: ಉದ್ಧವ್ ಠಾಕ್ರೆ

07:30 PM Aug 29, 2022 | Team Udayavani |

ಮುಂಬಯಿ : ನಗರದ ಶಿವಾಜಿ ಪಾರ್ಕ್‌ನಲ್ಲಿ ಪಕ್ಷದ ವಾರ್ಷಿಕ ದಸರಾ ರ‍್ಯಾಲಿನಡೆಯಲಿದೆ, ಆದರೆ ಅನುಮತಿ ಸಿಗುತ್ತದೋ ಇಲ್ಲವೋ ಗೊತ್ತಿಲ್ಲಎಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಸೋಮವಾರ ಹೇಳಿಕೊಂಡಿದ್ದು, ಶಿವಾಜಿ ಪಾರ್ಕ್‌ನಲ್ಲಿ ಶಿವಸೇನೆ ನಡೆಸುತ್ತಿರುವ ದಶಕಗಳಷ್ಟು ಹಳೆಯ ರಾಜಕೀಯ ಕಾರ್ಯಕ್ರಮಕ್ಕೆ ಇನ್ನೂ ಒಪ್ಪಿಗೆ ದೊರಕದ ಹಿನ್ನೆಲೆಯಲ್ಲಿ ಠಾಕ್ರೆಯವರಿಂದ ಈ ರೀತಿಯ ಹೇಳಿಕೆಗಳು ಬಂದಿವೆ.

Advertisement

ಈ ವರ್ಷ ಜೂನ್‌ನಲ್ಲಿ ಪಕ್ಷ ವಿಭಜನೆಯಾದ ನಂತರ ಶಿವಸೇನೆ ನಡೆಸುತ್ತಿರುವ ಮೊದಲ ದಸರಾ ರ‍್ಯಾಲಿ ಇದಾಗಿದೆ. ಸೇನಾ ಶಾಸಕರ ಗುಂಪಿನ ಬಂಡಾಯವು ಠಾಕ್ರೆ ನೇತೃತ್ವದ ಸರ್ಕಾರದ ಪತನಕ್ಕೆ ಕಾರಣವಾಯಿತು. ಶನಿವಾರ, ಉದ್ಧವ್ ಠಾಕ್ರೆ ಅವರ ಪುತ್ರ ಮತ್ತು ಮಾಜಿ ರಾಜ್ಯ ಸಚಿವ ಆದಿತ್ಯ ಠಾಕ್ರೆ ಅವರು ತಮ್ಮ ವಾರ್ಷಿಕ ದಸರಾ ರ‍್ಯಾಲಿಯನ್ನು ನಡೆಸಲು ಶಿವಸೇನೆಯಿಂದ ಅರ್ಜಿಯನ್ನು ಅಧಿಕಾರಿಗಳು ಸ್ವೀಕರಿಸುತ್ತಿಲ್ಲ ಎಂದು ಹೇಳಿದ್ದರು.

ಈ ವರ್ಷ ಅಕ್ಟೋಬರ್ 5 ರಂದು ದಸರಾ ಆಚರಿಸಲಾಗುತ್ತಿದ್ದು, ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಉದ್ಧವ್ ಠಾಕ್ರೆ, ಶಿವಸೈನಿಕರು ರಾಜ್ಯದ ವಿವಿಧ ಭಾಗಗಳಿಂದ ಶಿವಾಜಿ ಪಾರ್ಕ್‌ಗೆ ಬರಲು ಸಿದ್ಧತೆ ಆರಂಭಿಸಿದ್ದಾರೆ. “ಶಿವಸೇನೆಯ ವಾರ್ಷಿಕ ಸಭೆಯು ಶಿವತೀರ್ಥದಲ್ಲಿ ನಡೆಯುತ್ತದೆ (ಶಿವಾಜಿ ಪಾರ್ಕ್‌ಗೆ ಸೇನೆಯು ಬಳಸುವ ಹೆಸರು)” ಎಂದು  ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next