Advertisement

ಕನ್ನಡಿಗರ ವಿರುದ್ಧ ಉದ್ಧಟತನ

01:04 AM Dec 30, 2019 | mahesh |

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ, ಶಿವಸೇನೆ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಗಡಿ ಭಾಗದಲ್ಲಿ ಆರಂಭವಾಗಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ.

Advertisement

ಕನ್ನಡ ಮುಖಂಡರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಶಿವಸೇನೆ ಕಾರ್ಯಕರ್ತರು ಮಹಾರಾಷ್ಟ್ರದ ವಿವಿಧ ಕಡೆಗಳಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಕೊಲ್ಲಾಪುರದಲ್ಲಿ ಕನ್ನಡ ಚಿತ್ರ ನಡೆಯುತ್ತಿದ್ದ ಚಿತ್ರಮಂದಿರಕ್ಕೆ ನುಗ್ಗಿ ಪ್ರತಿಭಟನೆ ಮಾಡಿದ್ದಲ್ಲದೆ ಅವನೇ ಶ್ರೀಮನ್ನಾರಾಯಣ ಚಿತ್ರ ರದ್ದುಪಡಿಸುವಂತೆ ಆಗ್ರಹಿಸಿದ್ದಾರೆ. ಗಡಿ ಭಾಗದ ಮಹಿಷಾಳದಲ್ಲಿ ಸಹ ಪ್ರತಿಭಟನೆ ಮಾಡಿ ಕನ್ನಡಿಗರ ಹಾಗೂ ಕರ್ನಾಟಕದ ವಿರುದ್ಧ ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಕರವೇ ಕಾರ್ಯಕರ್ತರೂ ಭಾರೀ ಪ್ರತಿಭಟನೆ ನಡೆಸಿದ್ದಾರೆ.

ಗಡಿ ಭಾಗದಲ್ಲಿ ಶಿವಸೇನೆ ಪ್ರತಿಭಟನೆ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ಪೊಲೀ ಸರು ಮುನ್ನೆಚ್ಚರಿಕೆ ಕ್ರಮವಾಗಿ ಬಸ್‌ ಸಂಚಾರ ಸ್ಥಗಿತಗೊಳಿಸಿದ್ದರು. ವಾತಾವರಣ ತಿಳಿಯಾದ ಅನಂತರ ರವಿವಾರ ಸಂಜೆಯಿಂದ ಬಸ್‌ ಸಂಚಾರ ಆರಂಭವಾಗಿದೆ.

ಈ ಮಧ್ಯೆ ಮಹಾರಾಷ್ಟ್ರದ ಚಂದಗಢದ ಎನ್‌ಸಿಪಿ ಶಾಸಕ ರಾಜೇಶ ಪಾಟೀಲ ರವಿವಾರ ಸಂಜೆ ಪೊಲೀಸ್‌ ಸರ್ಪಗಾವಲಿನಲ್ಲಿ ಬೆಳಗಾವಿಗೆ ಬಂದು ಎಂಇಎಸ್‌ ಕಾರ್ಯಕರ್ತರಿಂದ ಸಮ್ಮಾನ ಸ್ವೀಕರಿಸಿ ಗಡಿ ವಿವಾದ ಕುರಿತು ಮಾತನಾಡಿದ್ದಾರೆ. ಪೊಲೀಸರ ಷರತ್ತು ವಿಧಿಸಿದ್ದರಿಂದ ಪ್ರಚೋದನಕಾರಿ ಭಾಷಣ ಮಾಡಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next