Advertisement
ಬಾಬಾ ಸಾಹೇಬ ಪುರಂದರೆಯವರ ಅಧ್ಯಕ್ಷತೆಯ ಸಮಿತಿ ನೀಡಿದ ಸಂಶೋಧನಾ ವರದಿಯ ನಂತರ ಶಿವಾಜಿ ಮಹಾರಾಜರು 1627ನೇ ಇಸವಿಯಲ್ಲಿ ಹುಟ್ಟಿದ ವರ್ಷವನ್ನು ಸಮಿತಿ ಹೊಡೆದು ಹಾಕಿ 1630 ಫೆ.19ರಂದು ಹುಟ್ಟಿದರೆಂದು ದಾಖಲೆ ಸಹಿತವಾಗಿ ನೀಡಿತ್ತು. ಅಂದಿನಿಂದ ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ಫೆ.19 ಅಧಿಕೃತವಾಗಿ ಶಿವಾಜಿ ಜಯಂತಿ ಆಚರಿಸಲಾಗುತ್ತಿದೆ.
Related Articles
Advertisement
ಶಿವಾಜಿ ಮಹಾರಾಜರು ಬದುಕಿದ್ದು ಕೇವಲ 50ವರ್ಷ ಮಾತ್ರ (ನಿಧನ 1680ರ ಏಪ್ರಿಲ್ 3) ಇತಿಹಾಸಕಾರರ ಹೇಳಿಕೆಯಂತೆ ಶಿವಾಜಿ ತಮ್ಮ 14ನೇ ವಯಸ್ಸಿಗೆ ರಣರಂಗಕ್ಕೆ ಧುಮುಕಿದ್ದರು. ಅಂದರೆ 36 ವರ್ಷ ಅಖಂಡವಾಗಿ ಅವರು ರಣರಂಗದಲ್ಲಿ ಶತ್ರುವಿನ ಜೊತೆಗೆ ಯುದ್ಧ ನಿರತರಾಗಿದ್ದರು. ಇಷ್ಟು ಸಣ್ಣ ಅವಧಿಯಲ್ಲಿ ಅವರು ಉತ್ತರದ ದೆಹಲಿಯಿಂದ ದಕ್ಷಿಣದ ತಂಜಾವೂರು ತಿರುಚಿನಾಪಳ್ಳಿಯವರೆಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು.
ಅವರು ಗೆದ್ದ ಕೋಟೆಗಳ ಸಂಖ್ಯೆ 3,661. ಆ ಕಾಲದಲ್ಲಿ ಒಂದೊಂದು ಕೋಟೆಯೂ ಒಂದೊಂದು ರಾಜ್ಯವೆಂದು ಪರಿಗಣಿಸಲ್ಪಡುತ್ತಿತ್ತು. ಜಾಗತಿಕವಾಗಿ ಇಷ್ಟು ಸಣ್ಣ ಅವಧಿಯಲ್ಲಿ ಇಷ್ಟೊಂದು ಅಗಾಧ ಪ್ರಮಾಣದಲ್ಲಿ ರಾಜ್ಯಗಳನ್ನು ಗೆದ್ದ ಏಕೈಕ ವೀರ ಶಿವಾಜಿ ಎಂದು ಇತಿಹಾಸ ದಾಖಲಿಸಿದೆ.
ಲೇಖನ ಕೃಪೆ:ತರಂಗದಿಂದ ಆಯ್ದ ಭಾಗ
ಡಾ.ಸರಜೂ ಕಾಟ್ಕರ್