Advertisement

ಶಿರ್ವ:  ಮುಗಿಯದ ಶೌಚಾಲಯ ಸಮಸ್ಯೆ

01:00 AM Mar 15, 2019 | Harsha Rao |

ಶಿರ್ವ: ಶಿರ್ವ- ಮಂಚಕಲ್‌ ಪೇಟೆಯ ಬಸ್‌ಸ್ಟಾಂಡ್‌ ಬಳಿಯಿರುವ ಸಾರ್ವಜನಿಕ ಶೌಚಾಲಯವನ್ನು ಕಳೆದ 15ದಿನಗಳಿಂದ ಮುಚ್ಚಿ ಬೀಗ ಹಾಕಲಾಗಿದೆ.  ಇದು ಜನನಿಬಿಡ ಪ್ರದೇಶವಾಗಿದ್ದು ಪರಿಸರ ದಲ್ಲಿ ಎಲ್ಲಿಯೂ ಸಾರ್ವಜನಿಕ ಶೌಚಾಲಯವಿಲ್ಲ. ಇದರಿಂದ ಶೌಚಾಲಯ ಹುಡುಕಿಕೊಂಡು ಅಲೆ ದಾಡಬೇಕಾದ ಪರಿಸ್ಥಿತಿ ಇಲ್ಲಿದೆ.

Advertisement

ಹೊರಗುತ್ತಿಗೆ ನಿರ್ವಹಣೆ
ಇಲ್ಲಿನ ಶೌಚಾಲಯವನ್ನು ಖಾಸಗಿಯವರಿಗೆ ನಿರ್ವಹಣೆ ಮಾಡಲು ಹೊರಗುತ್ತಿಗೆ ನೀಡಲಾಗಿತ್ತು. ಅವರು ಸಾರ್ವಜನಿಕರಿಂದ ಶುಲ್ಕ ಪಡೆದು ನಿರ್ವಹಣೆ ನಡೆಸುತ್ತಿದ್ದರು. ಶೌಚಾಲ ಯಕ್ಕೆ ಬಂದವರಿಂದ ವಸೂಲು ಮಾಡುವ ಶುಲ್ಕದಲ್ಲಿ ಜೀವನ ಸಾಗಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಶೌಚಾಲಯದ ನಿರ್ವಹಣೆ ನಡೆಸುತ್ತಿದ್ದ ವ್ಯಕ್ತಿ ಪಂಚಾಯತ್‌ಗೆ ತಿಳಿಸದೆ ಶೌಚಾಲ ಯಕ್ಕೆ ಬೀಗ ಜಡಿದು ಹೋಗಿದ್ದಾನೆ ಎನ್ನಲಾಗಿದೆ.  

ಸಮಸ್ಯೆ ಪುನರಾವರ್ತನೆ
ಕಳೆದ ಜನವರಿ ತಿಂಗಳಲ್ಲಿ ಇದೇ ರೀತಿಯ ಸಮಸ್ಯೆ ಎದುರಾಗಿತ್ತು.ಆಗ ಪಂಚಾಯತ್‌ ಆಡಳಿತ ಶುಚಿ ಇಂಟರ್‌ನ್ಯಾಶನಲ್‌ ಅವರೊಂದಿಗೆ ಮಾಡಿ ಕೊಂಡಿರುವ ಒಪ್ಪಂದದ ಪ್ರಕಾರ ಶೌಚಾಲಯ ನಿರ್ವಹಣೆಗೆ ಬದಲಿ ಜನರ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಉಂಟಾದ ತಾತ್ಕಾಲಿಕ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಟ್ಟಿತ್ತು. ಇದೀಗ ಬದಲಿಗಾಗಿ ಬಂದ ವ್ಯಕ್ತಿ ಕೂಡ ಪಂಚಾಯತ್‌ಗೆ ತಿಳಿಸದೆ ಬೀಗ ಜಡಿದು ಹೋಗಿದ್ದು ಸಮಸ್ಯೆ ಪುನರಾವರ್ತನೆಯಾಗಿದೆ.

ಈಗಾಗಲೇ ಗ್ರಾ.ಪಂ.ಗೆ ಮನವಿ ಸಲ್ಲಿಸಲಾಗಿದ್ದು ಸ್ಥಳಿಯಾಡಳಿತ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸದೆ ನಿರ್ಲಕ್ಷé ವಹಿಸುತ್ತಿದೆ ಎಂದು ಮಾಜಿ ಗ್ರಾ.ಪಂ. ಸದಸ್ಯ ರಮೇಶ್‌ ಬಂಗೇರ ಆರೋಪಿಸಿದ್ದಾರೆ. 

ಶೌಚಾಲಯ ನಿರ್ವಹಣೆಗೆ ಸರಿಯಾದ ಜನ ಸಿಗುತ್ತಿಲ್ಲ. ನಿರ್ವಹಣೆಗೆ ಖಾಸಗಿಯವರು ಮುಂದೆ ಬಂದಲ್ಲಿ ಪಂಚಾಯತ್‌ ಸಹಕಾರ ನೀಡಲಿದೆ.ಸರಿಯಾದ ಶುಲ್ಕ ಪಾವತಿಸಿ ಸಾರ್ವ ಜನಿಕರು, ಪ್ರಯಾಣಿಕರು,ಬಸ್‌ ಸಿಬಂದಿ ಸಹಕರಿಸಬೇಕಿದೆ. 

Advertisement

ಸಾರ್ವಜನಿಕರಿಗೆ ಉಂಟಾದ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಶಿರ್ವ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್‌ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next