Advertisement

ಶಿರ್ವ: ಟೆಂಪೋ ಟ್ರಾವೆಲರ್‌-ಕಾರು ಮುಖಾಮುಖಿ ಢಿಕ್ಕಿ; ಇಬ್ಬರು ಗಂಭೀರ

11:34 PM Dec 25, 2022 | Team Udayavani |

ಶಿರ್ವ: ಇಲ್ಲಿನ ಮುಖ್ಯ ರಸ್ತೆಯ ಸಂಗೀತಾ ಕಾಂಪ್ಲೆಕ್ಸ್‌ ಬಳಿ ಟೆಂಪೋ ಟ್ರಾವೆಲರ್‌ ಮತ್ತು ಸ್ವಿಫ್ಟ್ ಕಾರು ಮುಖಾಮುಖಿ ಢಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡ ಘಟನೆ ಡಿ. 25ರ ರಾತ್ರಿ ಸಂಭವಿಸಿದೆ.

Advertisement

ಮಲ್ಪೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಟೆಂಪೋ ಟ್ರಾವೆಲರ್‌, ಬೆಳ್ಮಣ್‌ ನಿಂದ ಶಿರ್ವಕ್ಕೆ ಬರುತ್ತಿದ್ದ ಕಾರಿಗೆ ಮುಖಾಮುಖಿ ಢಿಕ್ಕಿ ಆಗಿದ್ದು ಕಾರಿನಲ್ಲಿದ್ದ ಶಿರ್ವ ಮಟ್ಟಾರಿನ ದಿನೇಶ್‌ ಮತ್ತು ಸೂರಜ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಿರ್ವ ಪೊಲೀಸರು ಸ್ಥಳದಲ್ಲಿದ್ದು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next