Advertisement

Shirva Sri Kashimath: ಶ್ರೀ ಸುಧೀಂದ್ರ ವನಕ್ಕೆ ಚಾಲನೆ

11:29 AM Aug 19, 2024 | Team Udayavani |

ಶಿರ್ವ: ಶ್ರೀ ಕಾಶೀಮಠದ ಹಿರಿಯ ಯತಿಗಳಾದ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದಿ ಮಹೋತ್ಸವದ ಪ್ರಯುಕ್ತ ಶಿರ್ವ ಶ್ರೀ ಕಾಶೀಮಠ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಜಮೀನಿನಲ್ಲಿ ಶ್ರೀ ಸುಧೀಂದ್ರ ಫಲೋಧ್ಯಾನಕ್ಕೆ ರವಿವಾರ ಚಾಲನೆ ನೀಡಲಾಯಿತು.

Advertisement

ದೇಗುಲದಲ್ಲಿ ಪ್ರಾರ್ಥನೆ ನೆರವೇರಿದ ಬಳಿಕ ಶ್ರೀಮದ್‌ ಸುಧೀಂದ್ರ ತೀರ್ಥರ ಭಾವಚಿತ್ರವನ್ನು ಕುಲಾವಿ ಭಜಕ ಬಾಂಧವರು ಬೆಳ್ಳಿಯ ಪಲ್ಲಕ್ಕಿಯಲಿಟ್ಟು ಮೆರವಣಿಗೆಯಲ್ಲಿ ಕೊಂಡೊಯ್ದ ಬಳಿಕ ಸುಧೀಂದ್ರ ವನದಲ್ಲಿ ವೇ|ಮೂ| ಕೆ.ರವೀಂದ್ರ ಭಟ್‌ಮತ್ತು ದೇಗುಲದ ಪ್ರಧಾನ ಅರ್ಚಕ ರಘುರಾಮ ಭಟ್‌ ಅವರ ನೇತೃತ್ವದಲ್ಲಿ ಗುರುಪೂಜೆ ಮತ್ತು ವೃಕ್ಷಪೂಜೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೆರಿಸಲಾಯಿತು. ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ| ದಾಮೋದರ ಪೈ ದೀಪ ಬೆಳಗಿಸಿ ಉದ್ಘಾಟಿಸಿ ಸುಧೀಂದ್ರ ವನಕ್ಕೆ ಚಾಲನೆ ನೀಡಿದರು.

ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ವೇ|ಮೂ| ರವಿ ಭಟ್‌ ಮಾತನಾಡಿ ಪರಿಸರ ಪ್ರೇಮಿಯಾಗಿದ್ದು, ಪಕ್ಷಿ ಸಂಕುಲದ ಆಹಾರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಶ್ರೀಮದ್‌ ಸುಧೀಂದ್ರ ತೀರ್ಥರ ಆಶಯದಂತೆ ಅವರ ಜನ್ಮ ಶತಾಬ್ದಿಯ ಪ್ರಯುಕ್ತ ದೇಗುಲಕ್ಕೆ ಸಂಬಂಧ ಪಟ್ಟ ಪ್ರತಿಯೊಂದು ಕುಲಾವಿಗಳು ಪಕ್ಷಿ ಸಂಕುಲದ ಉಳಿವಿಗಾಗಿ ಫಲೋಧ್ಯಾನದಲ್ಲಿ ಹಣ್ಣಿನ ಗಿಡ ನೆಟ್ಟು ಸ್ವಾಮೀಜಿಯವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಹೇಳಿದರು. ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ರಾಮದಾಸ ಶೆಣೈ,ನವೀನ್‌ ಶೆಣೈ ಮತ್ತು ಭಕ್ತರು ಉಪಸ್ಥಿತರಿದ್ದರು.

Advertisement

ಕೇಂದ್ರೀಯ ಸಮಿತಿಯ ಲೆಕ್ಕಪರಿಶೋಧಕ ಸುರೇಂದ್ರ ನಾಯಕ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ಚಿದಾನಂದ ಪೈ ಗಿಡ ನೆಡುವ ಬಗ್ಗೆ ಮಾಹಿತಿ ನೀಡಿ ವಂದಿಸಿದರು. ದೇಗುಲದ ಭಕ್ತ ಸಮೂಹಕ್ಕೆ ಫಲ ಬರುವ ಗಿಡಗಳನ್ನು ವಿತರಿಸಿದ ಬಳಿಕ ಸಾಮೂಹಿಕವಾಗಿ ತರಹೇವಾರಿ ಹಣ್ಣಿನಗಿಡ ,ರಕ್ತಚಂದನ ಮತ್ತು ಸಾಗುವಾನಿ ಗಿಡಗಳನ್ನು ನೆಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next