ಶಿರ್ವ: ಕಟಪಾಡಿ – ಶಿರ್ವ ಮುಖ್ಯರಸ್ತೆಯ ನ್ಯಾರ್ಮ ಸೊಸೈಟಿ ಬಳಿ ರಿಕ್ಷಾವೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಯುವಕರಿಬ್ಬರು ಗಂಭೀರ ಗಾಯಗೊಂಡ ಘಟನೆ ಮಾ.23ರ ಮಧ್ಯಾಹ್ನ 3-30ರ ವೇಳೆಗೆ ನಡೆದಿದೆ.
ಕಟಪಾಡಿ ಕಡೆಯಿಂದ ಶಿರ್ವದೆಡೆಗೆ ಬರುತ್ತಿದ್ದ ಬೈಕ್ ಸವಾರರಿಗೆ ಶಿರ್ವ ಕಡೆಯಿಂದ ತೆರಳುತ್ತಿದ್ದ ರಿಕ್ಷಾ ಢಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ರಿಕ್ಷಾ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆೆ. ಗಂಭೀರ ಗಾಯಗೊಂಡ ಯುವಕರನ್ನು ಸ್ಥಳೀಯರು ಸೇರಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡ ಯುವಕರು ಅನ್ಯ ರಾಜ್ಯದ ಕಾರ್ಮಿಕರು ಎನ್ನಲಾಗಿದ್ದು,ಹೆಚ್ಚಿನ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.
ಇದನ್ನೂ ಓದಿ: ದನದ ಕುತ್ತಿಗೆ ಕಡಿದು ತುಂಗಾ ನದಿಗೆ ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು !