ಶಿರ್ವ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನಿರ್ದೇಶನದಂತೆ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನತೆ ಭಯಮುಕ್ತವಾಗಿ ನಿರ್ಭೀತಿಯಿಂದ ಮತದಾನ ನಡೆಸಬೇಕಾಗಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ಸಲುವಾಗಿ ಶಾಂತಿಯುತ ವಾತಾವರಣ ಕಲ್ಪಿಸಲು ಪೊಲೀಸ್ ಇಲಾಖೆ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಯ ಯೋಧರು ಸನ್ನದ್ಧ ರಾಗಿದ್ದಾರೆ.ಈ ನಿಟ್ಟಿನಲ್ಲಿ ಶಿರ್ವ ಪರಿಸರದ ಜನತೆಯಲ್ಲಿ ಆತ್ಮ ವಿಶ್ವಾಸ ಮೂಡಿಸುವ ಸಲುವಾಗಿ ಚುನಾವಣಾ ಪೂರ್ವಭಾವಿಯಾಗಿ ಪಥ ಸಂಚಲನ ನಡೆಸಲಾಗಿದೆ ಎಂದು ಕಾರ್ಕಳ ಎಎಸ್‌ಪಿ ಕೃಷ್ಣಕಾಂತ್ ತಿಳಿಸಿದರು.
ಬುಧವಾರ ಉಡುಪಿ ಜಿಲ್ಲಾ ಕಾಪು ಉಪವಿಭಾಗದ ಕಾಪು ಪೊಲೀಸ್ ವೃತ್ತ ವ್ಯಾಪ್ತಿಯ ಶಿರ್ವ-ಮಂಚಕಲ್ ಪೇಟೆಯಲ್ಲಿ ಸಶಸ್ತ್ರಧಾರಿ ಕ್ಷಿಪ್ರ ಕಾರ್ಯಾಚರಣೆ ಪಡೆಯ ಯೋಧರು ಮತ್ತು ಉಡುಪಿ ಸಬ್‌ಡಿವಿಜನ್‌ನ ಪೊಲೀ ಸ್ ಸಿಬಂದಿಯೊಂದಿಗೆ ಪಥ ಸಂಚಲನ ನಡೆಸಿ ಅವರು ಮಾಹಿತಿ ನೀಡಿದರು.
ಪಥ ಸಂಚಲನದಲ್ಲಿ ಸುಮಾರು 50ಯೋಧರು ಸಶಸ್ತ್ರಧಾರಿಗಳಾಗಿ ಮತ್ತು 200ಕ್ಕೂ ಹೆಚ್ಚು ಪೊಲೀಸ್ ಸಿಬಂದಿ ಭಾಗವಹಿಸಿದ್ದರು. ಶಿರ್ವ ಸಂತ ಮೇರಿ ಕಾಲೇಜ್ ಸರ್ಕಲ್‌ನಿಂದ ಪೆಟ್ರೋಲ್‌ಬಂಕ್‌ಗಾಗಿ ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆಯವರೆಗೆ ಪಥ ಸಂಚಲನ ನಡೆಯಿತು.
ಕಾಪು ವೃತ್ತ ನಿರೀಕ್ಷಕ ಶಾಂತಾರಾಮ್, ಕಾರ್ಕಳ ಟೌನ್ ಪಿಎಸ್‌ಐ ನಂಜ ನಾಯ್ಕ,ಗ್ರಾಮಾಂತರ ಪಿಎಸ್‌ಐ ನಾಸಿರ್ ಹುಸೇನ್,ಅಜೆಕಾರು ಪಿಎಸ್‌ಐ ಉಮೇಶ್ ಪಾವಸ್ಕರ್,ಕಾಪು ಪಿಎಸ್‌ಐ ನವೀನ್ ನಾಯ್ಕ, ಕ್ರೈಂ ಎಸ್‌ಐ ಜಾನಕಿ,ಕ್ಷಿಪ್ರ ಕಾರ್ಯಾಚರಣೆ ಪಡೆಯ ಇನ್ಸ್ ಪೆಕ್ಟರ್ ಆನಂದ ಕುಮಾರ್, ಸಬ್ ಇನ್ಸ್‌ಪೆಕ್ಟರ್ ಸಹದೇವ್, ಶಿರ್ವ ಪಿಎಸ್‌ಐ. ಅಬ್ದುಲ್ ಖಾದರ್, ಪಡುಬಿದ್ರಿ ಪಿಎಸ್‌ಐ. ಸತೀಶ್, ಮತ್ತು ಉಡುಪಿ ಉಪ ವಿಭಾಗದ ಪೊಲೀಸ್ ಅಧಿಕಾರಿಗಳು, ಸಿಬಂದಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.