ಶಿರ್ವ: ಪತಂಜಲಿ ಯೋಗ ಪೀಠ ಹರಿದ್ವಾರ, ಪತಂಜಲಿ ಯೋಗ ಸಮಿತಿ ಶಿರ್ವ ಮತ್ತು ಉಡುಪಿ,ಶಿರ್ವ ಮಹಿಳಾ ಮಂಡಲ, ಕುತ್ಯಾರು ಯುವಕ ಮಂಡಲ ಹಾಗೂ ಪರಿಸರದ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಂಗಳವಾರ ರಥಸಪ್ತಮಿ ದಿನದಂದು ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆಯ ಬಳಿ ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ ನಡೆಯಿತು.
ಪತಂಜಲಿ ಭಾರತ್ ಸ್ವಾಭಿಮಾನ್ ಟ್ರಸ್ಟ್‌ನ ರಾಜ್ಯ ಸಹ ಪ್ರಭಾರಿ ಡಾ|ಜ್ಞಾನೇಶ್ವರ್ ನಾಯಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸೂರ್ಯ ನಮಸ್ಕಾರ ಯಜ್ಞದ ಬಗ್ಗೆ ಮಾತನಾಡಿ ಸೂರ್ಯಜಯಂತಿಯ ರಥಸಪ್ತಮಿ ದಿನದಂದು ಸೂರ್ಯ ನಮಸ್ಕಾರ ಮಾಡುವುದರಿಂದ ದಾರಿದ್ರÂ ನಿವಾರಣೆಯಾಗಿ ವಿಶೇಷ ಪುಣ್ಯ ಫಲಪ್ರಾಪ್ತಿಯಾಗುತ್ತದೆ. ಸೂರ್ಯ ನಮಸ್ಕಾರವನ್ನು ಆರೋಗ್ಯದ ದೃಷ್ಟಿಯಿಂದ ಪ್ರತಿದಿನವೂ ಮನೆಯಲ್ಲಿ ಮುಂದುವರಿಸುವ ಪ್ರಯತ್ನ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರಿಸರದ ಸಮಾಜ ಸೇವಕ ಜೋನ್ ಡಿ’ಲೀಮಾ ಕುತ್ಯಾರು ಮತ್ತು ಕು| ಪೂಜಾಶ್ರೀ ಶೆಟ್ಟಿ ಕುರ್ಕಾಲು ಅವರನ್ನು ಶಿರ್ವ ಪತಂಜಲಿ ಯೋಗ ಸಮಿತಿಯ ವತಿಯಿಂದ ಸಮ್ಮಾನಿಸಲಾಯಿತು.
ಶಿರ್ವ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಅರ್ಚಕ ರಘುರಾಮ ಭಟ್, ಪೊಲೀಸ್ ಠಾಣಾಧಿಕಾರಿ ಅಬ್ದುಲ್ ಖಾದರ್, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಶ್ರೀಪತಿ ಕಾಮತ್, ಮಾಜಿ ಅಧ್ಯಕ್ಷ ಕೆ. ಸುಂದರ ಪ್ರಭು,ಡಾ| ಪ್ರಕಾಶಾತ್ಮ ಬೆಳ್ಮಣ್, ರಮೇಶ್ ರಾವ್ ಸೂಡಾ,ದಯಾನಂದ ಶೆಣೈ ಮುಂಬೈ,ಆಶಿಷ್ ಪಾಟ್ಕರ್, ವಿದ್ವಾನ್ ಶಂಭುದಾಸ್ ಗುರೂಜಿ,ಪತಂಜಲಿ ಯೋಗ ಸಮಿತಿಯ ಲ್ಯಾನ್ಸಿ ಕೋರ್ಡಾ, ಮಹಿಳಾ ಮಂಡಲದ ಅಧ್ಯಕ್ಷೆ ಬಬಿತಾ ಅರಸ್, ಕಾರ್ಯಕ್ರಮ ಸಂಘಟಕ ಅನಂತ್ರಾಯ ಶೆಣೈ, ಡಾ| ಗುರುರಾಜ ಭಟ್‌ಹಾಗೂ ಪರಿಸರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
200ಕ್ಕೂ ಮಿಕ್ಕಿ ಜನರು ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞದಲ್ಲಿ ಭಾಗವಹಿಸಿದರು. ಕು| ಪೂಜಾಶ್ರೀ ಶೆಟ್ಟಿ ಕುರ್ಕಾಲು ಅವರಿಂದ ಯೋಗ ಪ್ರದರ್ಶನ ನಡೆಯಿತು. ಯೋಗ ಶಿಕ್ಷಕ ರಾಧಾಕೃಷ್ಣ ಪ್ರಭು ,ಲ್ಯಾನ್ಸಿ ಕೋರ್ಡಾ ಮತ್ತು ವೈಷ್ಣವಿ ಶೆಣೈ ಅವರ ಸೂರ್ಯನಮಸ್ಕಾರದ ಮಂತ್ರೋಚ್ಛಾರಗಳೊಂದಿಗೆ ನೆರವೇರಿತು.