ಶಿರ್ವ: ಇಲ್ಲಿನ ಆರೋಗ್ಯ ಮಾತಾ ಚರ್ಚ್‌ನ ಅಧೀನದಲ್ಲಿರುವ ಇರ್ಮಿಜ್ (ಶೋಕಮಾತೆ ಅಮ್ಮನವರ)ಚರ್ಚ್‌ನ ವಾರ್ಷಿಕ ಮಹೋತ್ಸವವು (ಸಾಂತ್‌ಮಾರಿ) ಬುಧವಾರ ಪವಿತ್ರ ಬಲಿಪೂಜೆಯೊಂದಿಗೆ ಸಂಪನ್ನಗೊಂಡಿತು.
ಮಂಗಳವಾರ ರಾತ್ರಿ ಸರ್ವ ಧರ್ಮದ ಭಕ್ತರು ಶೋಕ ಮಾತೆಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿ ತಮ್ಮ ಸಂಕಷ್ಟ ನಿವಾರಣೆಗಾಗಿ ಮೊಂಬತ್ತಿ ಉರಿಸಿ ಹರಕೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಬುಧವಾರ ಪಲಿಮಾರು ಚರ್ಚಿನ ಧರ್ಮಗುರು ರೆ|ಫಾ| ಜೆರಾಲ್ಡ್ ಸಂದೀಪ್ ಡಿಮೆಲ್ಲೋ ಅವರ ನೇತೃತ್ವದಲ್ಲಿ ವಾರ್ಷಿಕ ಮಹೋತ್ಸವದ ಪವಿತ್ರ ಬಲಿಪೂಜೆ ನಡೆಯಿತು.
ಅತಿಥಿ ಗುರುಗಳಾದ ರೆ|ಫಾ| ಲೂವಿಸ್ ವಾಜ್, ಶಿರ್ವ ಆರೋಗ್ಯ ಮಾತೆಯ ದೇವಾಲಯದ ಪ್ರಧಾನ ಧರ್ಮಗುರು ರೆ|ಫಾ|ಡಾ|ಲೆಸ್ಲಿ ಡಿಸೋಜಾ, ಸಹಾಯಕ ಧರ್ಮಗುರುಗಳಾದ ರೆ|ಫಾ| ರೋಲ್ವಿನ್ ಅರಾನ್ಹಾ ಮತ್ತು ರೆ|ಫಾ|ಸ್ಟೀವನ್ ನೆಲ್ಸನ್ ಪೆರಿಸ್, ಡಾನ್ ಬೊಸ್ಕೊ ಯೂತ್ ಸೆಂಟರ್‌ನ ಎಸ್‌ಡಿಪಿ ಫಾ| ಮೆಲ್ವಿನ್ ಬಲಿ ಪೂಜೆಯಲ್ಲಿ ಭಾಗವಹಿಸಿದ್ದರು.
ಶಿರ್ವ ಆರೋಗ್ಯ ಮಾತಾ ದೇವಾಲಯದ ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ಅರಾನ್ಹಾ, ಕಾರ್ಯದರ್ಶಿ ಪ್ಲೇವಿಯಾ ಡಿಸೋಜಾ,20 ಆಯೋಗದ ಸಂಚಾಲಕಿ ಲೀನಾ ಮಚಾದೋ,ಇರ್ಮಿಜ್ ಚರ್ಚ್ ಸಮಿತಿಯ ಸಂಚಾಲಕ ಡಾ| ಗೆùನಲ್ ಡಿಮೆಲ್ಲೋ, ಶಿರ್ವ ಚರ್ಚ್‌ಪಾಲನ ಮಂಡಳಿಯ ಸದಸ್ಯರು,ಆರ್ಥಿಕ ಮಂಡಳಿಯ ಸದಸ್ಯರು, ವಾಡೆಗಳ ಗುರಿಕಾರರು ಹಾಗೂ ಶಿರ್ವ ವಲಯದ ವಿವಿಧ ಚರ್ಚುಗಳ ಧರ್ಮಗುರುಗಳು, ಧರ್ಮಭಗಿನಿಯರು, ಭಕ್ತರು ಉಪಸ್ಥಿತರಿದ್ದರು.