ಶಿರ್ವ: ಇಲ್ಲಿನ ಹಿಂದೂ ಜೂನಿಯರ್ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವತಿಯಿಂದ ವಿದ್ಯಾರ್ಥಿಗಳ ದತ್ತು ಸ್ವೀಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವು ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿಗಾರ್ ಅವರ ಅಧ್ಯಕ್ಷತೆಯಲ್ಲಿ ಸೆ. 11 ರಂದು ಕಾಲೇಜಿನ ಮುದ್ದು ಶೆಟ್ಟಿ ಸಭಾಂಗಣದಲ್ಲಿ ನಡೆಯಿತು.
ಶಿರ್ವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿವಿ. ಸುಬ್ಬಯ್ಯ ಹೆಗ್ಡೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ಮುಂಬಯಿ ಬಂಟ್ಸ್ ಸಂಘದ ಕೋಶಾಧಿಕಾರಿ ಶಶಿಧರ ಶೆಟ್ಟಿ ಇನ್ನಂಜೆ ,ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‌ನ ನಿವೃತ್ತ ವ್ಯವಸ್ಥಾಪಕ ಧರ್ಮಾನಂದ ನಾಯಕ್ ಮತ್ತು ಹಳೆವಿದ್ಯಾರ್ಥಿ ಸಂಘದ ಮುಂಬಯಿ ಘಟಕದ ಗೌರವಾಧ್ಯಕ್ಷ ಖಾಂದೇಶ್ ಭಾಸ್ಕರ ಶೆಟ್ಟಿ ಮಾತನಾಡಿದರು.
ಹಳೆವಿದ್ಯಾರ್ಥಿ ರಾಧೇಶ್ ನಂಬಿಯಾರ್ ನೀಡಿದ 1 ಲ.ರೂ. ದತ್ತಿನಿಧಿ,ಸಂಗೀತಾ ಶೆಟ್ಟಿ ರೂ. 25,000/-, ಸಂತೋಷ್ ಶೆಟ್ಟಿ ರೂ.33,000/-, ಶಕೀಲಾ ಹೆಗ್ಡೆ ರೂ.30,000/-ಹಾಗೂ ಜ್ಯೋತಿ ಸದಾನಂದ ಶೆಟ್ಟಿ ನೀಡಿದ ರೂ.25,000/- ವಿದ್ಯಾರ್ಥಿ ವೇತನವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಹಳೆವಿದ್ಯಾರ್ಥಿಗಳಿಂದ ಸಂಗ್ರಹಿಸಿದ 3.53 ಲ. ರೂ.ಗಳನ್ನು ಪ್ರತಿಭಾ ಪುರಸ್ಕಾರ ಮತ್ತು ಕ್ರೀಡಾಕೂಟದ ನೆರವಿಗೆ ಹಳೆವಿದ್ಯಾರ್ಥಿ ಸಂಘದ ವತಿಯಿಂದ ದೇಣಿಗೆಯಾಗಿ ನೀಡಲಾಯಿತು.
ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ|ವೈ. ಭಾಸ್ಕರ ಶೆಟ್ಟಿ,ನಿವೃತ್ತ ಪ್ರಾಂಶುಪಾಲ ರಾಜ್ ಗೋಪಾಲ್ ಕೆ. ಶುಭ ಹಾರೈಸಿದರು. ಹಳೆವಿದ್ಯಾರ್ಥಿ ಸಂಘದ ಮುಂಬೈ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸೊರ್ಕಳ,ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ, ಗೌರವ ಸಲಹೆಗಾರ ಕುತ್ಯಾರು ಕಿಶೋರ್ ಕುಮಾರ್ ಶೆಟ್ಟಿ , ಸಂಸ್ಥೆಯ ಪ್ರಾಂಶುಪಾಲ ಭಾಸ್ಕರ ಎ. ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಸಂತಿ ಬಾಯಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು, ಕಾಲೇಜಿನ ಸಹ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕವೃಂದ, ಹಳೆವಿದ್ಯಾರ್ಥಿ ಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಹಳೆ ವಿದ್ಯಾರ್ಥಿ ಸಂಘದ ಪೂರ್ವಾಧ್ಯಕ್ಷ ಕುತ್ಯಾರು ಪ್ರಸಾದ್‌ಶೆಟ್ಟಿ ಪ್ರಸ್ತಾವನೆಗೈದರು.ನೋರ್ಬರ್ಟ್ ಮಚಾದೋ ವಿದ್ಯಾರ್ಥಿ ವೇತನ,ಕುತ್ಯಾರು ನವೀನ್ ಶೆಟ್ಟಿ ಪ್ರತಿಭಾ ಪುರಸ್ಕಾರ ಮತ್ತು ಕೋಶಾಧಿಕಾರಿ ಉಮೇಶ್ ಆಚಾರ್ಯ ದಾನಿಗಳ ಪಟ್ಟಿ ವಾಚಿಸಿದರು.ಸುಶ್ಮಿತಾ ಶೆಟ್ಟಿ ಮತ್ತು ಫೆಲಿಕ್ಸ್ ಡಿಸೋಜಾ ಅತಿಥಿ ಪರಿಚಯ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿಗಾರ್ ಸ್ವಾಗತಿಸಿದರು. ಸುಪ್ರಿತಾ ಶೆಟ್ಟಿ ಮತ್ತು ಪ್ರಶಾಂತ್ ಬಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಡೇವಿಡ್ ಮಥಾಯಸ್ ವಂದಿಸಿದರು.